/newsfirstlive-kannada/media/media_files/2025/12/28/dk-shivakumar-19-2025-12-28-17-42-06.jpg)
ಅಹಿಂದದ ಮಹಾಬಲ ಹೊಂದಿರುವ ಸಿದ್ದರಾಮಯ್ಯಗೆ ರಾಹುಲ್​​​ ನಂಬಿಕೆಯೇ ದೊಡ್ಡ ಶಕ್ತಿ. ಸಿಎಂ ಸಿಂಹಾಸನ ರಕ್ಷಿಸುವ ಅಪರಿಮಿತ ವಿಶ್ವಾಸ. ಇತ್ತ ಸಿಎಂ ಚೇರ್ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್​ಗೆ ರಾಹುಲ್ ಮನಗೆಲ್ಲೋದೇ ಈಗ ಅಗ್ನಿಪರೀಕ್ಷೆ. ನಿನ್ನೆ CWC ಬಳಿಕವೂ ಮಹಾಮೌನಕ್ಕೆ ಬಿದ್ದ ಹೈಕಮಾಂಡ್​​​ ಯಾರಿಗೆ ಕೃಪಾಶೀರ್ವಾದ ಮಾಡ್ಲಿದೆ ಅನ್ನೋದೇ ಇಂಟ್ರಸ್ಟಿಂಗ್​​..
‘ಕುರ್ಚಿ’ ಫೈಟ್​, ‘ಹೈ’ ಮೌನ..
ಕರ್ನಾಟಕ ಕುರ್ಚಿ ಕಾಳಗವೂ ಇಂದ್ರಪ್ರಸ್ಥದ ದೊರೆಗಳನ್ನೆ ದಂಗು ಬಡಿಸಿದೆ. ಸಿಂಹಾಸನ ಸಮರಕ್ಕೆ ಸೆಡ್ಡು ಹೊಡೆದ ಸಿದ್ದು, ಪಟ್ಟದ ಯುದ್ಧಕ್ಕೆ ಕಹಳೆ ಮೊಳಗಿಸಿದ್ದಾರೆ. ನಿನ್ನೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕರ್ನಾಟಕ ಕುರ್ಚಿ ಫೈಟ್​ ವಿಚಾರದಲ್ಲಿ ಹೈಕಮಾಂಡ್​​ ದಿವ್ಯಮೌನಕ್ಕೆ ಶರಣಾಗಿದೆ. ಈ ಬೆಳವಣಿಗೆ ಸಿಎಂ ಸಿದ್ದು ನಿರಾಳತೆ ತಂದ್ರೆ, ಆಹ್ವಾನವಿಲ್ಲದೇ ಬೆಂಗಳೂರಲ್ಲೇ ಉಳಿದ ಡಿಸಿಎಂ ಡಿಕೆಶಿಗೆ ನಿರಾಸೆಯ ಕಡಲಿಗೆ ನೂಕಿದೆ..
ಇದನ್ನೂ ಓದಿ: ಆರ್‌ಎಸ್‌ಎಸ್, ಬಿಜೆಪಿ ಸಂಘಟನೆಯನ್ನು ಹೊಗಳಿದ ದಿಗ್ವಿಜಯ ಸಿಂಗ್ : ಖರ್ಗೆ, ರಾಹುಲ್, ಪ್ರಿಯಾಂಕಾಗೆ ಟ್ಯಾಗ್ ಮಾಡಿ ಸಂದೇಶ
/filters:format(webp)/newsfirstlive-kannada/media/media_files/2025/12/17/cm-siddaramaiah-2025-12-17-18-42-16.jpg)
ಕುರ್ಚಿ ಕದನ.. ಹೈಕಮಾಂಡ್​​​ ಮಹಾಮೌನ!
- ನಾಯಕತ್ವ ಬಗ್ಗೆ ರಾಹುಲ್ ನಿರ್ಧಾರ ಮಾಡ್ತಾರೆ ಎಂದಿದ್ದ ಸಿಎಂ
- ಆದ್ರೆ, ಕಾರ್ಯಕಾರಿಣಿ ಬಳಿಕ ಬದಲಾವಣೆ ಬಗ್ಗೆ ಚರ್ಚೆ ಇಲ್ಲ
- ಕರ್ನಾಟಕದ ಬಗ್ಗೆ ತಲೆಕೆಡಿಸಿಕೊಳ್ಳದ ಸೋನಿಯಾ, ರಾಹುಲ್
- ರಾಷ್ಟ್ರೀಯ ಕಾರ್ಯಕಾರಿಣಿ ಮುಗಿಸಿ ಸಿದ್ದರಾಮಯ್ಯ ವಾಪಸ್
- ಇತ್ತ ಖರ್ಗೆ ಮುಖಾಂತರ ಪವರ್ ಶೇರಿಂಗ್ ಬಗ್ಗೆ ಡಿಕೆಶಿ ಒತ್ತಡ
- CWC ನಂತ್ರ ನಾಯಕತ್ವ ಚರ್ಚೆ ಆಗುತ್ತೆಂಬ ಲೆಕ್ಕ, ಡಿಕೆ ನಿರಾಸೆ
ಅಗ್ನಿ ಪರೀಕ್ಷೆಯ ಅಡಗತ್ತರಿಯಲ್ಲಿ ಸಿಲುಕಿರುವ ಕಾಂಗ್ರೆಸ್​​ ಅಧಿನಾಯಕರು, ಸಂಕ್ರಾಂತಿ ಬಳಿಕ ಪ್ಲಾನ್​​​ವೊಂದು ಸಿದ್ಧಪಡಿಸಿದ್ದಾರೆ ಅನ್ನೋ ಮಾಹಿತಿ ಇದೆ. ನಿಮಗೆಲ್ಲಾ ಗೊತ್ತಿರುವಂತೆ ಡಿಸಿಎಂ ಡಿಕೆ ಓರ್ವ ಮಹತ್ವಾಕಾಂಕ್ಷಿ.. ರಗಡ್ ರಾಜಕಾರಣಿ ಡಿಕೆಶಿ, ಪಟ್ಟದ ಕನಸು ಬೆನ್ನಟ್ಟಿ ಹೊರಟ ಛಲದಂಕಮಲ್ಲ.. ಸಿಎಂ ಸ್ಥಾನದ ಮೇಲೆ ಮಹಾದಾಸೆಯನ್ನ ಇಟ್ಟುಕೊಂಡಿದ್ದಾರೆ ಡಿಕೆಶಿ.. ಈ ವಿಚಾರದಲ್ಲಿ ಡಿಕೆಶಿ ಕ್ಯಾಂಪ್​​​​ ಹಿನ್ನಡೆಗೆ ಬಿದ್ರೂ ಸಂಕ್ರಾಂತಿವರೆಗೂ ಸೈಲೆಂಟ್ ಆಗಿರಲು ನಿರ್ಧರಿಸಿದೆ..
ಡಿಕೆ ಬಣ ಪಕ್ಷ ನಿಷ್ಠ ದಾಳ!
ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ, ಈ ನಿಟ್ಟಿನಲ್ಲಿ ಡಿಕೆಶಿಯನ್ನ ಪರಿಗಣಿಸಿ.. KPCC ಅಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ಹೀಗಾಗಿ ಮೈತ್ರಿಕೂಟಕ್ಕೆ ತಿರುಗೇಟು ನೀಡಲು ಡಿಕೆಶಿಯ ನಾಯಕತ್ವ ಅನಿವಾರ್ಯ ಅನ್ನೋದನ್ನ ಡಿಕೆಶಿ ಬಣ ಹೇಳ್ತಿದೆ. ಒಂದ್ವೇಳೆ, ಡಿಕೆಶಿಯನ್ನ ನಿರ್ಲಕ್ಷಿಸಿದ್ರೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಪರಿಸ್ಥಿತಿ ನಿರ್ಮಾಣ ಆಗಲಿದೆ ಅನ್ನೋ ಎಚ್ಚರಿಕೆಯ ಸಂದೇಶ ಕೂಡ ರವಾನಿಸ್ತಿದೆ.. ಕೊಟ್ಟ ಮಾತಿನಂತೆ ನಡೆಯುವುದು ಬದ್ಧತೆ, ಆ ಬಗ್ಗೆ ಗಮನ ಹರಿಸಿ ಅಂತಿರುವ ಡಿಕೆಶಿ ಬಣ, ಶಿಸ್ತಿನ ಸಿಪಾಯಿಗೆ ಅಧಿಕಾರ ನೀಡುವಂತೆ ಒತ್ತಡ ಹೇರುತ್ತಿದೆ..
ಇದನ್ನೂ ಓದಿ: ಜನವರಿ 5 ರಿಂದ ಮನರೇಗಾ ಬಚಾವೋ ಅಂದೋಲನಕ್ಕೆ ಸಿಡಬ್ಲ್ಯುಸಿ ಸಭೆಯಲ್ಲಿ ತೀರ್ಮಾನ : ಗಾಂಧೀಜಿ ಹೆಸರು ತೆಗೆದಿದ್ದಕ್ಕೆ ಆಕ್ಷೇಪ
/filters:format(webp)/newsfirstlive-kannada/media/media_files/2025/11/22/cm-siddaramaiah-and-rahul-gandhi02-2025-11-22-18-23-26.jpg)
ಈ ಬಗ್ಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಚಲುವರಾಯಸ್ವಾಮಿ, ನವೆಂಬರ್ ಕ್ರಾಂತಿನೂ ಇಲ್ಲ, ಸಂಕ್ರಾಂತಿ ಕ್ರಾಂತಿನೂ ಇಲ್ಲ, ಯುಗಾದಿಗೂ ಇಲ್ಲ. 2028ಕ್ಕೆ ಕಾಂಗ್ರೆಸ್ ಕ್ರಾಂತಿ ಆಗಲಿದೆ ಅಂತಿದ್ದಾರೆ. ಆದ್ರೆ, ನಾಯಕತ್ವ ಬಗ್ಗೆ ರಾಹುಲ್, ಖರ್ಗೆ ತೀರ್ಮಾನಿಸಲಿದ್ದಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ..
ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್​​ಗೆ ಅಹಿಂದವೇ ಉಸಿರು, ಒಬಿಸಿ ಪಾಲಿಟಿಕ್ಸ್​​​ ರಾಹುಲ್​​​ಗೆ ಅಸ್ತ್ರ. ಮೂರು ರಾಜ್ಯಗಳಲ್ಲಿ ಆಡಳಿತ ಹೊಂದಿರುವ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಮಾತ್ರ ಒಬಿಸಿ ನಾಯಕ. ಹೀಗಾಗಿ ಅವರನ್ನ ಕೆಳಗಿಳಿಸಿ ಡಿಕೆಶಿಗೆ ಹೈಕಮಾಂಡ್​​​ ಪಟ್ಟ ಕಟ್ಟುತ್ತಾ ಅನ್ನೋದೇ ಯಕ್ಷ ಪ್ರಶ್ನೆ.
ಇದನ್ನೂ ಓದಿ: ʼಬುಲ್ಡೋಜರ್ ನೀತಿʼ ಎಂದ ಪಿಣರಾಯ್ ವಿಜಯನ್‌ಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us