80,000 ರೂ ಮೌಲ್ಯದ ಗಿಳಿ ಮನೆಬಿಟ್ಟು ಹೋಯಿತು.. ಕಣ್ಣೀರು ಹಾಕುತ್ತ ಠಾಣೆಗೆ ಬಂದ ಯಜಮಾನ..!

ಡಾ.ಬಿ.ಆರ್.ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ (Dr. B.R. Ambedkar Konaseema district) ವಿಚಿತ್ರ ಘಟನೆ ನಡೆದಿದೆ. ಪ್ರೀತಿಯಿಂದ ಸಾಕಿದ್ದ ಗಿಳಿ ಕಾಣೆಯಾದ ನಂತರ ಮಾಲೀಕನೊಬ್ಬ ತೀವ್ರ ದುಃಖಿತನಾಗಿದ್ದಾನೆ, ಇದೀಗ ಅದನ್ನು ಹುಡುಕಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

author-image
Ganesh Kerekuli
parrot
Advertisment

ಡಾ.ಬಿ.ಆರ್.ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ (Dr. B.R. Ambedkar Konaseema district) ವಿಚಿತ್ರ ಘಟನೆ ನಡೆದಿದೆ. ಪ್ರೀತಿಯಿಂದ ಸಾಕಿದ್ದ ಗಿಳಿ ಕಾಣೆಯಾದ ನಂತರ ಮಾಲೀಕನೊಬ್ಬ ತೀವ್ರ ದುಃಖಿತನಾಗಿದ್ದಾನೆ, ಇದೀಗ ಅದನ್ನು ಹುಡುಕಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. 

ಜಿಲ್ಲೆಯ ಕತ್ರೇನಿಕೋನಾ ಮಂಡಲದ ಯುವಕನೊಬ್ಬ ಕಳೆದ 3 ವರ್ಷಗಳಿಂದ ಸಾಕಿದ್ದ ಗಿಳಿಯನ್ನು ಹುಡುಕಲು ಪೊಲೀಸರ ಸಂಪರ್ಕಿಸಿದ್ದಾನೆ. ಕತ್ರೇನಿಕೋನಾದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಕೊಥಪಾಲೆಂ ಗ್ರಾಮದ ನಿವಾಸಿ ಬಂಡಾರು ದೊರಬಾಬುಗೆ ಪಕ್ಷಿಗಳೆಂದರೆ ತುಂಬಾ ಇಷ್ಟ. ಹೀಗಾಗಿ ಮೂರು ವರ್ಷಗಳ ಹಿಂದೆ 80 ಸಾವಿರ ರೂಪಾಯಿ ನೀಡಿ, ಹೈದರಾಬಾದ್​ನಿಂದ ಮಾತನಾಡುವ ಗಿಳಿಯನ್ನ ಖರೀದಿಸಿದ್ದರು. 

ಗಿಳಿ ಖರೀದಿಸಿ ಮನೆಗೆ ತಂದ ಮೇಲೆ ಅದಕ್ಕೆ ಚಾರ್ಲಿ ಎಂದು ಹೆಸರಿಟ್ಟಿದ್ದರು. ಆ ಗಿಳಿ ಕುಟುಂಬಸ್ಥರ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಮನುಷ್ಯರ ಮಾತನ್ನ ಸ್ಪಷ್ಟವಾಗಿ ಅನುಕರಿಸುತ್ತಿತ್ತು. 

ಇದನ್ನೂ ಓದಿ:ನಾನ್-ವೆಜ್ ಪ್ರಿಯರಿಗೆ ಚಿಕನ್ ಶಾಕ್.. 350ರ ಗಡಿ ದಾಟಿದ ಕೆಜಿ ಕೋಳಿ ಮಾಂಸ..!

parrot (1)

ಕಾಣೆಯಾಗಿದ್ದು ಹೇಗೆ..? 

ಸಂಕ್ರಾಂತಿ ದಿನ ಪಂಜರವನ್ನು ಸ್ವಚ್ಛಗೊಳಿಸುವಾಗ, ‘ಚಾರ್ಲಿ’ ಹೊರಬಂದು ಹಾರಿಹೋಗಿದೆ. ಗಿಳಿ ಮನೆಗೆ ತುಂಬಾ ಒಗ್ಗಿಕೊಂಡಿದ್ದರಿಂದ ಸಂಜೆಯ ವೇಳೆಗೆ ಹಿಂತಿರುಗುತ್ತದೆ ಎಂದು ದೋರಬಾಬು ಭಾವಿಸಿದ್ದರು. ಆದರೆ ಅದು ಹಿಂತಿರುಗಲಿಲ್ಲ. ದಿನಗಳು ಕಳೆದವು ಮತ್ತು ಎಷ್ಟೇ ಹುಡುಕಿದರೂ ಸಿಗಲಿಲ್ಲ. ನಂತರ ಗಿಳಿ ಕಣ್ಮರೆಯಾಗಿರುವುದು ಸ್ಥಳೀಯವಾಗಿ ಚರ್ಚೆಯ ವಿಷಯವಾಯಿತು. ಗ್ರಾಮದಾದ್ಯಂತ ಹುಡುಕಾಟ ನಡೆಸಿದ ದೋರಬಾಬು, ಹತ್ತಿರದ ಕುಟುಂಬವೊಂದು ಗಿಳಿಯನ್ನು ಸೆರೆಹಿಡಿದಿದೆ ಎಂಬ ಮಾಹಿತಿಯನ್ನು ಸ್ಥಳೀಯರಿಂದ ಪಡೆದರು. 

ಗಿಳಿಯನ್ನು ಹಿಂತಿರುಗಿಸುವಂತೆ ಮತ್ತು ಅಗತ್ಯವಿದ್ದರೆ ಹಣವನ್ನು ನೀಡುವಂತೆ ಬೇಡಿಕೊಂಡಿದ್ದಾಗಿ ದೋರಬಾಬು ಹೇಳಿದ್ದಾರೆ. ಸೆರೆ ಹಿಡಿದಿದ್ದು ನಿಜ. ಆದರೆ ಅದು ಸ್ವಲ್ಪ ಸಮಯದ ಬಳಿಕ ಹಾರಿ ಹೋಗಿದೆ ಎಂದು ಆರೋಪಿತ ಕುಟುಂಬಸ್ಥರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದೊರೆಬಾಬು ಗಿಳಿಯನ್ನ ಪಡೆಯುವ ಸಲುವಾಗಿ ಠಾಣೆ ಮೆಟ್ಟಿಲೇರಿದ್ದಾರೆ. 

ಇದನ್ನೂ ಓದಿ: ರೆಡ್​​ ಆರ್ಮಿ ಮೇಲೆ ಕೋಟಿ ಕುಳಗಳ ಕಣ್ಣು.. RCB ಖರೀದಿಗೆ ಮುಂದೆ ಬಂದವ್ರು ಎಷ್ಟೊಂದು ಜನ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Parrot missing Parrot
Advertisment