/newsfirstlive-kannada/media/media_files/2026/01/23/lauren-bell-12-2026-01-23-15-34-55.jpg)
ಮಾದಕ ನೋಟ, ಮೋಹಕ ಮೈಮಾಟ, ಆನ್​​ಫೀಲ್ಡ್​ನಲ್ಲಿ ಸಖತ್​ ಆಟ. 25 ವರ್ಷದ ಈ ಸುಂದರಿ ಕ್ರಿಕೆಟ್​ ಲೋಕದ ನಯಾ ಕ್ರಶ್​. ಅಭಿಮಾನಿಗಳಂತೂ ಈಕೆಯೇ ಸ್ಮೈಲ್​​​ಗೆ, ವೈಯಾರಕ್ಕೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ನಾವ್​​ ಹೇಳ್ತಿರೋದು ಆರ್​​​​ಸಿಬಿಯ ನಯಾ ಸೆನ್ಸೇಷನ್​​ ಲಾರೆನ್​ ಬೆಲ್​ ಬಗ್ಗೆ.
'WHAT A BEAUTY' ಲಾರೆನ್​ ಬೆಲ್​ ಫೀಲ್ಡ್​ನಲ್ಲಿದ್ದಾಗ ಫ್ಯಾನ್ಸ್​ ಹೇಳ್ತಾ ಇರೋ ಕಾಮನ್​ ಮಾತಾಗಿದೆ. ಹೀಗೆ ಹೇಳ್ತಿರೋದಕ್ಕೆ 2 ಕಾರಣವಿದೆ. ಒಂದು ಲಾರೆನ್​ ಬೆಲ್​ ಸೌಂದರ್ಯ, ಇನ್ನೊಂದು ಈಕೆಯ ಬೌಲಿಂಗ್​.! ಈಕೆಯ ಸೌಂದರ್ಯಕ್ಕೆ ಎಷ್ಟು ಮಂದಿ ಸೋತಿದ್ದಾರೋ.. ಹಾಗೆ ಈಕೆಯ ಆಟಕ್ಕೂ ಕ್ಲೀನ್​ ಬೋಲ್ಡ್​ ಆದವರಿದ್ದಾರೆ.
ಇದನ್ನೂ ಓದಿ: ದಾರುಣ ಘಟನೆ.. KSRTC ಬಸ್ ಹರಿದು ಕಣ್ಣು ಮುಚ್ಚಿದ 4 ವರ್ಷದ ಪುಟಾಣಿ..
/filters:format(webp)/newsfirstlive-kannada/media/media_files/2025/11/29/lauren-bell-5-2025-11-29-09-40-33.jpg)
ಕಬ್ಬನ್​ ಪಾರ್ಕ್​​ಗೆ ಬೆಲ್​ ‘ಬ್ರ್ಯಾಂಡ್​ ಅಂಬಾಸಿಡರ್’​
ಬೆಂಗಳೂರಿನ ಹೃದಯಭಾಗದಲ್ಲಿರೋ ಕಬ್ಬನ್​ ಪಾರ್ಕ್​ಗೆ ಲಾರೆನ್​ ಬೆಲ್​ನೇ ಬ್ರಾಂಡ್​​ ಅಂಬಾಸಿಡರ್​​ ಮಾಡಬೇಕು ಅನ್ನೋ ತಮಾಷೆಯ ಚರ್ಚೆ ನಡೀತಿದೆ. ಈ ಸೀಸನ್​ನಲ್ಲಿ ಆ ಮಟ್ಟಿಗೆ ಡಾಟ್​ ಬಾಲ್​ ಹಾಕ್ತಿದ್ದಾರೆ. ಈ ಸೀಸನ್​ನಲ್ಲಿ ಆಡಿದ 5 ಪಂದ್ಯಗಳಲ್ಲಿ ಲಾರೆನ್​ ಬೆಲ್​ 20 ಓವರ್​ ಬೌಲಿಂಗ್​ ಮಾಡಿದ್ದಾರೆ. ಈ ಪೈಕಿ 74 ಎಸೆತ ಅಂದ್ರೆ, 12.2 ಓವರ್​​ ಡಾಟ್​​ ಬಾಲ್​ಗಳನ್ನೇ ಹಾಕಿದ್ದಾರೆ. ಒಂದು ಡಾಟ್​ ಬಾಲ್​ಗೆ 50 ಸಸಿಗಳನ್ನ ನೆಡುವ ಕೆಲಸವನ್ನ ಬಿಸಿಸಿಐ ಮಾಡ್ತಿದೆ. ಲಾರೆನ್​ ಬೆಲ್​ ಈಗಾಗಲೇ 3700 ಗಿಡ ನೆಡುವಂತೆ ಮಾಡಿದ್ದಾರೆ.
ಪವರ್​​ ಪ್ಲೇನಲ್ಲೇ ಎದುರಾಳಿಗೆ ಪವರ್​​ಫುಲ್​ ಪಂಚ್!
ಟಿ20 ಗೇಮ್​ಗಳಲ್ಲಿ ಅದ್ರಲ್ಲೂ ಪವರ್​ ಪ್ಲೇನಲ್ಲಿ ನಡೆಯೋದು ಬ್ಯಾಟರ್​ ದರ್ಬಾರ್​ ಅನ್ನೋ ಮಾತನ್ನ ಲಾರೆನ್​ ಬೆಲ್​ ಸುಳ್ಳಾಗಿಸಿದ್ದಾರೆ. ಆರಂಭದಲ್ಲೇ ಎದುರಾಳಿಗಳಿಗೆ ಲಾರೆನ್​ ಬೆಲ್​ ಪವರ್​​ ಫುಲ್​ ಪಂಚ್​ ಕೊಡ್ತಿದ್ದಾರೆ. ಈವರೆಗೆ ಪವರ್​​ ಪ್ಲೇನಲ್ಲಿ 14 ಓವರ್​ ಬೌಲಿಂಗ್​ ಮಾಡಿರೋ ಬೆಲ್​, 5 ವಿಕೆಟ್​ ಕಬಳಿಸಿದ್ದಾರೆ. ಶೇಕಡಾ 75ರ ಡಾಟ್​ ಬಾಲ್​ ಪರ್ಸಂಟೇಜ್​ ಹೊಂದಿದ್ದಾರೆ.
ಇದನ್ನೂ ಓದಿ:ಸ್ಮೃತಿ ಮಂದಾನ ಜೊತೆ ಮದುವೆ ರದ್ದು ಬಳಿಕ ಪಲಾಶ್ ಮುಚ್ಚಾಲ್ ರಿಂದ ಮತ್ತೊಂದು ವಿವಾದ : ಹಣ ಕೊಡದೇ ವಂಚನೆ!
/filters:format(webp)/newsfirstlive-kannada/media/media_files/2025/11/29/lauren-bell-10-2025-11-29-09-34-32.jpg)
ಲಾರೆನ್​ ಬೆಲ್​ ಆರ್​​ಸಿಬಿ ಅಭಿಮಾನಿಗಳ ನಯಾ ಕ್ರಶ್​ ಆಗ್ಬಿಟ್ಟಿದ್ದಾರೆ. ಲಾರೆನ್​ ಆಟ, ಮೈಮಾಟಕ್ಕೆ ಫ್ಯಾನ್ಸ್​ ಹೃದಯದ ಬೆಲ್​ ಜೋರಾಗಿ ಬಡಿದುಕೊಳ್ತಿದೆ. ಇಂಗ್ಲೀಷ್​​​​ ಬ್ಯೂಟಿಯ ನಗು ಮತ್ತು ಫ್ಯಾಷನ್​ಗೆ ಮನಸೋತಿದ್ದಾರೆ. ಫ್ಯಾನ್ಸ್​ ಹಾರ್ಟ್​ ಬೀಟ್​ ಜಾಸ್ತಿ ಆಗ್ತಿರೋದನ್ನ ಇನ್ಸ್​​ಸ್ಟಾಗ್ರಾಂ ಫಾಲೋವರ್ಸ್​ ಸಂಖ್ಯೆಯೇ ಹೇಳ್ತಾಯಿದೆ.
1 ಲಕ್ಷದ 50 ಸಾವಿರದಿಂದ 1.8 ಮಿಲಿಯನ್​ಗೆ ಏರಿಕೆ
ಆರ್​​​ಸಿಬಿ ತಂಡ ಹರಾಜಿನಲ್ಲಿ ಖರೀದಿ ಮಾಡೋಕೂ ಮುನ್ನ 1 ಲಕ್ಷದ 50 ಫಾಲೋವರ್ಸ್​ ಇದ್ರು. ಆದ್ರೆ ಬೆಲ್ ಯಾವಾಗ ಹರಾಜಿನಲ್ಲಿ ಆರ್​ಸಿಬಿ ತಂಡದ ಪಾಲಾದಳೋ, ಅಲ್ಲಿಂದ ಬೆಲ್ ಕ್ರೇಜ್ ಸಹ ಶುರುವಾಯ್ತು.​​​​​​​​ ಮೊದಲ ಪಂದ್ಯ ಆಡಿದ 24 ಗಂಟೆಯೊಳಗೆ ಒಂದು ಲಕ್ಷ ಫಾಲೋವರ್ಸ್​ ಈಕೆಯ ಇನ್​ಸ್ಟಾಗೆ ಌಡ್ ಆಗಿದ್ರು. ಆರ್​​​ಸಿಬಿಗೆ ಬರೋಕೂ ಮುನ್ನ 1 ಲಕ್ಷದ 50 ಸಾವಿರ ಫಾಲೋವರ್ಸ್​ ಹೊಂದಿದ್ದ ಲಾರೆನ್​ ಬೆಲ್​ಗೆ ಈಗ 1.8 ಮಿಲಿಯನ್​ ಫಾಲೋವರ್ಸ್ ಅಂದ್ರೆ, 18 ಲಕ್ಷ ಫಾಲೋವರ್ಸ್​ ಇದ್ದಾರೆ.
ಅಭಿಮಾನಿಗಳ ಹೃದಯ ಗೆದ್ದಿದ್ದ ಚೆಲುವೆ ಆಸಿಸ್​ ಆಲ್​​ರೌಂಡರ್ ಎಲಿಸ್ ಪೆರ್ರಿ ಟೂರ್ನಿಗೆ ಅಲಭ್ಯರಾದಾಗ, ಆರ್​ಸಿಬಿ ತಂಡದ ಫ್ಯಾನ್ ಕ್ಲಬ್ ಕುಸಿಯಬಹುದು ಅಂತ ಹೇಳಲಾಗ್ತಿತ್ತು. ಈ ಬಾರಿ ಪೆರ್ರಿ ಇಲ್ಲಾ ಅಂತಾ ಫ್ಯಾನ್ಸ್​​ ಕೂಡ ಬೇಸರಗೊಂಡಿದ್ರು. ಆದ್ರೆ, ಎಲೀಸ್ ಪೆರ್ರಿ ಅಲಭ್ಯತೆಯನ್ನೂ ಬೆಲ್ ಮರೆಮಾಚಿಸಿದ್ದಾರೆ. ಜೊತೆಗೆ ​ಬೆಲ್ ಎಂಟ್ರಿಯಿಂದ ಬೆಂಗಳೂರು ತಂಡದ ಅಭಿಮಾನಿಗಳ ಸಂಖ್ಯೆಯೂ ಮತ್ತಷ್ಟು ಹೆಚ್ಚಿದೆ.
ಅಭಿಮಾನಿಗಳ ಮನದಲ್ಲಿ ಹಾಲ್ಗೆನ್ನೆ ಚೆಲುವೆ ತನ್ನ ಆಟ, ಮೈಮಾಟದಿಂದಲೇ ಕಿಚ್ಚು ಹಚ್ಚಿದ್ದಾರೆ. ಲಾರೆನ್ ಬೆಲ್ ಮುಂದಿನ ಪಂದ್ಯಗಳಲ್ಲೂ ಇದೇ ಆಟ ಮುಂದುವರೆಸಿದ್ರೆ, ಈ ಐಪಿಎಲ್​ ಮುಗಿಯೋದ್ರಲ್ಲಿ ನಿರೀಕ್ಷೆಗೂ ಮೀರಿದ ಅಭಿಮಾನಿಗಳನ್ನ ಸಂಪಾದಿಸೋದ್ರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:ಅಭಿಷೇಕ್ ಮುಂದೆ ದಾಖಲೆಗಳು ಶೇಕ್.. ಗುರುವನ್ನೇ ಮೀರಿಸಿದ ಶಿಷ್ಯ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us