ರೆಡ್​​ ಆರ್ಮಿ ಮೇಲೆ ಕೋಟಿ ಕುಳಗಳ ಕಣ್ಣು.. RCB ಖರೀದಿಗೆ ಮುಂದೆ ಬಂದವ್ರು ಎಷ್ಟೊಂದು ಜನ?

ಚಿನ್ನಸ್ವಾಮಿ ಮೈದಾನದಲ್ಲಿ RCB ಮ್ಯಾಚ್​ ನಡೆಯುತ್ತಾ? ನಡೆಯಲ್ವಾ? ಅನ್ನೋ ಪ್ರಶ್ನೆಗೆ ಇನ್ನೂ ಕ್ಲೀಯರ್​ ಆನ್ಸರ್​ ಸಿಕ್ಕಿಲ್ಲ. ಇದ್ರ ನಡುವೆ ಆರ್​​ಸಿಬಿ ಸೇಲ್​ನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

author-image
Ganesh Kerekuli
RCB (11)
Advertisment
  • ಮಾರ್ಚ್​​ ಅಂತ್ಯದೊಳಗೆ ಆರ್​​ಸಿಬಿಗೆ ಹೊಸ ಓನರ್​
  • ಆರ್​​​ಸಿಬಿ ಖರೀದಿಗೆ ಮುಗಿಬಿದ್ದ ಖರೀದಿದಾರರು
  • RCB ಖರೀದಿಗೆ ಆದಾರ್​ ಪೂನಾವಾಲಾಗೆ ಅತೀವ ಆಸಕ್ತಿ

ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ ಮ್ಯಾಚ್​ ನಡೆಯುತ್ತಾ? ನಡೆಯಲ್ವಾ? ಅನ್ನೋ ಪ್ರಶ್ನೆಗೆ ಇನ್ನೂ ಕ್ಲೀಯರ್​ ಆನ್ಸರ್​ ಸಿಕ್ಕಿಲ್ಲ. ಇದ್ರ ನಡುವೆ ಆರ್​​ಸಿಬಿ ಸೇಲ್​ನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮಾರ್ಚ್​​ ಅಂತ್ಯದೊಳಗೆ ಆರ್​​ಸಿಬಿಗೆ ಹೊಸ ಓನರ್ಸ್​ ಬರೋದು ಕನ್​ಫರ್ಮ್​ ಆಗಿದ್ದು, ಆರ್​​ಸಿಬಿ ಸ್ಟೇಕ್​​​ ಖರೀದಿಗೆ ಖರೀದಿದಾರರು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದ್ದಾರೆ. ರೆಡ್​ ಆರ್ಮಿಗೆ ಡಿಮ್ಯಾಂಡ್​ ಫುಲ್​ ಹೆಚ್ಚಾಗಿದೆ.

ಸೆಪ್ಟೆಂಬರ್​​ 30, 2025.. ಐಪಿಎಲ್​​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಮಾಡಿದ್ದ ಒಂದು ಟ್ವೀಟ್​ ಕ್ರಿಕೆಟ್​ ಲೋಕದಲ್ಲಿ ಸಂಚಲನ ಸೃಷ್ಟಿಸಿತ್ತು. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಮಾರಾಟಕ್ಕೆ ತೆರೆ ಹಿಂದೆ ಪ್ಲಾನ್​ ನಡೀತಿದೆ ಅನ್ನೋ ಸ್ಪೋಟಕ ಸುದ್ದಿಯನ್ನ ಲಲಿತ್​ ಮೋದಿ ರಿವೀಲ್​ ಮಾಡಿದ್ರು. ಅದಾದ ಬಳಿಕ ಹಲವರು ತಂಡದ ಖರೀದಿಗೆ ಆಸಕ್ತಿ ತೋರಿಸಿದ್ರು. ಆ ಬಳಿಕ ಆ ಸುದ್ದಿ ಸೈಲೆಂಟ್​ ಆಗಿತ್ತು. ಇದೀಗ ಸೀಸನ್​ 19ಕ್ಕೂ ಮುನ್ನ ಹೋಮ್​ಗ್ರೌಂಡ್​ ವಿಚಾರದಲ್ಲಿ ಹಗ್ಗಜಗ್ಗಾಟ ಆರಂಭವಾಗಿರೋದ್ರ ನಡುವೆ, ಸೈಲೆಂಟಾಗಿ ಆರ್​​​ಸಿ​ಬಿ ಸೇಲ್​ನ ಡೀಲ್​ ನಡೀತಿದೆ. 

ಆರ್​​ಸಿಬಿಗೆ ಹೊಸ ಓನರ್​

ಕಳೆದ ಅಕ್ಟೋಬರ್​​ನಲ್ಲೇ ಆರ್​​ಸಿಬಿ ಫ್ರಾಂಚೈಸಿ ಸೇಲ್​ಗೆ ಮುಂದಾಗಿದ್ದ ಓನರ್ಸ್​​, ಸಿಟಿಬ್ಯಾಂಕ್​ಗೆ ಮಾರಾಟದ ಜವಾಬ್ಧಾರಿ ವಹಿಸಿದ್ರು. ಮಾರ್ಚ್​ ಅಂತ್ಯದ ಒಳಗೆ ಹೊಸ ಓನರ್ಸ್​ ಆರ್​​ಸಿಬಿಗೆ ಬರಲಿದ್ದಾರೆ ಎಂದು ವರದಿಯಾಗಿತ್ತು. ಅದ್ರಂತೆ ಇದೀಗ ಆರ್​​​ಸಿಬಿ ಸೇಲ್​ಗೆ ತೆರೆ ಹಿಂದೆ ಸೈಲೆಂಟಾಗಿಯೇ ಸಿದ್ಧತೆಗಳು ಆರಂಭವಾಗಿವೆ. ಆರ್​​ಸಿಬಿ ಖರೀದಿಗೆ ಹಲವು ಖರೀದಿದಾರರು  ಆಸಕ್ತಿ ತೋರಿಸಿದ್ದಾರೆ. 

ಇದನ್ನೂ ಓದಿ: 101 ಮರಗಳ ನೆಲಸಮ.. ಪ್ರತಿಷ್ಠಿತ ಎಂಬೆಸಿ ಗ್ರೂಪ್​​ ವಿರುದ್ಧ FIR ದಾಖಲು

Virat_kohli_RCB_team_sale

ಆದಾರ್​ ಪೂನಾವಾಲಗೆ ಅತೀವ ಆಸಕ್ತಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮೇಲೆ ಸಿರಮ್​ ಇನ್​​ಸ್ಟಿಟ್ಯೂಟ್​ನ ಆಧಾರ್​ ಪೂನಾವಾಲಾ ಕಣ್ಣು ಬಿದ್ದಿದೆ. ಆರ್​​ಸಿಬಿ ಸೇಲ್​ಗಿದೆ ಅನ್ನೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ಬಹಿರಂಗವಾಗೇ ಆದಾರ್​ ಪೂನಾವಾಲ ಆಸಕ್ತಿಯಿದೆ ಎಂದು ಹೇಳಿದ್ರು. ಇದೀಗ ಮತ್ತೆ ಟ್ವೀಟ್​ ಮಾಡಿರುವ ಪೂನಾವಾಲ ಹೈಯೆಸ್ಟ್​ ಬಿಡ್​ ಮಾಡೋದಾಗಿ ಹೇಳಿದ್ದಾರೆ. ಈಗಾಗಲೇ ಹಾಲಿ ಓನರ್ಸ್​ ಡಿಯಾಜಿಯೋ ಗ್ರೂಪ್​ ಜೊತೆಗೆ ಪೂನಾವಾಲಾ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 2010ರಲ್ಲಿ ಐಪಿಎಲ್​ಗೆ 2 ಹೊಸ ತಂಡಗಳ ಎಂಟ್ರಿಯಾದಾಗಲೇ ಪೂನಾವಾಲ ಫ್ಯಾಮಿಲಿ ತಂಡ ಖರೀದಿಗೆ ಬಿಡ್​ ಮಾಡಿತ್ತು. ಅಂದು ಬಿಡ್​ ಗೆಲ್ಲುವಲ್ಲಿ ಫೇಲ್​ ಆಗಿದ್ದ ಪೂನಾವಾಲ ಇಂದು ಆರ್​​ಸಿಬಿ ಖರೀದಿಸಿ ಕನಸು ನನಸು ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ. 

ಕೆ.ಜಿ.ಎಫ್​, ಕಾಂತಾರ ಚಿತ್ರಗಳ ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್​​ನ ಮಾಲೀಕ ತನ್ನ ಸಾಮ್ರಾರ್ಜವನ್ನ ಮತ್ತಷ್ಟು ವಿಸ್ತರಿಸೋಕೆ ಮುಂದಾಗಿದ್ದಾರೆ. ಆರ್​​ಸಿಬಿ ತಂಡದ ಓನರ್​​ಶಿಪ್​ ಮೇಲೆ ಹೊಂಬಾಳೆ ಫಿಲ್ಮ್ಸ್​​ನ ಕಣ್ಣು ಬಿದ್ದಿದೆ.  2023ರಿಂದಲೂ ಹೊಂಬಾಳೆ ಫಿಲ್ಮ್ಸ್​​ ಆರ್​​ಸಿಬಿಯ ಡಿಜಿಟಲ್​ ಪಾರ್ಟನರ್​ ಆಗಿ ಗುರುತಿಸಿಕೊಂಡಿದೆ. ಇದೀಗ ಆರ್​​​ಸಿಬಿ ಸೇಲ್​ಗಿರೋದ್ರಿಂದ ತಂಡವನ್ನೇ ಖರೀದಿಸೋಕೆ ತೆರೆ ಹಿಂದೆ ಕಸರತ್ತನ್ನ ಆರಂಭಿಸಿದೆ. ಪೂರ್ತಿ ತಂಡವನ್ನ ಖರೀದಿಸಲು ಸಾಧ್ಯವಾಗಲಿದ್ರೆ, ಪಾಲುದಾರಿಕೆಯಲ್ಲಿ ಕೆಲವು ಷೇರುಗಳನ್ನಾದ್ರೂ ತೆಕ್ಕೆಗೆ ತೆಗೆದುಕೊಳ್ಳಲು ಹೊಂಬಾಳೆ ಫಿಲ್ಮ್ಸ್​ ಮುಂದಾಗಿದೆ. 

ಬಾಲಿವುಡ್​​​​ ನಟ ಅಭಿಷೇಕ್​ ಬಚ್ಚನ್​ ಕೂಡ ಆರ್​​ಸಿಬಿ ಓನರ್​ ಆಗೋ ಹಂಬಲದಲ್ಲಿದ್ದಾರೆ. ಈಗಾಗಲೇ ಪ್ರೋ ಕಬಡ್ಡಿ ಲೀಗ್​ನಲ್ಲಿ ಜೈಪುರ ಪಿಂಕ್​​ ಫ್ಯಾಂಥರ್ಸ್​, ಇಂಡಿಯನ್​ ಫುಟ್ಬಾಲ್ ಲೀಗ್​​ನಲ್ಲಿ ಚೆನ್ನೈಯನ್​ ಎಫ್​ ಸಿಯ ಓವರ್​ ಆಗಿರೋ ಅಭಿಷೇಕ್​ ಬಚ್ಚನ್, ಯುರೋಪಿಯನ್​ ಟಿ20 ಪ್ರೀಮಿಯರ್​ ಲೀಗ್​ನಲ್ಲೂ ಹಣ ಹೂಡಿಕೆಗೆ ಮುಂದಾಗಿದ್ದಾರೆ. ಇದ್ರ ಜೊತೆಗೆ ಆರ್​​ಸಿಬಿ ಕೆಲ ಷೇರುಗಳ ಖರೀದಿಗೂ ಆಸಕ್ತಿ ತೋರಿಸಿದ್ದಾರೆ. 

ಇದನ್ನೂ ಓದಿ: ರಾಜ್ಯದ ಜನರಿಗೆ KMF ಸಿಹಿಸುದ್ದಿ: ಇನ್ಮುಂದೆ 10 ರೂಪಾಯಿಗೆ ಸಿಗಲಿದೆ ನಂದಿನಿ ಹಾಲು..!

RCB (2)

ಉದ್ಯಮಿ ಪಾರ್ಥ್​ ಜಿಂದಾಲ್ ಕೂಡ ಆರ್​​​ಸಿಬಿಯ ಖರೀದಿಗೆ ಗಂಭೀರವಾಗಿ ಚಿಂತಿಸಿದ್ದಾರೆ. ಈಗಾಗಲೇ ಐಪಿಎಲ್​ನಲ್ಲಿ ಜಿಂದಾಲ್ ಕಂಪನಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಒಡೆತನವನ್ನ ಹೊಂದಿದೆ. ಡೆಲ್ಲಿ ಫ್ರಾಂಚೈಸಿಯ 50 ಪರ್ಸೆಂಟ್​ ಶೇರುಗಳ ಹೊಂದಿರೋ ಪಾರ್ಥ್​ ಜಿಂದಾಲ್​, ಪೂರ್ಣ ಪ್ರಮಾಣದಲ್ಲಿ ತಂಡವೊಂದರ ಒಡೆಯನಾಗೋ ಲೆಕ್ಕಾಚಾರದಲ್ಲಿದ್ದಾರಂತೆ. ISL​​ನ ಬೆಂಗಳೂರು ಫುಟ್ಬಾಲ್​ ತಂಡದ ಒಡೆಯನಾಗಿರೋ ಪಾರ್ಥ್​ ಜಿಂದಾಲ್​, ಕ್ರಿಕೆಟ್​ನಲ್ಲೂ ಬೆಂಗಳೂರು ಮೂಲದ ತಂಡದ ಖರೀದಿಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಜೊತೆಗೆ 2022ರಲ್ಲಿ ಐಪಿಎಲ್​ನಲ್ಲಿ ತಂಡ ಖರೀದಿಸಲು ಪ್ರಯತ್ನಿಸಿ ವಿಫಲವಾಗಿದ್ದ ಅದಾನಿ ಗ್ರೂಪ್​ ಕಣ್ಣು ಕೂಡ ರೆಡ್​ಆರ್ಮಿ ಮೇಲೆ ಬಿದ್ದಿದೆ. 

17 ಸಾವಿರ ಕೋಟಿ ಬೆಲೆ ಬಾಳುತ್ತೆ ಆರ್​​ಸಿಬಿ

2025ರಲ್ಲಿ ಚೊಚ್ಚಲ ಐಪಿಎಲ್​ ಟ್ರೋಫಿ ಗೆದ್ದ ಬಳಿಕ ಆರ್​ಸಿಬಿಯ ಷೇರುಗಳ ಮೌಲ್ಯ ಗಣನೀಯವಾಗಿ ಏರಿಕೆ ಕಂಡದೆ. ಸದ್ಯದ ಮಾಹಿತಿ ಪ್ರಕಾರ ಆರ್​​ಸಿಬಿಯ ಮೌಲ್ಯ 2  ಬಿಲಿಯನ್​​​ ಯುಎಸ್​​ ಡಾಲರ್​​ ಎನ್ನಲಾಗ್ತಿದೆ. ಅಂದ್ರೆ ಸರಿ ಸುಮಾರು 17 ಸಾವಿರದ 59 ಕೋಟಿಗೂ ಅಧಿಕ ಮೌಲ್ಯವನ್ನ ಹೊಂದಿದೆ. ಇದಕ್ಕಿಂತ ಹೆಚ್ಚಿನ ಅಮೌಂಟ್​​ಗೆ ಸೇಲ್​ ಮಾಡಲು ಆರ್​​ಸಿಬಿ ಓನರ್ಸ್​ ಮುಂದಾಗಿದ್ದಾರೆ. ಖರೀದಿಗೆ ಹಲವು ಕಂಪನಿಗಳಂತೂ ಕ್ಯೂನಲ್ಲಿ ನಿಂತಿವೆ. ಆರ್​​ಸಿಬಿ ಫ್ರಾಂಚೈಸಿಗಿರೋ ಕ್ರೇಜ್​ನ ಲಾಭ ಪಡೆದು ಕೋಟಿ ಕೋಟಿ ಕಮಾಲ್​ ಮಾಡೋ ಲೆಕ್ಕಾಚಾರ ಹಾಕ್ತಿವೆ. 

ಇದನ್ನೂ ಓದಿ:ನಾನ್-ವೆಜ್ ಪ್ರಿಯರಿಗೆ ಚಿಕನ್ ಶಾಕ್.. 350ರ ಗಡಿ ದಾಟಿದ ಕೆಜಿ ಕೋಳಿ ಮಾಂಸ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB
Advertisment