ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಔಟ್, ಹೊಸ ತಂಡ ಪ್ರಕಟಿಸಿದ ಐಸಿಸಿ

ಬಾಂಗ್ಲಾದೇಶ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ 2026 ರಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದನ್ನು ಐಸಿಸಿ ಪ್ರಕಟಿಸಿದೆ. ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಈ ಪಂದ್ಯಾವಳಿಯಲ್ಲಿ ಆಡಲಿದೆ ಎಂದು ಐಸಿಸಿ ತಿಳಿಸಿದೆ. ಆ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ಹಠಮಾರಿತನದ ಪರಿಣಾಮ ಎದುರಿಸಬೇಕಾಗಿದೆ.

author-image
Ganesh Kerekuli
Bangladesh
Advertisment

ಬಾಂಗ್ಲಾದೇಶ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ 2026 ರಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದನ್ನು ಐಸಿಸಿ ಪ್ರಕಟಿಸಿದೆ. ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ಈ ಪಂದ್ಯಾವಳಿಯಲ್ಲಿ ಆಡಲಿದೆ ಎಂದು ಐಸಿಸಿ ತಿಳಿಸಿದೆ. ಆ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ಹಠಮಾರಿತನದ ಪರಿಣಾಮಗಳನ್ನು ಎದುರಿಸಬೇಕಾಗಿದೆ. 

ಸ್ಕಾಟ್ಲೆಂಡ್ ತಂಡವು ಬಾಂಗ್ಲಾದೇಶ ಇದ್ದ ಗುಂಪಿನಲ್ಲೇ ಇರುತ್ತದೆ. ಫೆಬ್ರವರಿ 7 ರಂದು, ಸ್ಕಾಟ್ಲೆಂಡ್ ತಂಡವು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. 

ಇದನ್ನೂ ಓದಿ: 80,000 ರೂ ಮೌಲ್ಯದ ಗಿಳಿ ಮನೆಬಿಟ್ಟು ಹೋಯಿತು.. ಕಣ್ಣೀರು ಹಾಕುತ್ತ ಠಾಣೆಗೆ ಬಂದ ಯಜಮಾನ..!

ಭಾರತ ಭೇಟಿಯ ಬಗ್ಗೆ ನಿರ್ಧರಿಸಲು ನೀಡಲಾದ 24 ಗಂಟೆಗಳ ಗಡುವಿನೊಳಗೆ ಮಂಡಳಿಯು ಐಸಿಸಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಗೆ ನಿನ್ನೆ ಸಂಜೆ ಇಮೇಲ್ ಕಳುಹಿಸಲಾಗಿತ್ತು. ಐಸಿಸಿಗೆ ಅಧಿಕೃತವಾಗಿ ತಿಳಿಸುವ ಮೊದಲು ಬಿಸಿಬಿ ಢಾಕಾದಲ್ಲಿ ಪತ್ರಿಕಾಗೋಷ್ಠಿ ನಡೆಸಿತ್ತು, ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ.

ಸ್ಕಾಟ್ಲೆಂಡ್ ಪ್ರವೇಶದ ಕುರಿತು ಅಧಿಕೃತ ಘೋಷಣೆ

ಬಾಂಗ್ಲಾದೇಶವನ್ನು ಬದಲಿಗೆ ಸ್ಕಾಟ್ಲೆಂಡ್ ಹೊಸ ತಂಡವಾಗಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಬಾಂಗ್ಲಾದೇಶ ಐಸಿಸಿ ಟಿ 20 ವಿಶ್ವಕಪ್‌ನ ಗ್ರೂಪ್ ಸಿ ನಲ್ಲಿದೆ. ಈಗ ಸ್ಕಾಟ್ಲೆಂಡ್ ಅವರನ್ನು ಅದೇ ಗುಂಪಿನಲ್ಲಿ ಬದಲಾಯಿಸಲಿದೆ. ಟಿ 20 ವಿಶ್ವಕಪ್‌ನ ವೇಳಾಪಟ್ಟಿಯೂ ಹಾಗೆಯೇ ಇರುತ್ತದೆ. ಒಂದೇ ವ್ಯತ್ಯಾಸವೆಂದರೆ ಬಾಂಗ್ಲಾದೇಶ ಆಡುತ್ತಿದ್ದ ಪಂದ್ಯಗಳನ್ನು ಈಗ ಸ್ಕಾಟ್ಲೆಂಡ್ ಆಡಲಿದೆ. ಹೀಗಾಗಿ ಸ್ಕಾಟ್ಲೆಂಡ್ ತನ್ನ ನಾಲ್ಕು ಗ್ರೂಪ್ ಲೀಗ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ (ಫೆಬ್ರವರಿ 7), ಇಟಲಿ (ಫೆಬ್ರವರಿ 9) ಮತ್ತು ಇಂಗ್ಲೆಂಡ್ (ಫೆಬ್ರವರಿ 14) ವಿರುದ್ಧ ಕೋಲ್ಕತ್ತಾದಲ್ಲಿ ಆಡಲಿದೆ. ಫೆಬ್ರವರಿ 17 ರಂದು ಮುಂಬೈನಲ್ಲಿ ನೇಪಾಳ ವಿರುದ್ಧ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಹೆಂಡತಿಯ ಸೀರೆ ಪ್ರೇಯಸಿಗೆ ಗಿಫ್ಟ್! ಮದ್ವೆಯಾದ 7 ದಿನಕ್ಕೆ ಮುರಿದು ಬಿತ್ತು ಸಂಸಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangladesh Mustafizur Rahman
Advertisment