ಜನವರಿ 27ಕ್ಕೆ ಡೆಡ್​​ಲೈನ್, ಮಿಸ್​ ಆದ್ರೆ ಆರ್​ಸಿಬಿಗೆ ಭಾರೀ ಲಾಸ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದ್ಯಾಕೋ ಟೈಮೇ ಸರಿ ಇಲ್ಲ. ಐಪಿಎಲ್ ಆರಂಭಕ್ಕೂ ಮುನ್ನ ಪದೇ ಪದೇ ಯಡವಟ್ಟು ಮಾಡಿಕೊಳ್ತಿರುವ ಆರ್​ಸಿಬಿ, ಇದೀಗ ಮತ್ತೊಂದು ಸಮಸ್ಯೆಗೆ ಸಿಲುಕಿಕೊಂಡಿದೆ. ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಉದ್ಘಾಟನಾ ಪಂದ್ಯ ಮಿಸ್ ಮಾಡಿಕೊಳ್ಳೋ ಸಾಧ್ಯತೆ ಹೆಚ್ಚಿದೆ.

author-image
Ganesh Kerekuli
RCB
Advertisment
  • ಚಿನ್ನಸ್ವಾಮಿಯಲ್ಲಿ IPL ಉದ್ಘಾಟನಾ ಪಂದ್ಯ ಡೌಟ್..?
  • ಓಪನಿಂಗ್ ಪಂದ್ಯವನ್ನ ಮಿಸ್ ಮಾಡಿಕೊಳ್ಳುತ್ತಾ RCB..?
  • ಆ 2 ರಾಜ್ಯಗಳಲ್ಲಿ ಐಪಿಎಲ್ ಉದ್ಘಾಟನೆಯಾಗುತ್ತಾ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದೆ. ಈ ಬಾರಿ ಆರ್​ಸಿಬಿ ಹೈಡ್​ಲೈನ್ ಆಗ್ತಿರೋದು ನೆಗೆಟಿವ್ ವಿಚಾರಕ್ಕೆ. ಹೋಂ ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳನ್ನ ಆಡಲು ಹಿಂದೇಟು ಹಾಕ್ತಿರುವ ಬೆಂಗಳೂರು ತಂಡ, ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. 18 ವರ್ಷಗಳ ಕಾಲ ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿಯಲ್ಲಿ ಆಡಿ ಅಪಾರ ಅಭಿಮಾನಿಗಳನ್ನ ಸಂಪಾಧಿಸಿದ್ದ ಆರ್​ಸಿಬಿ ಇದೀಗ ಬೆಂಗಳೂರನ್ನ ಬಿಡಲು ಮುಂದಾಗಿದೆ.ಇದ್ರಿಂದ ರಾಜ್ಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗ್ತಿದೆ.

ಚಿನ್ನಸ್ವಾಮಿಯಲ್ಲಿ IPL ಉದ್ಘಾಟನಾ ಪಂದ್ಯ ಡೌಟ್..?

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಐಪಿಎಲ್ ಆತಿಥ್ಯಕ್ಕೆ ಭರ್ಜರಿ ಸಿದ್ದತೆ ನಡೆಸಿಕೊಳ್ತಿದೆ. ಆದ್ರೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮಾತ್ರ, ಚಿನ್ನಸ್ವಾಮಿಯಲ್ಲಿ ಆಡಲು ನಿರಾಕರಿಸುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಕೆಎಸ್​ಸಿಎ ಪದಾಧಿಕಾರಿಗಳು, ಚಿನ್ನಸ್ವಾಮಿಯಲ್ಲಿ ಐಪಿಎಲ್ ಮತ್ತು ಅಂತರಾಷ್ಟ್ರೀಯ ಪಂದ್ಯಗಳನ್ನ ಆಯೋಜಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಹ ಪಡೆದಿದ್ದಾರೆ. ಆದ್ರೀಗ ಎಲ್ಲಾ ಸರಿ ಹೋದ ಮೇಲೆ ಆರ್​ಸಿಬಿ ಚಿನ್ನಸ್ವಾಮಿಯಲ್ಲಿ ಆಡಲು ನಿರಾಕರಿಸುತ್ತಿರೋದು, ಕೆಎಸ್​​ಸಿಎ ಪದಾಧಿಕಾರಿಗಳಿಗೆ ಭಾರೀ ಆಘಾತ ಉಂಟಾಗಿದೆ. ಇದ್ರಿಂದ ಬೆಂಗಳೂರಿಗೆ  IPL ಉದ್ಘಾಟನಾ ಪಂದ್ಯ ಕೈತಪ್ಪೋ ಸಾಧ್ಯತೆ ಕೂಡ ಹೆಚ್ಚಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ 2027ರ ಜನಗಣತಿಗೆ ಪ್ರಶ್ನಾವಳಿ ಸಿದ್ದ : ಪ್ರಶ್ನಾವಳಿಗಳ ಗೆಜೆಟ್ ಅಧಿಸೂಚನೆ ಪ್ರಕಟ

ಬಿಸಿಸಿಐ ಮತ್ತು ಐಪಿಎಲ್​​​ ಗವರ್ನಿಂಗ್ ಕೌನ್ಸಿಲ್​​ನಲ್ಲಿ ನಡೆದ ಸಭೆಯಲ್ಲಿ, ಬಿಗ್​ಬಾಸ್​ಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆರ್​ಸಿಬಿಗೆ, ಚಿನ್ನಸ್ವಾಮಿಯಲ್ಲೇ ಆಡಲು ಕಿವಿ ಮಾತನ್ನೂ ಹೆಳಿದ್ದಾರೆ ಎನ್ನಲಾಗಿದೆ. ಕೆಎಸ್​ಸಿಎ ಮತ್ತು ಆರ್​ಸಿಬಿ ಮ್ಯಾನೇಜ್ಮೆಂಟ್ ಕುಳಿತು ಚರ್ಚಿಸುವಂತೆ ಸಲಹೆ ಕೂಡ ನೀಡಲಾಗಿದೆ. ಆದ್ರೆ ಆರ್​ಸಿಬಿ, ಒಂದಲ್ಲ ಒಂದು ಕಾರಣ ನೀಡಿ ಬೆಂಗಳೂರಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಎಲ್ಲಾ ಬೆಳವಣಿಗಳ ನಡುವೆ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಮ್ ಅಥವಾ ಪಂಜಾಬ್​​ನ ಮುಲ್ಲನ್​ಪುರದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ಆಯೋಜಿಸಲು, ಬಿಸಿಸಿಐ ಪ್ಲಾನ್ ಮಾಡ್ತಿದೆ. 

ಬೆಂಗಳೂರಿನ ಚಿನ್ನಸ್ವಾಮಿ ಬಗ್ಗೆ ನಿರಾಸಕ್ತಿ ತೋರಿದ ಬೆನ್ನಲೆ ಬಿಸಿಸಿಐ, ಆರ್​ಸಿಬಿ ಫ್ರಾಂಚೈಸಿಗೆ ಸಲಹೆಯೊಂದನ್ನ ನೀಡಿದೆ. ಪಕ್ಕದ ರಾಜ್ಯ ಕೇರಳದ ತಿರುವನಂತಪುರಂನಲ್ಲಿ ಐಪಿಎಲ್ ಪಂದ್ಯಗಳನ್ನ ಆಡುವಂತೆ ಆರ್​ಸಿಬಿಗೆ ಸಜೆಷನ್ ನೀಡಿತ್ತು. ಅಕ್ಕಾಪಕ್ಕದ ರಾಜ್ಯಗಳಿಂದ ಕ್ರಿಕೆಟ್ ಅಭಿಮಾನಿಗಳು, ಆರ್​ಸಿಬಿಗೆ ಬೆಂಬಲಿಸಲು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ ಅಂತ ಬಿಗ್​ಬಾಸ್​ಗಳು ಈ ಐಡಿಯಾ ನೀಡಿದ್ರು. ಆದ್ರೆ ಬಿಗ್​ಬಾಸ್​ಗಳ ಐಡಿಯಾವನ್ನ, ಆರ್​ಸಿಬಿ ಫ್ರಾಂಚೈಸಿ ಮುಲಾಜಿಲ್ಲದೇ ತಿರಸ್ಕರಿಸಿದೆ.  

ಇದನ್ನೂ ಓದಿ:ದಾರುಣ ಘಟನೆ.. KSRTC ಬಸ್ ಹರಿದು ಕಣ್ಣು ಮುಚ್ಚಿದ 4 ವರ್ಷದ ಪುಟಾಣಿ..

RCB (1)

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ, ಚಿತ್ತಿಸ್​ಗಢದ ರಾಜಧಾನಿ ರಾಯ್​ಪುರ್​ನಲ್ಲೇ ಐಪಿಎಲ್​​​​​​​​​ನ ಉದ್ಘಾಟನಾ ಪಂದ್ಯ ಸೇರಿದಂತೆ, ಮೊದಲೆರಡು ಪಂದ್ಯಗಳನ್ನ ಆಡಲು ಭಾರೀ ಉತ್ಸಾಹ ತೋರುತ್ತಿದೆ. ಬಿಸಿಸಿಐಗೆ ಈ ವೆನ್ಯೂ ಸ್ವಲ್ಪವೂ ಇಷ್ಟವೇ ಇಲ್ಲ. ಯಾಕಂದ್ರೆ NON-METRO ಸಿಟಿಯಲ್ಲಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಪಂದ್ಯಗಳನ್ನ ಆಡಿಸಲು, ಬಿಸಿಸಿಐಗೆ ಮನಸ್ಸಿಲ್ಲ. ಹಾಗಾಗಿ ಮಂಡಳಿ, ಆರ್​ಸಿಬಿಗೆ ರಾಯ್​​ಪುರ್​ನಿಂದ ಬೇರೆಡೆ ಶಿಫ್ಟ್ ಆಗುವಂತೆ ಸಲಹೆ ನೀಡುತ್ತಿದೆ.  

ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ವೆಸ್ಟ್ ಬೆಂಗಾಲ್​ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆದ್ರೆ ಬಿಸಿಸಿಐ, ಚುನಾವಣಾ ದಿನಾಂಕ ಪ್ರಕಟಗೊಂಡ ನಂತರ, ಐಪಿಎಲ್ ಶೆಡ್ಯೂಲ್ ರಿಲೀಸ್ ಮಾಡಲು ಕಾಯುತ್ತಿದೆ. ಸದ್ಯ ಆರ್​ಸಿಬಿಗೆ ಇದೇ ತಿಂಗಳು 27ರವರೆಗೆ ಹೋಂ ಗ್ರೌಂಡ್ ಆಯ್ಕೆ ಮಾಡಿಕೊಳ್ಳಲು ಡೆಡ್​​ಲೈನ್ ನೀಡಿದೆ. ಒಂದು ವೇಳೆ ಆರ್​ಸಿಬಿ ಇದೇ ಗೊಂದಲವನ್ನ ಮುಂದುವರೆಸಿದ್ರೆ, ಮುಂದೆ ಬಿಸಿಸಿಐ ಹೇಳಿದ ಸ್ಥಳದಲ್ಲಿ ಆರ್​ಸಿಬಿ ಆಡಬೇಕು. 

ಆರ್​ಸಿಬಿ, ಬೆಂಗಳೂರು ಬಿಟ್ಟು ಹೋಗುವ ಮನಸ್ಸು ಮಾಡ್ತಿರೋದು ಕಂಡಿತ ಸರಿ ಅಲ್ಲ..! ಒಂದು ವೇಳೆ ಹೋಗಲೇಬೇಕು ಅಂತ ತೀರ್ಮಾನಿಸಿದ್ದೇ ಅದ್ರೆ, 18 ವರ್ಷಗಳ ಕಾಲ ಆರ್​ಸಿಬಿ ಫ್ರಾಂಚೈಸಿಯನ್ನ ಬೆಳೆಸಿರುವ ಅಭಿಮಾನಿಗಳಿಗೆ, ದ್ರೋಹ ಬಗೆದಂತೆ..! ಹಾಗೆ ಆಗದಿರಲಿ ಅನ್ನೋದು, ರಾಜ್ಯದ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಆಶಯ.

ಇದನ್ನೂ ಓದಿ: ಮನರೇಗಾ ಯೋಜನೆ ಬದಲಾವಣೆ ವಿರೋಧಿಸಿ ತಮಿಳುನಾಡು ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB IPL 2026
Advertisment