Advertisment

‘ರಾಯರಿದ್ದಾರೆ’ ಎಂದ ಡಿಕೆ ಶಿವಕುಮಾರ್.. ಹಬ್ಬದ ದಿನ ಇನ್ನೂ ಏನು ಹೇಳಿದರು?

ಡಿಸಿಎಂ ಡಿ.ಕೆ ಶಿವಕುಮಾರ್ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ಪತ್ನಿ ಜೊತೆಗೆ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಪಂಚಮುಖಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ರು.

author-image
Ganesh Kerekuli
dk shivakumar
Advertisment

ಡಿಸಿಎಂ ಡಿ.ಕೆ ಶಿವಕುಮಾರ್ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ಪತ್ನಿ ಜೊತೆಗೆ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಪಂಚಮುಖಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ರು.  ಬಳಿಕ ಮೂಲ ರಾಮ ದೇವರ ದರ್ಶನವನ್ನೂ ಮಾಡಿದರು.

Advertisment

‘ಆಂಜನೇಯ ಸ್ವಾಮಿ ಸಮಾಜ ಸೇವಕ, ಆಂಜನೇಯ ಸ್ವಾಮಿ ಸಮಾಜದ ತ್ಯಾಗಿ’ ಎಂದು ಮಂತ್ರಾಲಯದಲ್ಲಿ ಡಿಕೆ ಶಿವಕುಮಾರ್ ಮಾತ್ನಾಡಿದ್ದಾರೆ. ಯಾರು ತ್ಯಾಗ ಮಾಡ್ತಾರೆ, ಅವರನ್ನು ಗುರುತಿಸುತ್ತಾರೆ ಎನ್ನುವುದಕ್ಕೆ ಆಂಜನೇಯ ಸ್ವಾಮಿಯೇ ಸಾಕ್ಷಿ.

ಜನರ ಜೊತೆ ನಿಷ್ಪಕ್ಷಪಾತವಾಗಿ ಸೇವಾ ಮನೋಭಾವದಿಂದ ಇದ್ದಾಗ, ಸಮಾಜ ನಮ್ಮನ್ನು ಗುರುತಿಸುತ್ತದೆ. ವ್ಯಕ್ತಿ ಪೂಜೆ ಮಾಡಬಾರದು, ಪಕ್ಷ ಪೂಜೆ ಮಾಡಬೇಕು. ಕಾಂಗ್ರೆಸ್ ಪಕ್ಷ ಇದ್ರೆ ನಾವೆಲ್ಲ. ಗುಂಪು ರಾಜಕಾರಣ ಮಾಡಲು ನಾನು ಅವಕಾಶ ಕೊಟ್ಟಿಲ್ಲ. ಬೋಸರಾಜು ಶಾಸಕ ಅಲ್ಲದೇ ಇದ್ರೂ ಯಾಕೇ ಅವರನ್ನು ಮಂತ್ರಿ ಮಾಡಿದ್ರು? ಹಗಲು ರಾತ್ರಿ ಅವರು ಪಕ್ಷದ ಕೆಲಸ ಮಾಡಿದ್ದಾರೆ ಎಂದು ಪಕ್ಷ ಅವರನ್ನು ಮಂತ್ರಿ ಮಾಡಲಾಗಿದೆ. 

ನಮ್ಮ ಸರ್ಕಾರ ಬಂದಮೇಲೆ ಯಡಿಯೂರಪ್ಪ ಹೇಳಿದ್ರು. ಒಂದು ಕಾಳು ಅಕ್ಕಿ ಕಡಿಮೆ ಕೊಟ್ರೂ ನಾವು ಒಪ್ಪಲ್ಲ ಅಂತಾ. ಮೋದಿ ಹೇಳಿದ್ರು ಸರ್ಕಾರ ದಿವಾಳಿ ಆಗುತ್ತೆ ಎಂದು. ಆದ್ರೆ ಮೊನ್ನೆ ಬಿಜೆಪಿ ಅವರು ಬಿಹಾರದಲ್ಲಿ ಒಮ್ಮೆಲೆ 10 ಸಾವಿರ ಹಣ ಕೊಡ್ತಿದ್ದಾರೆ. ನಮ್ಮ ಮಾದರಿ ಬಿಜೆಪಿ ಅನುಸರಿಸ್ತಿದಾರೆ
ನಮ್ಮ ಗ್ಯಾರೆಂಟಿ ಮಾದರಿ ಯೋಜನೆಗಳನ್ನು ಅವರು ಕಾಪಿ ಮಾಡ್ತಿದ್ದಾರೆ. 

Advertisment

ಜಾತ್ಯಾತೀತ ತತ್ವದ ಮೇಲೆ ನಾವು ಬದುಕಬೇಕು. ದೇಶದ ಉದ್ದಗಲಕ್ಕೂ ರಾಹುಲ್ ಗಾಂಧಿ ಪಾದಯಾತ್ರೆ ಮಾಡಿದ್ರು. ಅವರು ಯಾತ್ರೆ ಮಾಡಿದ ಎಲ್ಲಾ ಕಡೆ ಕಾಂಗ್ರೆಸ್ ಗೆದ್ದಿದೆ. ಒಂದೇ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿಲ್ಲ ಎಂದರು. 

ಇದನ್ನೂ ಓದಿ: ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ವಿರುದ್ಧ ರೇಪ್ ಕೇಸ್‌ : ಸಂತ್ರಸ್ಥ ಮಹಿಳೆಯಿಂದ ಡಿಜಿಪಿಗೆ ದೂರು ಸಲ್ಲಿಕೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK Shivakumar
Advertisment
Advertisment
Advertisment