ಮುಚ್ಚಲ್ ಮಹಿಳೆ ಜೊತೆ ಹಾಸಿಗೆಯಲ್ಲಿ ರೆಡ್​​ಹ್ಯಾಂಡ್ ಸಿಕ್ಕಿಬಿದ್ದಿದ್ದ! ಸ್ಮೃತಿ ಮಂದಾನ ಸ್ನೇಹಿತ ಗಂಭೀರ ಆರೋಪ

ಗಾಯಕ-ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ (Palash Muchhal) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟ-ನಿರ್ಮಾಪಕ ವಿಜ್ಞಾನ್ ಮಾನೆ (Vidnyan Mane), ಮಚ್ಚಲ್ ವಿರುದ್ಧ ಗಂಭೀರ ಆರೋಪಗಳನ್ನ ಹೊರಿಸಿದ್ದಾರೆ.

author-image
Ganesh Kerekuli
Palash Muchhal (1)
Advertisment

ಗಾಯಕ-ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ (Palash Muchhal) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟ-ನಿರ್ಮಾಪಕ ವಿಜ್ಞಾನ್ ಮಾನೆ (Vidnyan Mane), ಮಚ್ಚಲ್ ವಿರುದ್ಧ ಗಂಭೀರ ಆರೋಪಗಳನ್ನ ಹೊರಿಸಿದ್ದಾರೆ.

ಬಿಡುಗಡೆಯಾಗದ ಚಿತ್ರವೊಂದಕ್ಕೆ ಸಂಬಂಧಿಸಿ ಪಲಾಶ್, 40 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಾನೆ ದೂರು ದಾಖಲಿಸಿದ್ದಾರೆ. ತಾನು ಸ್ಮೃತಿ ಮಂದಾನ ಅವರ ಬಾಲ್ಯದ ಸ್ನೇಹಿತ. ಮಂದಾನ ಕುಟುಂಬದ ಮೂಲಕ ಪಲಾಶ್ ಅವರನ್ನು ಭೇಟಿಯಾದೆ ಎಂದು ಮಾನೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಜೆಡಿಎಸ್​​ ಬೆಳ್ಳಿ ಹಬ್ಬ! ಹಾಸನದಲ್ಲಿ ಇವತ್ತು ಬೃಹತ್​ ಸಮಾವೇಶ..!

Smriti mandana (1)

ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದರು..

ಪಲಾಶ್ ಮುಚ್ಚಲ್ 2025ರ ನವೆಂಬರ್‌ನಲ್ಲಿ ನಡೆದ ತಮ್ಮ ಮದುವೆ ಸಮಾರಂಭದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಬೆಡ್​​​ನಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ನಾನು ಅವರ ಮದುವೆಯಲ್ಲಿದ್ದೆ (ನವೆಂಬರ್ 23, 2025). ಆಗ ಆತ ಮತ್ತೊಬ್ಬ ಮಹಿಳೆಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ಅದು ದೃಶ್ಯ ಭಯಾನಕವಾಗಿತ್ತು.  ಭಾರತೀಯ ಮಹಿಳಾ ಕ್ರಿಕೆಟಿಗರು ಅವನನ್ನು ಹೊಡೆದರು. ಅವರ ಇಡೀ ಕುಟುಂಬವೇ ಕಳ್ಳರು. ಅವನು ಮದುವೆಯಾಗಿ ಸಾಂಗ್ಲಿಯಲ್ಲಿ ನೆಲೆಸುತ್ತಾನೆ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯ್ತು ಎಂದಿದ್ದಾರೆ. 

ವಿವಾದ ಏನು..? 

ಪಲಾಶ್ ಮತ್ತು ಅವರ ಕುಟುಂಬವನ್ನು ಒಳಗೊಂಡ ಚಿತ್ರದಲ್ಲಿ ₹40 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡಿದ್ದೇನೆ ಎಂದು ಮಾನೆ ಹೇಳಿದ್ದಾರೆ. 40 ಲಕ್ಷ ಹೂಡಿಕೆ ಮಾಡಿದ ನಂತರ ಮತ್ತೆ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಡ ಹೇರಿದರು. ಕಳೆದ ತಿಂಗಳು ನಾನು ಅವರ ತಾಯಿ (ಅಮಿತಾ ಮುಚ್ಚಲ್) ಅವರನ್ನು ಭೇಟಿಯಾದೆ. ಚಿತ್ರ ಬಿಡುಗಡೆಗೆ ಬಜೆಟ್ 1.5 ಕೋಟಿ ತಲುಪಿದೆ ಎಂದರು. ಹೆಚ್ಚುವರಿಯಾಗಿ ಇನ್ನೂ 10 ಲಕ್ಷ ಹೂಡಿಕೆ ಮಾಡುವಂತೆ ಕೇಳಿಕೊಂಡರು. ಇಲ್ಲದಿದ್ದರೆ ಹೂಡಿಕೆ ಮಾಡಿರುವ  ಹಣ ಸಿಗೋದಿಲ್ಲ ಎಂದು ಬ್ಲ್ಯಾಕ್ ಮೇಲ್ ಮಾಡಿದರು. ನನ್ನನ್ನು ಚಿತ್ರದಿಂದ ತೆಗೆದುಹಾಕುವುದಾಗಿಯೂ ಬೆದರಿಕೆ ಹಾಕಿದರು. ಆದ್ದರಿಂದ ನಾನು ದೂರು ದಾಖಲಿಸಿದೆ ಎಂದಿದ್ದಾರೆ. 

ಇದನ್ನೂ ಓದಿ: ಹುಬ್ಬಳ್ಳಿ CM ಕಾರ್ಯಕ್ರಮದಲ್ಲಿ ಭಾರೀ ಅವಘಡ.. ಕಟೌಟ್​ಗಳು ಬಿದ್ದು ನಾಲ್ವರು ಆಸ್ಪತ್ರೆ ಪಾಲು

Palash Muchhal (2)

ಮದುವೆ ರದ್ದಾದ ನಂತರ

ಮಂದಾನ ಮದುವೆ ರದ್ದಾದ ಬಳಿಕ ನನ್ನ ಕುಟುಂಬ ನನ್ನನ್ನು ಎಲ್ಲೆಡೆಯಿಂದ ನಿರ್ಬಂಧಿಸಿತು. ಚಿತ್ರದ ಇತರ ನಟರು ಸಹ ತಮ್ಮ ಸಂಭಾವನೆಯನ್ನು ಪಡೆದಿಲ್ಲ ಎಂದು ನನಗೆ ತಿಳಿದಿದೆ. ಚಲನಚಿತ್ರೋದ್ಯಮದಲ್ಲಿ ನಿರ್ಮಾಪಕರನ್ನು ನಿರ್ದೇಶಕರು ವಂಚಿಸಿದ್ದಾರೆ. ಇದು ಸಂಪೂರ್ಣ ಕಳ್ಳತನ. ನನಗೆ ಬೆದರಿಕೆಗಳು ಬರುತ್ತಿವೆ ಮತ್ತು ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದರೂ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಕಿಡಿಕಾಡಿದ್ದಾರೆ. 

ಸುಳ್ಳು ಎಂದ ಮುಚ್ಚಲ್

ಪಲಾಶ್ ಮುಚ್ಚಲ್ ಇನ್‌ಸ್ಟಾಗ್ರಾಮ್ ಕಥೆಯ ಮೂಲಕ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧ ಮಾಡಲಾದ ಎಲ್ಲಾ ಹಕ್ಕುಗಳು ಸುಳ್ಳು. ಸಾಂಗ್ಲಿಯ ವಿಜ್ಞಾನ್ ಮಾನೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಆರೋಪಗಳೆಲ್ಲ ಸುಳ್ಳು. ನನ್ನ ವಿರುದ್ಧದ ಆರೋಪಗಳು ಆಧಾರರಹಿತ. ವಾಸ್ತವಿಕವಾಗಿ ಸುಳ್ಳು. ನನ್ನ ಇಮೇಜ್‌ಗೆ ಕಳಂಕ ತರುವ ದುರುದ್ದೇಶಪೂರಿತ ಆರೋಪಗಳನ್ನು ಮಾಡಲಾಗಿದೆ. ಅದಕ್ಕೆ ನಾನು ಉತ್ತರ ನೀಡುತ್ತೇನೆ ಎಂದಿದ್ದಾರೆ. 

ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂದಾನ ವಿವಾಹವು ನವೆಂಬರ್ 23, 2025 ರಂದು ನಿಗದಿಯಾಗಿತ್ತು. ಆರಂಭದಲ್ಲಿ, ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಎರಡೂ ಕುಟುಂಬಗಳು ಮದುವೆಯನ್ನು ಮುಂದೂಡಿದವು. ನಂತರ ಡಿಸೆಂಬರ್ 2025ರಲ್ಲಿ ಅದನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ: ಶಿಕ್ಷಣ ‌ಇಲಾಖೆಯಿಂದ ಮಹತ್ವದ ಆದೇಶ.. ಶಿಕ್ಷಕರು, ಪೋಷಕರು ಓದಲೇಬೇಕಾದ ಸ್ಟೋರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

smriti mandhana Palash Muchhal
Advertisment