ನಾಯಕತ್ವ ಬದಲಾವಣೆ ಗದ್ದಲ; ರಾತ್ರೋರಾತ್ರಿ ಆಸ್ಟ್ರೇಲಿಯಾ ವಿಮಾನ ಏರಲು ಸಜ್ಜಾದ 20 ಶಾಸಕರು! ಲಿಸ್ಟ್ ಇಲ್ಲಿದೆ

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಗೊಂದಲಗಳು ಜೋರಾಗಿರುವ ಸಮಯದಲ್ಲೇ, ಆಡಳಿತ ಪಕ್ಷದ ಸುಮಾರು 20 ಶಾಸಕರು ಮತ್ತು ಪರಿಷತ್ ಸದಸ್ಯರು ಸಾಮೂಹಿಕವಾಗಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

author-image
Ganesh Kerekuli
Siddaramaiah and DK Shivakumar (2)
Advertisment

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಗೊಂದಲಗಳು ಜೋರಾಗಿರುವ ಸಮಯದಲ್ಲೇ, ಆಡಳಿತ ಪಕ್ಷದ ಸುಮಾರು 20 ಶಾಸಕರು ಮತ್ತು ಪರಿಷತ್ ಸದಸ್ಯರು ಸಾಮೂಹಿಕವಾಗಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

ಇಂದಿನಿಂದ ಮಾರ್ಚ್ 1ರವರೆಗೆ ಪ್ರವಾಸ

ಶಾಸಕರು 'ಅಧ್ಯಯನ ಪ್ರವಾಸ'ದ ನೆಪದಲ್ಲಿ ಆಸ್ಟ್ರೇಲಿಯಾಗೆ (Australia) ಹಾರಲು ಸಜ್ಜಾಗಿದ್ದಾರೆ. ಇಂದಿನಿಂದ (ಮಂಗಳವಾರ) ಮಾರ್ಚ್ 1ರವರೆಗೆ ಈ ಪ್ರವಾಸ ನಿಗದಿಯಾಗಿದೆ. ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವಾಗ ಶಾಸಕರ ಈ ನಡೆ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬಾರದು ಎಂದು ಪ್ರವಾಸದಿಂದ ಹಿಂದ ಸರಿದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಖ್ಯಾತ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್​ಮೇಲ್..!

ಸಚಿವ ಕೆ. ವೆಂಕಟೇಶ್ ನೇತೃತ್ವದಲ್ಲಿ ಈ ತಂಡ ವಿದೇಶಕ್ಕೆ ತೆರಳುತ್ತಿದ್ದು, ಪ್ರಮುಖ ಶಾಸಕರ ಹೆಸರುಗಳು ಇಲ್ಲಿವೆ.

  1. ಕೆ. ವೆಂಕಟೇಶ್ (ಪಶುಸಂಗೋಪನಾ ಸಚಿವ)
  2. ವಸಂತ್ ಕುಮಾರ್ (ಕೆಪಿಸಿಸಿ ಕಾರ್ಯಾಧ್ಯಕ್ಷ)
  3. ಪುಟ್ಟರಂಗಶೆಟ್ಟಿ (ಶಾಸಕ)
  4. ಹೆಚ್.ಡಿ. ತಮ್ಮಯ್ಯ (ಶಾಸಕ)
  5. ಹಂಪನಗೌಡ ಬಾದರ್ಲಿ (ಶಾಸಕ)
  6. ದೇವೇಂದ್ರಪ್ಪ (ಶಾಸಕ)
  7. ಯಶವಂತರಾಯಗೌಡ ಪಾಟೀಲ್ (ಶಾಸಕ)
  8. ಬಿ.ಎಂ. ನಾಗರಾಜ್ (ಶಾಸಕ)
  9. ಜೆ.ಟಿ. ಪಾಟೀಲ್ (ಶಾಸಕ)
  10. ಅಲ್ಲಮಪ್ರಭು ಪಾಟೀಲ್ (ಶಾಸಕ)
  11. ಬಸನಗೌಡ ದದ್ದಲ್ (ಶಾಸಕ)
  12. ಎ.ಆರ್. ಕೃಷ್ಣಮೂರ್ತಿ (ಶಾಸಕ)
  13. ಬಸನಗೌಡ ತುರುವಿಹಾಳ್ (ಶಾಸಕ)
  14. ಬಿ.ಬಿ ಚಿಮ್ಮನಕಟ್ಟಿ (ಶಾಸಕ)
  15. ಮಹಾಂತೇಶ ಕೌಜಲಗಿ (ಶಾಸಕ)
  16. ರಾಘವೇಂದ್ರ ಹಿಟ್ನಾಳ್ (ಶಾಸಕ)
  17. ಶರಣಗೌಡ ಬಯ್ಯಾಪುರ (ಎಂಎಲ್​ಸಿ)
  18. ತಿಮ್ಮಯ್ಯ (ಎಂಎಲ್​ಸಿ)
  19. ರಘುಮೂರ್ತಿ (ಶಾಸಕ)
  20. ಅನಿಲ್ ಚಿಕ್ಕಮಾದು (ಶಾಸಕ)

ಇದನ್ನೂ ಓದಿ:6 ಕೋಟಿ ಆಸ್ತಿಗಾಗಿ ಹೆತ್ತ ತಂದೆಯನ್ನೇ ಮುಗಿಸಿದ ಪಾಪಿ ಮಕ್ಕಳು..! ವಿಲ್ ಬರೆದಿದ್ದೇ ತಪ್ಪಾಯ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Karnataka MLAs Foreign Tour
Advertisment