/newsfirstlive-kannada/media/media_files/2026/01/24/anantha-nageswaran-2026-01-24-17-46-10.jpg)
ನವದೆಹಲಿ: ಭಾರತ ಆವಾಸಸ್ಥಾನ ಕೇಂದ್ರದ ಗುಲ್ಮೋಹರ್ ಹಾಲ್‌ನಲ್ಲಿ ಶಾಸಕ ಸಂಸದರಿಗಾಗಿ NFPRC ಕಾರ್ಯಾಗಾರ ನಡೆಯಿತು. ‘ಭಾರತದ ಬೆಳವಣಿಗೆ ವೇಗಗೊಳಿಸುವುದು: ಸಂಸದರು, ಶಾಸಕರು ವಿಕಸಿತ್ ಭಾರತವನ್ನು ಹೇಗೆ ಸಕ್ರಿಯಗೊಳಿಸಬಹುದು@2047’ ಎಂಬ ಶೀರ್ಷಿಕೆಯ ಮೊದಲ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್, ಕೇಂದ್ರ, ರಾಜ್ಯಗಳ ನಡುವೆ ಸಮನ್ವಯವು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತ ಅಂತ ಹೇಳಿದರು. ಕಾರ್ಯಾಗಾರದಲ್ಲಿ ಪ್ರಮುಖವಾಗಿ ಕಾರ್ಯಕ್ರಮ ಅನುಷ್ಠಾನದಿಂದ ಬದಲಾವಣೆಯ ಪರಿಣಾಮ ಬಗ್ಗೆ ಪ್ರಸ್ತುತಪಡಿಸಲಾಯಿತು.
ಇದನ್ನೂ ಓದಿ:BSNLಗೆ ಭಾವಪೂರ್ಣ ಶ್ರದ್ಧಾಂಜಲಿ!
/filters:format(webp)/newsfirstlive-kannada/media/media_files/2026/01/24/anantha-nageswaran-1-2026-01-24-17-47-37.jpg)
ಶೇ.10ರಷ್ಟು ಅರ್ಥಿಕ ಬೆಳವಣಿಗೆ ಸಾಧಿಸಲು ಶಾಸಕಾಂಗ ನಾಯಕತ್ವ ಪ್ರಮುಖ ಪಾತ್ರ ವಹಿಸುತ್ತೆ. ಗುರಿ ಸಾಧಿಸಲು ಶಾಸಕಾಂಗ ಸಂಸ್ಥೆಗಳ ಸಕ್ರಿಯ ಪಾತ್ರ ಅಗತ್ಯ ಎಂದು ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಹೇಳಿದರು.
ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್​ನಲ್ಲಿ ದಿನವಿಡೀ ನಡೆದ ಕಾರ್ಯಾಗಾರದಲ್ಲಿ, ಶಾಸಕರು, ಸಂಸದರು, ನೀತಿ ತಜ್ಞರು ಒಟ್ಟಾಗಿ ಸೇರಿ, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಸಮಗ್ರ ಪರಿಣಾಮ ಮತ್ತು ವೇಗದ ಬೆಳವಣಿಗಾಗಿ ತಳಪಟ್ಟದಲ್ಲಿ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ, ಅನುಷ್ಠಾನದಲ್ಲಿನ ಪ್ರಾಯೋಗಿಕ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು.
ಕಾರ್ಯಾಗಾರದಲ್ಲಿ ನೀತಿಯ ಯಶಸ್ಸು ಅದರ ಉದ್ದೇಶಗಳಿಂದ ಮಾತ್ರವಲ್ಲ, ಅದರ ಅನುಷ್ಠಾನದಿಂದಲೂ ನಿರ್ಧರಿಸಲಾಗುತ್ತದೆ ಎಂಬುದನ್ನು ಪ್ರಸ್ತುತಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ISB ಸೆಂಟರ್ ಫಾರ್ ಅನಾಲಿಟಿಕಲ್ ಫೈನಾನ್ಸ್ ಸಂಶೋಧನಾ ಸಹೋದ್ಯೋಗಿ ರಾಜಾ ಬುಜ್ನೂರಿ ಅವರು ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಬಗ್ಗೆ ಪ್ರಸ್ತುತ ಪಡಿಸಿದ್ರು. ಮಣಿಭೂಷಣ್ ಝಾ ಅವರು, ಜಲಜೀವನ್ ಮಿಷನ್ ಅನುಷ್ಠಾನದ ಬಗ್ಗೆ ಟಿಪ್ಪಣಿ ಮಂಡಿಸಿದ್ರು.
ಎಫ್‌ಇಡಿ ನಿರ್ದೇಶಕ ರಾಹುಲ್ ಅಹ್ಲುವಾಲಿಯಾ, ಭಾರತದ ಆರ್ಥಿಕ ಸಾಮರ್ಥ್ಯಗಳು, ಸವಾಲುಗಳು ಮತ್ತು ಉದಯೋನ್ಮುಖ ಅವಕಾಶಗಳ ಕುರಿತು ಆರ್ಥಿಕ ದೃಷ್ಟಿಕೋನವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ NFPRC ಫೌಂಡೇಶನ್ ಅಧ್ಯಕ್ಷ ತರುಣ್ ಚುಗ್, ಮಂಡಳಿಯ ಸದಸ್ಯ ಡಾ. ಅಭಿನವ್ ಪ್ರಕಾಶ್ ಉಪಸ್ಥಿತರಿದ್ದರು. ಶಾಸಕಾಂಗ ಸಾಮರ್ಥ್ಯವನ್ನು ಬಲಪಡಿಸಲು ಸಂಶೋಧನೆ ಆಧಾರಿತ ಸಂವಾದ, ರಚನಾತ್ಮಕ ನೀತಿ ತೊಡಗಿಸಿಕೊಳ್ಳುವಿಕೆ ಮತ್ತು ದೀರ್ಘಕಾಲೀನ ಸಾಂಸ್ಥಿಕ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದರು.
ಇದನ್ನೂ ಓದಿ:ಹೆಂಡತಿಯ ಸೀರೆ ಪ್ರೇಯಸಿಗೆ ಗಿಫ್ಟ್! ಮದ್ವೆಯಾದ 7 ದಿನಕ್ಕೆ ಮುರಿದು ಬಿತ್ತು ಸಂಸಾರ..!
/filters:format(webp)/newsfirstlive-kannada/media/media_files/2026/01/24/anantha-nageswaran-2-2026-01-24-17-47-51.jpg)
ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂದ ತರುಣ್ ಚುಗ್, ನೀತಿ ನಿರೂಪಣೆ, ಸಂಸತ್ತಿನ ಪಾತ್ರ ಮತ್ತು ವಾಸ್ತವಗಳನ್ನು ಸಂಪರ್ಕಿಸುವ ವೇದಿಕೆಯಾದ ಆ ಉದ್ದೇಶವನ್ನು ಪೂರೈಸಲು NFPRC ಅನ್ನು ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು. ಉತ್ತಮ ನೀತಿಯು ಸ್ಪಷ್ಟ ಉದ್ದೇಶದಿಂದ ಹುಟ್ಟುತ್ತದೆ, ನಿಖರವಾದ ದತ್ತಾಂಶ ಮತ್ತು ಅನುಭವವನ್ನು ಆಧರಿಸಿದೆ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುತ್ತದೆ ಎಂದು ಚುಗ್ ಹೇಳಿದರು.
ನೀತಿ ನಿರೂಪಣೆಯು ಅಲ್ಪಾವಧಿಯ ರಾಜಕೀಯ ಲಾಭಗಳಿಗಿಂತ ಮೇಲೇರಬೇಕು ಮತ್ತು ದೀರ್ಘಾವಧಿಯ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸಬೇಕು ಎಂದು ತರುಣ್ ಚುಗ್ ಒತ್ತಿ ಹೇಳಿದರು. ಭಾರತವು ನಿರ್ಣಾಯಕ ಹಂತದಲ್ಲಿದೆ, ದೇಶದಲ್ಲಿ ಸಾಮರ್ಥ್ಯವು ಅಪಾರವಾಗಿದೆ, ಆದರೆ ಸಾಮರ್ಥ್ಯವು ಸ್ವಯಂಚಾಲಿತವಾಗಿ ಫಲಿತಾಂಶಗಳಾಗಿ ರೂಪಾಂತರವಾಗಲ್ಲ. ನೀತಿ ನಿರೂಪಣೆಯು ವಿಶ್ವಾಸಾರ್ಹವಾಗಿದ್ದಾಗ ಮತ್ತು ತ್ವರಿತ ಅಭಿವೃದ್ಧಿ, ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು @2047 ಸಾಧಿಸಬಹುದು ಎಂದು ತರುಣ್ ಚುಗ್ ಹೇಳಿದರು.
ನಿಯಮಿತ ಕಾರ್ಯಾಗಾರಗಳು, ವಿಷಯಾಧಾರಿತ ಸಂವಾದಗಳು ಮತ್ತು ಶಾಸಕಾಂಗ ಸಹಯೋಗದ ಮೂಲಕ ಭವಿಷ್ಯದಲ್ಲಿ ಈ ಮಾದರಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಬದ್ಧತೆಯನ್ನು NFPRC ವ್ಯಕ್ತಪಡಿಸಿತು.
ಇದನ್ನೂ ಓದಿ: ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಔಟ್, ಹೊಸ ತಂಡ ಪ್ರಕಟಿಸಿದ ಐಸಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us