/newsfirstlive-kannada/media/media_files/2025/10/26/cm_siddaramaiah_dks-1-2025-10-26-08-45-59.jpg)
ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್​ ಎಷ್ಟು ಬಾರಿ ಎಚ್ಚರಿಕೆ ನೀಡಿdರೂ ರಾಜ್ಯದ ಕೈ ನಾಯಕರು ಮಾತ್ರ ಆ ಕಿವಿಯಿಂದ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟು ಮತ್ತೆ ಬದಲಾವಣೆ ಚರ್ಚೆಗೆ ಎಳೆಯುತ್ತಿದ್ದಾರೆ.
ಅದರಲ್ಲೂ ಮೂರು ದಿನಗಳ ಹಿಂದೆ ಸಿಎಂ ಪುತ್ರ ಯತೀಂದ್ರ ಅವರು ಉತ್ತರಾಧಿಕಾರಿ ಯುದ್ಧಕ್ಕೆ ನಾಂದಿಯಾಡಿದ್ದರು. ಇದು ರಾಜ್ಯ ಕಾಂಗ್ರೆಸ್​ನಲ್ಲಿ ತಲ್ಲಣ ಸೃಷ್ಟಿಸಿದ್ದಲ್ಲದೇ, ಹೈಕಮಾಂಡ್​​ ಅಂಗಳಕ್ಕೂ ತಲುಪಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ನಾಯಕತ್ವ ಗದ್ದಲಕ್ಕೆ ಬ್ರೇಕ್​ ಹಾಕುವ ಯತ್ನ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/10/25/cm_siddaramaiah_st_somashekar-2025-10-25-07-52-12.jpg)
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ರಾಜ್ಯ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಹಲವು ಗೊಂದಲಗಳಿಗೆ ತೆರೆ ಎಳೆಯುವ ಯತ್ನ ಮಾಡಿದರು. ಸದ್ಯ ತಮ್ಮ ಪುತ್ರನ ಹೇಳಿಕೆ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಿಎಂ, ಯಾರನ್ನ ಲೀಡರ್ ಮಾಡಬೇಕು ಅನೋದು ಹೈಕಮಾಂಡ ತೀರ್ಮಾನ ಮಾಡುತ್ತೆ. ನಾವ್ಯಾರು ಮಾಡಲ್ಲ, ಯತೀಂದ್ರ ಕೂಡ ಮಾಡಲ್ಲ ಎಂದ ಸಿಎಂ ಸಿದ್ದರಾಮಯ್ಯ ಹೈಕಮಾಂಡ್​ನತ್ತ ಕೈ ತೋರುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಕೆಲ್ಸ ಮಾಡಿದ್ದಾರೆ.
ಸಿಎಂ ಯಾರು ಆಗಬೇಕು ಎಂದು ಯತೀಂದ್ರ ಅವರು ಸೈದ್ಧಾಂತಿಕವಾಗಿ ಹೇಳಿದ್ದಾರೆ. ಅಹಿಂದ ಸಂಘಟನೆ ನಾನು ಮಾಡುತ್ತಿದ್ದೆ. ಈಗ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ. ಅವರೇ ಲೀಡರ್ ಆಗಬೇಕು ಎಂದು ಹೇಳಿದ್ದಾರಾ?. ನಾಯಕನ ಮಾಡೋದು ಕಾಂಗ್ರೆಸ್​ ಹೈಕಮಾಂಡ್​ ಮಾತ್ರ. ನಾನು, ಯತೀಂದ್ರ ಸೇರಿ ಯಾರು ಲೀಡರ್​ನ ಮಾಡಲ್ಲ.
ಸಿದ್ದರಾಮಯ್ಯ, ಸಿಎಂ
ವರ್ಷಾಂತ್ಯದೊಳಗೆ ಸಂಪುಟ ಪುನಾರಚನೆ ಫಿಕ್ಸ್​.. ಸಿಎಂ ಸುಳಿವು
ಇನ್ನು ಸಂಪುಟ ಪುನಾರಚನೆ ಬಗ್ಗೆಯೂ ಮಾತನಾಡಿದ ಸಿಎಂ, ನಾಲ್ಕು ತಿಂಗಳ ಹಿಂದೆಯೇ ಸಂಪುಟ ಪುನಾರಚನೆಗೆ ಹೈಕಮಾಂಡ್​ ಹೇಳಿತ್ತು. ಆದ್ರೆ ಸರ್ಕಾರಕ್ಕೆ ಎರಡೂವರೆ ವರ್ಷ ಆಗೋವರೆಗೂ ಬೇಡ. ಬಳಿಕ ಮಾಡ್ತೇನೆ ಎಂದಿದ್ದೆ. ಒಂದ್ವೇಳೆ ಈಗ ಹೈಕಮಾಂಡ್​ ಒಪ್ಪಿದ್ರೆ. ಸಂಪುಟ ಪುನಾರಚನೆ ಮಾಡ್ತೇನೆ ಎನ್ನುವ ಮೂಲ ವರ್ಷಾಂತ್ಯದೊಳಗೆ ಕ್ಯಾಬಿನೆಟ್​ ಪುನಾರಚನೆಯ ಸುಳಿವು ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಘನಘೋರ ಘಟನೆ; 4 ಮಕ್ಕಳ ತಾಯಿ ಜೀವ ತೆಗೆದನಾ ಪ್ರಿಯಕರ..?
/filters:format(webp)/newsfirstlive-kannada/media/post_attachments/wp-content/uploads/2024/12/Satish_DK-and-Siddu.jpg)
ದೆಹಲಿಗೆ ಹೋದಾಗೆಲ್ಲ ಹೈಕಮಾಂಡ್​ ಭೇಟಿ
ದೆಹಲಿಗೆ ಹೋದಗಲೆಲ್ಲಾ ಭೇಟಿ ಮಾಡುತ್ತೇನೆ. ನಮ್ಮ ಹೈಕಮಾಂಡ್​ಗೆ ಎಲ್ಲವನ್ನು ತಿಳಿಸಬೇಕು. ರಾಜ್ಯದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಎನ್ನುವುದನ್ನು ಅವರಿಗೆ ತಿಳಿಸುವಂತಹದ್ದನ್ನು ಮಾಡುತ್ತೇನೆ. 2 ವರೆ ವರ್ಷ ಆದ ಮೇಲೆ ಸಂಪುಟ ಪುನರಚನೆ ಮಾಡಬೇಕು ಎಂದು ಹೈಕಮಾಂಡ್ ಹೇಳಿದರೆ ಅದನ್ನು ನಾವು ಮಾಡುತ್ತೇವೆ. ಹೈಕಮಾಂಡ್​ನವರು 3-4 ತಿಂಗಳ ಹಿಂದೆಯೇ ಕ್ಯಾಬಿನೆಟ್ ಪುನರಚನೆ ಬಗ್ಗೆ ಹೇಳಿದ್ದರು. ಅದಕ್ಕೆ ಎರಡುವರೆ ವರ್ಷ ತುಂಬಲಿ ಅದು ಆದ ಮೇಲೆ ಮಾಡೋಣ ಅಂದಿದ್ದೆ. ಈ ಬಗ್ಗೆ ಅವರ ಜೊತೆ ಮಾತನಾಡುತ್ತೇನೆ.
ಸಿದ್ದರಾಮಯ್ಯ, ಸಿಎಂ
ರಾಜ್ಯ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆಯ ಕ್ರಾಂತಿ ಗೀತೆ ಮಾರ್ಧನಿಸುತ್ತಿರುವ ಹೊತ್ತಲ್ಲೇ ಸಿಎಂ ವರ್ಷಾಂತ್ಯದೊಳಗೆ ಹಸ್ತಪಡೆಯಲ್ಲಿ ಬದಲಾವಣೆ ಗಾಳಿ ಬೀಸುವ ಸುಳಿವು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us