/newsfirstlive-kannada/media/media_files/2025/10/14/ramesh_babu-2025-10-14-23-02-57.jpg)
ಬೆಂಗಳೂರು: ಆರ್​ಎಸ್​ಎಸ್ ಬ್ಯಾನ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದರು. ಸದ್ಯ ಈ ಸಂಬಂಧ ಬಿಜೆಪಿಯವರು ಕಾಂಗ್ರೆಸ್​ ಸಚಿವರ ವಿರುದ್ಧ ಮುಗಿ ಬಿದ್ದಿದ್ದಾರೆ. ಸದ್ಯ ಈ ಕುರಿತು ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು, ಪ್ರಿಯಾಂಕ್ ಖರ್ಗೆ ಪರವಾಗಿ ಕಾಂಗ್ರೆಸ್ ಪಕ್ಷ ಇರುತ್ತೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ಮಾತನಾಡಿ, ಬಿಜೆಪಿಯವರು ಸಂಘ ಪರಿವಾರವನ್ನ ಮುಂದಿಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ಅವರು ಬಳಸುತ್ತಿರುವ ಭಾಷೆ ನೋಡಿದ್ರೆ ಟ್ರೈನಿಂಗ್ ಸರಿಯಾಗಿ ಆಗಿಲ್ಲ. ಮುನಿರತ್ನ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಡಿಸಿಎಂ ವೇದಿಕೆಗೆ ಕರೆದರೂ ಸಾಂಕೇತಿಕವಾಗಿ ಪ್ರತಿಭಟನೆಗೆ ಕುಳಿತರು. ಆದರೆ ಕರಿಟೋಪಿ ಜೊತೆ ಚಡ್ಡಿ ಎಲ್ಲಿಂದ ಬಂತು ಅಂತಾ ಅವರಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕರಿಟೋಪಿ ಜೊತೆ ಚಡ್ಡಿ ಎಲ್ಲಿಂದ ಬಂತು ಎನ್ನುವುದು ಮೊದಲು ತಿಳಿದು ಚೆಡ್ಡಿ ಜೊತೆ ಒಂದು ಪೋಟೋ ಹಾಕಿಬೇಕು. ಸಿಟಿ ರವಿ, ಬಿವೈ ವಿಜಯೇಂದ್ರ, ಸಿ.ಸಿ ಪಾಟೀಲ್, ಕೆ.ಎಸ್ ಈಶ್ವರಪ್ಪ ಇವರೆಲ್ಲರೂ ಪ್ರಿಯಾಂಕ್ ಖರ್ಗೆ ವಿರುದ್ಧ ಮುಗಿಬಿದಿದ್ದಾರೆ. ಸಿಸಿ ಪಾಟೀಲ್ ಕ್ಲೀಪಿಂಗ್ ಒಂದನ್ನ ನೋಡಿದೆ. ಅವರು ಸದನದಲ್ಲಿ ಹೇಗೆ ಮಾಡಿದ್ರು ಎಂದು ಗೊತ್ತಿದೆ. ಪ್ರತಾಪ್ ಸಿಂಹಗೆ ಕೂಗು ಮಾಲಿ ಅಂತಾ ಟೈಟಲ್ ಇಡಬಹುದು. ಸಿಟಿ ರವಿ ಒಬ್ಬ ಮಹಿಳಾ ಸಚಿವರ ಬಗ್ಗೆ ಏನು ಮಾತನಾಡಿದ್ರು, ಅದು ಏನಾಯ್ತು ಅಂತಾ ಎಲ್ಲ ಗೊತ್ತಿದೆ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಹೆಸರಿನಡಿ ಬೇರೆ ರಾಜಕೀಯ ಆಗುತ್ತಿದ್ರೆ ಕ್ರಮ ತಗೊಳ್ಳಿ ಅಂತಾ ಬರೆದಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳು ವರದಿ ತರಿಸೋದಕ್ಕೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ನೀವೆಲ್ಲ ನಾಥುರಾಮ್ ಗೋಡ್ಸೆ ಅವರ ವಂಶಸ್ಥರು ಅದರ ಡಿಎನ್ಎ ನಿಮ್ಮಲಿಯೇ ಇದೆ. ಅಶೋಕ್ ಸರ್ಕಾರಕ್ಕೆ ಧಮ್ಮು ಇಲ್ಲ ತಾಕತ್ ಇಲ್ಲ ಅಂದಿದ್ದಾರೆ. ವಿರೋಧ ಪಕ್ಷದ ವೈಫಲ್ಯ ನಾಯಕರಲ್ಲಿ ಆರ್ ಅಶೋಕ್ ಮೊದಲಿಗರು. ವಿಧಾನಸಭೆಯಲ್ಲಿ ಜನರ ಪರ ಮಾತನಾಡಿ ಅಂದ್ರೆ ರೇವಣ್ಣ ಅವರೇ ನಿಂಬೆಹಣ್ಣು ತಗೋ ಬನ್ನಿ ಅಂತಾರೆ ಎಂದಿದ್ದಾರೆ.
ಇದನ್ನೂ ಓದಿ: ಆಭರಣ ಪ್ರಿಯರಿಗೆ ಶಾಕ್ ಮೇಲೆ ಶಾಕ್​.. ದಾಖಲೆ ಮಟ್ಟದಲ್ಲಿ ಬೆಳ್ಳಿ ದರ ಏರಿಕೆ..!
ಇಂದಿರಾ ಗಾಂಧಿ ಇದ್ದಾಗ ಆರ್‌ಎಸ್ಎಸ್ ನಿಷೇಧಕ್ಕೆ ಒಳಗಾಗಿತ್ತು. ವಿರೋಧ ಪಕ್ಷದ ನಾಯಕರು ಸಿಎಂಗೆ ಏಕವಚನದಲ್ಲಿ ಪ್ರಶ್ನೆ ಮಾಡ್ತಾರೆ. ಕೆಳಮಟ್ಟದ ಭಾಷೆ ಬಳಸಿಕೊಂಡು ಅವರ ಅಸ್ತಿತ್ವಕ್ಕೆ ಓಡಾಡುತ್ತಿದ್ದಾರೆ. ಇಲ್ಲಿಯವರೆಗೂ ಸಮರ್ಥ ಉತ್ತರ ನೀಡಲಾಗದ ಅಶ್ವಥ್ ನಾರಾಯಣ್ ಕೂಡ ಮಾತನಾಡುತ್ತಿದ್ದಾರೆ. ಸಿಸಿ ಪಾಟೀಲ್ ಇರಬೇಕು, ಮುನಿರತ್ನ ಬೇಕು. ಇಂತಹ ನಾಯಕರನ್ನ ಮುಂದಿಟ್ಟುಕೊಂಡು ನೀವು ಹೋಗೋ ಅನಿವಾರ್ಯ ಇದೆ. ಜಗನ್ನಾಥ್ ಭವನದಲ್ಲಿ ಅರ್ಧ ಗಂಟೆ ಮಾತನಾಡ್ತೀರಾ?. ದಯವಿಟ್ಟು ಆ ಜಗನ್ನಾಥ ಯಾರು ಅಂತಾ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿವೆ ಕಾಂಗ್ರೆಸ್ ನಾಯಕರು ಬೆದರೋದಿಲ್ಲ. ಸಂಘ ಪರಿವಾರದ ಸಂಸ್ಕೃತಿ ಇದೇನಾ ಅಂತಾ ದಯಮಾಡಿ ಹೇಳಿ. ಮಹಿಳೆಯರಿಗೆ ಗೌರವ ನೀಡದೇ ಇರೋದು, ಗೊಡ್ಡು ಬೆದರಿಕೆ ಹಾಕೋದು ಸಂಸ್ಕೃತಿನಾ?. ಇದೇ ನಮ್ಮ ಸಂಸ್ಕೃತಿ ಅಂತ ಬಹಿರಂಗವಾಗಿ ಒಪ್ಪಿಕೊಳ್ಳಿ ಎಂದು ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ