Advertisment

ಖ್ಯಾತ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್​ಮೇಲ್..!

ಖ್ಯಾತ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ಸ್ಪರ್ಧಿಯಾಗಿದ್ದ ಯುವತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಾಶ್‌ರೂಮ್‌ನಲ್ಲಿ ಗುಟ್ಟಾಗಿ ವಿಡಿಯೋ ಚಿತ್ರೀಕರಿಸಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ದೂರು ದಾಖಲಾಗಿದೆ.

author-image
Ganesh Kerekuli
blackmail
Advertisment
  • ನಟಿಗೆ ‘ವಾಶ್‌ರೂಮ್ ವಿಡಿಯೋ’ ಕಂಟಕ
  • ಸ್ಪೋರ್ಟ್ಸ್ ಈವೆಂಟ್​ನಲ್ಲಿ ಭಾಗಿಯಾಗಿದ್ದ ಸೆಲೆಬ್ರಿಟಿ
  • ವಾಶ್​ರೂಮ್​ಗೆ ಹೋದಾಗ ವಿಡಿಯೋ ಚಿತ್ರೀಕರಣ

ಬೆಂಗಳೂರು: ಖ್ಯಾತ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರ ಸ್ಪರ್ಧಿಯಾಗಿದ್ದ ಯುವತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ (Blackmail) ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಾಶ್‌ರೂಮ್‌ನಲ್ಲಿ ಗುಟ್ಟಾಗಿ ವಿಡಿಯೋ ಚಿತ್ರೀಕರಿಸಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಿಟಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisment

ಘಟನೆ ನಡೆದಿದ್ದು ಎಲ್ಲಿ?

ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಕ್ರೀಡಾ ಕೂಟವೊಂದರಲ್ಲಿ (Sports Event) ರಿಯಾಲಿಟಿ ಶೋ ತಾರೆ ಭಾಗವಹಿಸಿದ್ದರು. ಈ ವೇಳೆ ಅವರು ವಾಶ್‌ರೂಮ್‌ಗೆ (Washroom) ಹೋದಾಗ, ಕಿಡಿಗೇಡಿಯೊಬ್ಬ ಗುಟ್ಟಾಗಿ ವಿಡಿಯೋ ಚಿತ್ರೀಕರಿಸಿದ್ದಾನೆ. ಅಷ್ಟೇ ಅಲ್ಲದೇ ಫೋಟೋಗಳನ್ನು ಕೂಡ ಕ್ಲಿಕ್ಕಿಸಿಕೊಂಡಿದ್ದಾನೆ.

ಇದನ್ನೂ ಓದಿ: ರಿಷಭ್ ಶೆಟ್ಟಿರಿಂದ ಮತ್ತೊಂದು ಪೌರಾಣಿಕ ಸಿನಿಮಾಗೆ ಫೆಬ್ರವರಿ 22 ರಂದು ಮುಹೂರ್ತ!: ಅಂಜನಾದ್ರಿಯಲ್ಲಿ ಜೈ ಹನುಮಾನ್‌ಗೆ ಚಾಲನೆ

ಸ್ನೇಹಿತೆಗೆ ವಿಡಿಯೋ ಕಳುಹಿಸಿ ಡಿಮ್ಯಾಂಡ್

ವಿಚಿತ್ರವೆಂದರೆ, ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದಲೇ ವಿಡಿಯೋ ಮಾಡಿದ್ದ ಆರೋಪಿ, ಅದನ್ನು ನೇರವಾಗಿ ಸಂತ್ರಸ್ತ ಯುವತಿಗೆ ಕಳುಹಿಸಿಲ್ಲ. ಬದಲಾಗಿ ಯುವತಿಯ ಸ್ನೇಹಿತೆಯೊಬ್ಬರ ಇನ್‌ಸ್ಟಾಗ್ರಾಮ್ (Instagram) ಖಾತೆಗೆ ಆ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದಾನೆ. ‘ನಾನು ಕೇಳಿದಷ್ಟು ಹಣ ನೀಡದಿದ್ದರೆ, ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.

Advertisment

ಕೇವಲ ಮೆಸೇಜ್ ಮಾಡಿದ್ದಲ್ಲದೆ, ಆರೋಪಿ ವಿಡಿಯೋ ಕಾಲ್ ಮೂಲಕ 3-4 ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾನೆ. ಇದೇ ರೀತಿ 4-5 ವಿಡಿಯೋ ತುಣುಕುಗಳನ್ನು ಕಳುಹಿಸಿ ಮಾನಸಿಕವಾಗಿ ಹಿಂಸಿಸಿದ್ದಾನೆ ಎಂಬ ಆರೋಪ ಇದೆ. ಬ್ಲ್ಯಾಕ್‌ಮೇಲ್ ಟಾರ್ಚರ್ ತಾಳಲಾರದೆ, ಟಾಪ್-5 ಹಂತಕ್ಕೆ ತಲುಪಿದ್ದ ರಿಯಾಲಿಟಿ ಶೋ ಸ್ಪರ್ಧಿ ಅಂತಿಮವಾಗಿ ಕಾನೂನಿನ ಮೊರೆ ಹೋಗಿದ್ದಾರೆ. ಆರೋಪಿ ಕಳುಹಿಸಿದ ವಿಡಿಯೋ ಹಾಗೂ ಫೋಟೋ ಸಾಕ್ಷಿಗಳನ್ನು ಇಟ್ಟುಕೊಂಡು ಸಿಟಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಕಿಶನ್ ಕಂ​ಬ್ಯಾಕ್ ಜರ್ನಿ ಸಖತ್ ಥ್ರಿಲ್ಲಿಂಗ್.. ಅಂದು ಯಾರಿಗೂ ಬೇಡವಾಗಿದ್ದ ಬ್ಯಾಟರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Reality Show Contestant Blackmail
Advertisment
Advertisment
Advertisment