Advertisment

CM ಸಿದ್ದರಾಮಯ್ಯಗೂ ಮೊದಲೇ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿದ್ದು ಯಾಕೆ?

ಸಿಎಂ ಸಿದ್ದರಾಮಯ್ಯ, ದೆಹಲಿ ಭೇಟಿ ಬಗ್ಗೆ ಮಾಹಿತಿ ನೀಡಿದರು. ಮುಂದಿನ ತಿಂಗಳು ದೆಹಲಿಗೆ ಹೋಗ್ತಿದ್ದು, ಹೈಕಮಾಂಡ್​​ ಜೊತೆ ರಾಜ್ಯ ರಾಜಕೀಯದ ವಿದ್ಯಾಮಾನ, ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡ್ತೀನಿ ಎಂದಿದ್ದರು.

author-image
Bhimappa
CM_SIDDU_DKS
Advertisment

ರಾಜ್ಯ ಕಾಂಗ್ರೆಸ್​ನಲ್ಲಿ ಸರ್ಜರಿ ಆಗೋದು ಗ್ಯಾರಂಟಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಂತೆ ಸಂಚಲನ ಸೃಷ್ಟಿಯಾಗಿದೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಗೂ ಮೊದಲೇ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ದೌಡಾಯಿಸಿ, ಹೈಕಮಾಂಡ್​ ಭೇಟಿಗೆ ಕಾದು ಕುಳಿತ್ತಿದ್ದಾರೆ. ಇದರ ನಡುವೆ ಸಚಿವರು ಸಂಪುಟ ಪುನರ್ ರಚನೆ ವಿಷ್ಯದಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. 

Advertisment

ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ನವೆಂಬರ್​ ಕ್ರಾಂತಿ, ಅಧಿಕಾರ ಹಂಚಿಕೆ, ಉತ್ತರಾಧಿಕಾರ ಗದ್ದಲವೇ ಮಾರ್ಧನಿಸುತ್ತಿದೆ. ಅದರಲ್ಲೂ ಕುಂದಾನಗರಿಯಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಅದೊಂದು ಸುಳಿವು ಕಾಂಗ್ರೆಸ್​​ ಮನೆಯಲ್ಲಿ ತಲ್ಲಣವನ್ನೇ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ದೌಡಾಯಿಸಿದ್ದು, ಭಾರೀ ಕುತೂಹಲ ಮೂಡಿಸಿದೆ.

dk shivakumar (6)
ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ

ಹೈಕಮಾಂಡ್​ ಜೊತೆ ನಾಯಕತ್ವ ಚರ್ಚೆ ಮಾಡ್ತಾರಾ ಡಿ.ಕೆ ಶಿವಕುಮಾರ್?

ಕುಂದಾನಗರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಸಿಎಂ ಸಿದ್ದರಾಮಯ್ಯ, ದೆಹಲಿ ಭೇಟಿ ಬಗ್ಗೆ ಮಾಹಿತಿ ನೀಡಿದರು. ಮುಂದಿನ ತಿಂಗಳು ದೆಹಲಿಗೆ ಹೋಗ್ತಿದ್ದು, ಹೈಕಮಾಂಡ್​​ ಜೊತೆ ರಾಜ್ಯ ರಾಜಕೀಯದ ವಿದ್ಯಾಮಾನ, ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡ್ತೀನಿ ಎಂದಿದ್ದರು. ಹೀಗೆ ಹೇಳಿದ ಬೆನ್ನಲ್ಲೇ ಅಲರ್ಟ್​ ಆದ ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂಗೂ ಮೊದಲೇ ದೆಹಲಿಗೆ ದೌಡಾಯಿಸಿ, ಹೈಕಮಾಂಡ್​ಗೆ ಭೇಟಿಗಾಗಿ ಕಾದುಕುಳಿತಿದ್ದಾರೆ. ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಗೊತ್ತಾಗಿದೆ.

ಸಂಪುಟ ಪುನಾರಚನೆ ವಿಷ್ಯ ಹಸ್ತ ಪಡೆಯಲ್ಲಿ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ ಕೆಲ ಸಚಿವರು ತ್ಯಾಗದ ಮಾತುಗಳನ್ನಾಡ್ತಿದ್ರೆ, ಸಚಿವ  ಶಿವರಾಜ್​ ತಂಗಡಗಿ, ಹಣೆ ಬರಹ ಹೆಂಗ್​ ಇದ್ಯೋ ಹಾಗೆ ಆಗುತ್ತೆ  ಅಂತ ದೇವರ ಮೇಲೆ ಭಾರ ಹಾಕಿದ್ದಾರೆ.

Advertisment

ರಾಜಕೀಯವಾಗಿ ಯಾವುದೇ ಹೇಳಿಕೆ ಕೊಡಬಾರದು ಎಂದು ನಮಗೆ ತುಂಬಾ ಸ್ಟ್ರಿಕ್ಟ್​ ಆಗಿ ಸೂಚನೆ ಇದೆ. ಹೈಕಮಾಂಡ್ ಹೇಳಿದ್ದನ್ನ ಕೇಳುತ್ತೇವೆ. ಇನ್ನೊಂದರ ಬಗ್ಗೆ ಮಾತನಾಡಲ್ಲ. ಅವರು ಹೇಳಿದಂತೆ ನಾವು ಮಾಡುತ್ತೇವೆ ಅಷ್ಟೇ. 

 ಶಿವರಾಜ್​​ ತಂಗಡಗಿ, ಸಚಿವ

ಇದನ್ನೂ ಓದಿ: ಆರ್ಭಟಿಸಲಿರೋ ‘ಮೋಂತಾ’ ಸೈಕ್ಲೋನ್..​ ಅಕ್ಟೋಬರ್ 29ರವರೆಗೆ ಧಾರಾಕಾರ ಮಳೆ, ಗಾಳಿ

shivaraj thangadagi

ಇನ್ನು ಸಚಿವ ಹೆಚ್​.ಕೆ ಪಾಟೀಲ್​​, ಸಂಪುಟ ವಿಸ್ತರಣೆ ಬದಲಾವಣೆ ಎಲ್ಲಾ ಪ್ರಶ್ನೆಗಳಿಗೂ ಸಿಎಂ ಸಿದ್ದರಾಮಯ್ಯ ಕಡೆಗೆ ಕೈ ತೋರಿದ್ದಾರೆ.

Advertisment

ಕಾಂಗ್ರೆಸ್​ ಪದ್ಧತಿ ಎಂದರೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಸಚಿವ ಸಂಪುಟ ಪುನರರಚನೆ ಮಾಡಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎದೆಲ್ಲಾ ಸರಿಯಾಗಿ ಇರುತ್ತದೆ. ವಿಸ್ತರಣೆ ಮಾಡೋದು, ಬದಲಾವಣೆ ಮಾಡೋದು ಎಲ್ಲ ಸಿಎಂ ವಿವೇಚನೆಗೆ ಬಿಟ್ಟಿದ್ದು. 

ಹೆಚ್​.ಕೆ.ಪಾಟೀಲ್​, ಸಚಿವ

ನವೆಂಬರ್​ ತಿಂಗಳು ಹತ್ತಿರವಾಗ್ತಿದ್ದಂತೆ, ಕಾಂಗ್ರೆಸ್​ನಲ್ಲಿ ಕ್ರಾಂತಿಯ ಸದ್ದು, ಜೋರಾಗುತ್ತಿದ್ದು, ಬಿಹಾರ ಎಲೆಕ್ಷನ್​ ಬಳಿಕ ರಾಜ್ಯ ಕಾಂಗ್ರೆಸ್​ನಲ್ಲಿ ಸರ್ಜರಿ ಆಗೋದು ಗ್ಯಾರೆಂಟಿ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH Political news
Advertisment
Advertisment
Advertisment