/newsfirstlive-kannada/media/media_files/2026/02/17/ishan-kishan-6-2026-02-17-08-57-11.jpg)
ಫಿಯರ್​ಲೆಸ್, ಡಿಸ್ಟ್ರಕ್ಟೀವ್ ಌಂಡ್ ಡೇಂಜರಸ್ ಇಶಾನ್ ಕಿಶನ್ ಇದೀಗ ಟೀಮ್ ಇಂಡಿಯಾದ ಪೋಸ್ಟರ್ ಬಾಯ್ ಆಗಿದ್ದಾರೆ. ಸಿಡಿಲಬ್ಬರದ ಬ್ಯಾಟಿಂಗ್ ಜೊತೆಗೆ ಶರವೇಗದಲ್ಲಿ ರನ್ ಕಲೆಹಾಕ್ತಿರುವ ಜಾರ್ಖಂಡ್ ವಿಕೆಟ್ ಕೀಪರ್ ಬ್ಯಾಟರ್, ಟಿ-20 ಕ್ರಿಕೆಟ್​​​ನ ಕಿಂಗ್ ಆಗಿ ಮೆರೆಯುತ್ತಿದ್ದಾರೆ. ಕಿಶನ್ ಬ್ಯಾಟಿಂಗ್ ಆರ್ಭಟಕ್ಕೆ ಬದ್ಧವೈರಿ ಪಾಕಿಸ್ತಾನ ಕೂಡ ಬೆಚ್ಚಿಬಿದ್ದಿದೆ.​​
ಇಶಾನ್ ಕಿಶನ್ ‘ಕಿಂಗ್’ ಇನ್ನಿಂಗ್ಸ್
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್, ರಣರೋಚಕ ಇನ್ನಿಂಗ್ಸ್ ಆಡಿದ್ರು. ಲಂಕಾದಲ್ಲಿ ಪಾಕ್ ಬೌಲರ್​ಗಳ ದಹನ ಮಾಡಿದ ಕಿಶನ್, 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು. ಪಾಕ್ ಲೆಗ್​ಸ್ಪಿನ್ನರ್​​ಗಳ ವಿರುದ್ಧ ಕಿಶನ್ ಆರ್ಭಟಿಸಿದ್ರು. 17 ಎಸೆತಗಳಲ್ಲಿ 41 ರನ್​ ಚಚ್ಚಿದ ಇಶಾನ್, ಗೇಮ್ ಚೇಂಜಿಂಗ್ ಇನ್ನಿಂಗ್ಸ್ ಆಡಿದ್ರು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದ 30 ಶಾಸಕರ ವಿದೇಶ ಪ್ರವಾಸ: ಪ್ರಾಯೋಜಕರು ಯಾರೆಂಬುದು ನಿಗೂಢ!!
/filters:format(webp)/newsfirstlive-kannada/media/media_files/2025/12/21/ishan-kishan-2025-12-21-10-50-42.jpg)
2 ವರ್ಷಗಳ ಹಿಂದೆ ಕಿಶನ್ ಯಾರಿಗೂ ಬೇಡವಾಗಿದ್ದೇಕೆ?
ಡಿಸೆಂಬರ್ 2023, ಸೌತ್ ಆಫ್ರಿಕಾ ಪ್ರವಾಸದ ವೇಳೆ ಇಶಾನ್ ಕಿಶನ್, ಮೆಂಟಲ್ ಫೆಟೀಗ್​​​ ಕಾರಣ ನೀಡಿ, ಟೀಮ್ ಇಂಡಿಯಾದಿಂದ ಹೊರನಡೆದಿದ್ರು. ಆದ್ರೆ ಅಸಲಿ ಕಾರಣ ಅದಲ್ಲ. ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನಗೊಂಡಿದ್ದ ಇಶಾನ್ ಕಿಶನ್, ತಂಡದಿಂದ ಹೊರಬರುವ ಕಠಿಣ ನಿರ್ಧಾರ ಕೈಗೊಂಡಿದ್ರು. ನಂತರ 2024ರಲ್ಲಿ ಇಶಾನ್ ಕಿಶನ್, ತನ್ನ ಸೆಂಟ್ರೆಲ್ ಕಾಂಟ್ರ್ಯಾಕ್ಟ್ ಕೂಡ ಕಳೆದುಕೊಂಡಿದ್ರು. ಆಗ ಇಶಾನ್ ಕಿಶನ್ ಕ್ರಿಕೆಟ್ ಕರಿಯರೇ ಮುಗಿತು ಅಂತ ಬಿಂಬಿಸಲಾಗಿತ್ತು. ಅಂದು ಕಿಶನ್, ಯಾರಿಗೂ ಬೇಡವಾಗಿದ್ರು.​​​​
ತಂಡದಿಂದ ಡ್ರಾಪ್ ಆದ್ರೂ ಸೆಂಟ್ರೆಲ್ ಕಾಂಟ್ರ್ಯಾಕ್ಟ್ ಕೈತಪ್ಪಿದ್ರೂ, ಇಶಾನ್ ಕಿಶನ್ ಎಲ್ಲೂ ಬಹಿರಂಗವಾಗಿ ಮಾತನಾಡಲಿಲ್ಲ. ಬದಲಿಗೆ ಮೌನವಾಗೇ ಕಠಿಣ ಅಭ್ಯಾಸ ಆರಂಭಿಸಿದ್ರು. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ನೀಡಿದ್ರು. ಡೊಮೆಸ್ಟಿಕ್​ ಕ್ರಿಕೆಟ್​ಗೆ ಮರಳಿ, ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ್ರು. ಆಯ್ಕೆಗಾರರು ಇಶಾನ್ ಕಿಶನ್ ರನ್​ದಾಹ ನೋಡಿ, ಬೆರಗಾದ್ರು. ರಾಷ್ಟ್ರೀಯ ತಂಡದಲ್ಲಿ ಮತ್ತೆ ಚಾನ್ಸ್ ನೀಡಿದ್ರು.
ಇದನ್ನೂ ಓದಿ: ಜೈಲಿನಲ್ಲೇ ನಟ ದರ್ಶನ್‌ಗೆ ಇಂದು 49ನೇ ಹುಟ್ಟುಹಬ್ಬದ ಸಂಭ್ರಮ: ದರ್ಶನ್ ಭೇಟಿಯಾದ ಹೆಂಡ್ತಿ, ಮಗ
/filters:format(webp)/newsfirstlive-kannada/media/media_files/2026/01/24/ishan-kishan-3-2026-01-24-08-16-40.jpg)
ಮಾಡಿದ ಇಶಾನ್ ಕಿಶನ್, ಡಿಫರೆಂಟ್ ಪ್ಲೇಯರ್ ಆಗಿ ಕಂಡುಬಂದ್ರು. ಕಿಶನ್ ಬ್ಯಾಟಿಂಗ್​ನಲ್ಲಿ ಬದಲಾವಣೆ ಇತ್ತು. ಜವಾಬ್ದಾರಿ ಎದ್ದು ಕಾಣ್ತಿತ್ತು. ಬ್ಯಾಲೆನ್ಸ್ಡ್ ಅಗ್ರೆಶನ್ ಇತ್ತು. ಹೊಸ ಆಟಗಾರನಂತೆ ಕಂಡ ಇಶಾನ್ ಕಿಶನ್, ಈ ವರ್ಷ 7 ಟಿ-ಟ್ವೆಂಟಿ ಪಂದ್ಯಗಳನ್ನ ಆಡಿದ್ರು. ಅದ್ರಲ್ಲಿ 1 ಶತಕ ಮತ್ತು 3 ಅರ್ಧಶತಕಗಳನ್ನ ಸಿಡಿಸಿ, ಮಾಸ್ಟರ್ ಕ್ಲಾಸ್ ಬ್ಯಾಟಿಂಗ್ ನಡೆಸಿದ್ರು.
ಇಶಾನ್ ಕಿಶನ್​​​ ಬದಲಾಗಿದ್ದಾರೆ ಅನ್ನೋದಕ್ಕೆ ಕೆಲ ಉದಾಹರಣೆಗಳಿವೆ. ಈ ಹಿಂದೆ ಜಾರ್ಖಂಡ್ ವಿಕೆಟ್ ಕೀಪರ್ ಬ್ಯಾಟರ್, ಸಿಕ್ಕಾಪಟ್ಟೆ ಕಾಮಿಡಿ ಮಾಡ್ತಿದ್ರು. ಆದ್ರೀಗ ಕಿಶನ್ ಕಾಮಿಡಿಗಳನ್ನ ಕಡಿಮೆ ಮಾಡಿ, ಬ್ಯಾಟಿಂಗ್ ಮೇಲೆ ಹೆಚ್ಚು ಫೋಕಸ್ ಮಾಡಲು ಶುರುಮಾಡಿದ್ದಾರೆ. ಟೀಮ್ ಹಡಲ್​​ನಲ್ಲೂ ಜವಾಬ್ದಾರಿಯುತವಾಗಿ ಮಾತನಾಡುತ್ತಿದ್ದಾರೆ. ತಮ್ಮ ಗುರಿಯತ್ತ ಹೆಚ್ಚು ಫೋಕಸ್ ಮಾಡ್ತಿದ್ದಾರೆ.
27 ವರ್ಷದ ಟ್ಯಾಲೆಂಟೆಡ್ ಕ್ರಿಕೆಟರ್ ಇಶಾನ್ ಕಿಶನ್ ‘ಪವರ್ ಪ್ಲೇ’ ಹೀಗೆ ಮುಂದುವರೆಯಲಿ. ಟೀಮ್ ಇಂಡಿಯಾಗೆ ಹೆಚ್ಚು ಹೆಚ್ಚು ಪಂದ್ಯಗಳನ್ನ ಗೆಲ್ಲಿಸಿಕೊಡಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ.
ಇದನ್ನೂ ಓದಿ: ರಿಷಭ್ ಶೆಟ್ಟಿರಿಂದ ಮತ್ತೊಂದು ಪೌರಾಣಿಕ ಸಿನಿಮಾಗೆ ಫೆಬ್ರವರಿ 22 ರಂದು ಮುಹೂರ್ತ!: ಅಂಜನಾದ್ರಿಯಲ್ಲಿ ಜೈ ಹನುಮಾನ್‌ಗೆ ಚಾಲನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us