ʼಬುಲ್ಡೋಜರ್ ನೀತಿʼ ಎಂದ ಪಿಣರಾಯ್‌ ವಿಜಯನ್‌ಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ಕೇರಳದಲ್ಲಿ ಕರ್ನಾಟಕ ಮಾದರಿ ಎಂಬ ನಾಣ್ಯ ಚಲಾವಣೆಯಲ್ಲಿದೆ.. ಅದು ವಯನಾಡು ದುರಂತದಿಂದ ಹಿಡಿದು ಹತ್ತಾರು ವಿಷಯಗಳಲ್ಲಿ ಸಾಬೀತಾಗಿದೆ.. ಅಲ್ಲಿನ ಕಾಂಗ್ರೆಸ್​​ಗೆ ನೀರೆರೆದು ಪೋಷಿಸ್ತಿರುವ ಕರ್ನಾಟಕ ಕಾಂಗ್ರೆಸ್​​​ ವಿರುದ್ಧ ಸ್ಥಳೀಯ ಸಂಸ್ಥೆಗಳಲ್ಲಿ ಹಿನ್ನಡೆಗೆ ಬಿದ್ದ ಪಿಣರಾಯಿಗೆ ಬ್ರಹ್ಮಾಸ್ತ್ರ ಸಿಕ್ಕಿದೆ..

author-image
Ganesh Kerekuli
Siddaramaiah Pinarayi Vijayan
Advertisment
  • ಮನೆಗಳ ತೆರವು, ಕರ್ನಾಟಕ ಸರ್ಕಾರದ ಬುಲ್ಡೋಜರ್ ನೀತಿ!
  • ಬೆಂಗಳೂರಿನ ಬಗ್ಗೆ ಮೂಗು ತೂರಿಸಿ ಕೇರಳ ಸಿಎಂ ವಾಗ್ದಾಳಿ!
  • ಬೆಂಗಳೂರಿನ ಬಗ್ಗೆ ಮೂಗು ತೂರಿಸಿ ಕೇರಳ ಸಿಎಂ ವಾಗ್ದಾಳಿ!

ಕೇರಳದಲ್ಲಿ ಕರ್ನಾಟಕ ಮಾದರಿ ಎಂಬ ನಾಣ್ಯ ಚಲಾವಣೆಯಲ್ಲಿದೆ.. ಅದು ವಯನಾಡು ದುರಂತದಿಂದ ಹಿಡಿದು ಹತ್ತಾರು ವಿಷಯಗಳಲ್ಲಿ ಸಾಬೀತಾಗಿದೆ.. ಅಲ್ಲಿನ ಕಾಂಗ್ರೆಸ್​​ಗೆ ನೀರೆರೆದು ಪೋಷಿಸ್ತಿರುವ ಕರ್ನಾಟಕ ಕಾಂಗ್ರೆಸ್​​​ ವಿರುದ್ಧ ಸ್ಥಳೀಯ ಸಂಸ್ಥೆಗಳಲ್ಲಿ ಹಿನ್ನಡೆಗೆ ಬಿದ್ದ ಪಿಣರಾಯಿಗೆ ಬ್ರಹ್ಮಾಸ್ತ್ರ ಸಿಕ್ಕಿದೆ.. ಕೋಗಿಲು ಲೇಔಟ್​​ನ ತೆರವು ಘಟನೆ, ಹದ್ದಾಗಿ ಕುಕ್ಕುವ ಪ್ಲಾನ್​​​ ಜಾರಿ ಮಾಡಿದ್ದಾರೆ.. ಈ ವಿಚಾರ ಇಂಡಿಯಾ ಕೂಟದ ಒಳಗೇನೆ ರಾಜಕೀಯ ಸಮರಕ್ಕೆ ಕಾರಣವಾಗಿದೆ.. 

ಇದು ಸೂರು ಕಳೆದುಕೊಂಡು ರಸ್ತೆಯಲ್ಲಿ ನ್ಯಾಯಕ್ಕಾಗಿ ಕೂಗ್ತಿರುವ ನಿರ್ಗತಿಕರ ಬದುಕಿನ ಕಥೆ.. ಈ ಕಥೆಗೆ ಈಗ ರಾಜಕೀಯ ಸೋಂಕು ತಗುಲಿದೆ.. ಅಂದ್ಹಾಗೆ ಇದು ಯಲಹಂಕದ ಕೊಗೀಲು ಲೇಔಟ್​ನಲ್ಲಿದ್ದ 2೦೦ಕ್ಕೂ ಹೆಚ್ಚು ಮನೆಗಳನ್ನ ಜಿಬಿಎ ತೆರವು ಮಾಡಿ ಜನರನ್ನ ಸಂಕಷ್ಟಕ್ಕೆ ದೂಡಿದ ಪರಿ.. ಇದೇ ಪ್ರಕರಣ ರಾಜಕೀಯ ತಿರುವು ಪಡೆದಿದೆ.. ಘಟನೆಗೆ ಸಂಬಂಧಿಸಿದಂತೆ ಕೇರಳದ ಸಿಎಂ ಪಿಣರಾಯ್ ವಿಜಯನ್​​​, ಕರ್ನಾಟಕದಲ್ಲಿ ಉತ್ತರ ಪ್ರದೇಶದ ಬುಲ್ಡೋಜರ್ ನೀತಿ ಅಂತ ಕರೆದಿದ್ದು ಹಸ್ತಪಡೆಯನ್ನೇ ದಂಗು ಬಡಿಸಿದೆ.. ಕೇರಳ ಎಲೆಕ್ಷನ್​ ವರ್ಷದಲ್ಲಿ ಸಿಡಿದ ಧರ್ಮಾಸ್ತ್ರ ಹಸ್ತವನ್ನ ಕಂಗೆಡಿಸಿದೆ.

ಇದನ್ನೂ ಓದಿ: ಜಗತ್ತನ್ನೇ ಬೆರಗುಗೊಳಿಸಿದ ಚೀನಾದ ಹೈಪರ್​ ಲೂಪ್​ ಮ್ಯಾಗ್ಲೆವ್​ ರೈಲು !

ಕೋಗಿಲು ಲೇಔಟ್​ನಲ್ಲಿನ ಮನೆಗಳ ತೆರವಿಗೆ ವಾಗ್ದಾಳಿ ನಡೆಸಿದ್ದಾರೆ.. ಈ ಮೂಲಕ 4-5 ತಿಂಗಳಲ್ಲಿ ಆಗಮಿಸ್ತಿರುವ ಕೇರಳ ವಿಧಾನಸಭೆ ಚುನಾವಣೆಗೆ ಇದನ್ನೇ ಅಸ್ತ್ರವಾಗಿಸಿದ್ದಾರೆ.. ಇದು ಇಷ್ಟಕ್ಕೆ ಸೀಮಿತವಾಗಿಲ್ಲ.. ಪಿಣರಾಯಿ ವಿಜಯನ್​​​ ಪೋಸ್ಟ್ ಬೆನ್ನಲ್ಲೇ ಕೇರಳ ಸಂಸದರ ನಿಯೋಗ ಸ್ಥಳಕ್ಕೆ ಭೇಟಿ  ನೀಡಿ ಮಾಹಿತಿ ಕಲೆ ಹಾಕಿದೆ.. 


ಇತ್ತ ಡೆಲ್ಲಿಯಲ್ಲಿ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ, ಮೊದಲೇ ನೋಟಿಸ್​​ ನೀಡಲಾಗಿತ್ತು ಅಂತ ಸಮರ್ಥಿಸಿದ್ದಾರೆ.. ಬೇರೆ ವ್ಯವಸ್ಥೆ ಮಾಡಲು ಹೇಳಿದ್ದಾಗಿ ತಿಳಿಸಿದ್ರು.. ಇತ್ತ ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ವಾಸ್ತವ ಸ್ಥಿತಿ ತಿಳಿಯದೇ ಮಾತಾಡುವುದು ಸರಿಯಲ್ಲ, ಬುಲ್ಡೋಜರ್​​ ಪದ್ಧತಿ ಬಳಸಿಲ್ಲ ಅಂತ ಟಾಂಗ್​ ಕೊಟ್ರೆ, ಸಚಿವ ಖರ್ಗೆ ದಲಿತಾಸ್ತ್ರ ಜೊತೆಗೆ ಚುನಾವಣೆಯ ಕಾರಣ ಕೊಟ್ಟು ಕೌಂಟರ್​​​ ನೀಡಿದ್ದಾರೆ. 

ಮನೆ ತೆರವು ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​​ಗೆ ಡಿಕೆ ಶಿವಕುಮಾರ್ ಈ ತೆರವು ಕಾನೂನುಬದ್ಧವಾಗಿ ನಡೆದಿದೆ ಅಂತ ವಿವರವಾದ ವರದಿ ಸಲ್ಲಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.. ಒಟ್ಟಾರೆ, ಕೇರಳದಲ್ಲಿ ಕರ್ನಾಟಕ ಮಾದರಿ ಪ್ರಭಾವ ಬೀರುವ ಯತ್ನಗಳು ಕಳೆದ 2 ವರ್ಷದಿಂದ ನಡೆದಿದೆ.. ಎಡಪಕ್ಷಗಳ ಆಡಳಿತಕ್ಕೆ ಕೊನೆ ಹಾಡಲು ಸತತ ಯತ್ನಗಳಿಗೆ ಕೋಗಿಲು ಲೇಔಟ್​​ ತೆರವು ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗಿದೆ. 

ಇದನ್ನೂ ಓದಿ: ‘ಕರ್ಪೂರ’ ಮನೆಗೆ ರಕ್ಷಾ ಕವಚ.. ಅಬ್ಬಾ ಎಷ್ಟೊಂದು ಲಾಭ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Siddaramaiah Pinarayi Vijayan
Advertisment