ಮೈಸೂರು: ಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಎಲ್ಲಾ ಧರ್ಮದವರಿಗೂ ಇದೆ. ಅದು ಹಿಂದೂಗಳ ಆಸ್ತಿ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿ ನಾಯಕರ ತೀವ್ರ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ಉಪಮುಖ್ಯಮಂತ್ರಿ, ಎಲ್ಲರೂ ಚಾಮುಂಡಿ ಬೆಟ್ಟಕ್ಕೆ ಹೋಗ್ತಾರೆ. ಅದು ಅವರ ನಂಬಿಕೆ. ನಾವೂ ಗುರುದ್ವಾರಕ್ಕೆ ಹೋಗ್ತೇವೆ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ. ಎಷ್ಟೋ ಜನ ಹಿಂದೂಗಳು ಮುಸ್ಲಿಂ ಆಗಿ ಕನ್ವರ್ಟ್ ಆಗಿಲ್ವಾ? ಅಯೋಧ್ಯೆಗೆ ಹಿಂದೂಗಳಷ್ಟೇ ಬರಬೇಕು ಎಂದು ಏಕೆ ಬೋರ್ಡ್ ಹಾಕಿಲ್ಲ? ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಎಂದಿದ್ದಾರೆ.
ಮೈಸೂರು ಸಂಸದರಿಂದ ಟಾಂಗ್
ಡಿಕೆಶಿ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿ.. ಡಿಕೆಶಿ ಹೇಳಿಕೆ ಖಂಡನೀಯ ಹಾಗೂ ನಿಂದನೀಯ. ಚಾಮುಂಡಿ ಬೆಟ್ಟ ಶಕ್ತಿಪೀಠ ಶಾಸ್ತ್ರಸಮ್ಮತ ಕೋಟ್ಯಂತರ ಹಿಂದೂಗಳ ಪವಿತ್ರ ಸ್ಥಳ. ಕಾಂಗ್ರೆಸ್ ಯಾವಾಗಲೂ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದು ನಕಲಿ ಸೆಕ್ಯುಲರಿಸಂ ಪ್ರದರ್ಶನ ಮಾಡುತ್ತದೆ. ಕರ್ನಾಟಕದ ಜನ ಎಲ್ಲ ಧರ್ಮಗಳನ್ನೂ ಗೌರವಿಸುತ್ತಾರೆ. ಆದರೆ ಹಿಂದೂ ಹಬ್ಬಗಳು, ಸಂಪ್ರದಾಯಗಳು ದೇವಾಲಯಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಮುಸ್ಲಿಮರ ಸ್ವತ್ತು ಅಲ್ಲ
ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿ.. ಚಾಮುಂಡಿ ಬೆಟ್ಟ ಪಕ್ಕ ಹಿಂದೂಗಳ ಸ್ವತ್ತು, ಮುಸ್ಲಿಂ ಸ್ವತ್ತು ಅಲ್ಲ. ಇಂತಹ ನೂರು ಜನ ಡಿಕೆಶಿ ಬಂದರೂ ಅದನ್ನು ಮಾಡಲು ಆಗಲ್ಲ. 100ಕ್ಕೆ 1000% ಅದು ಹಿಂದೂಗಳ ಸ್ವತ್ತು. ಚಾಮುಂಡಿ, ಧರ್ಮಸ್ಥಳ, ತಿರುಪತಿ, ಶಬರಿಮಲೆ ಅಯ್ಯಪ್ಪ ಹಿಂದೂಗಳ ಸ್ವತ್ತು. ಅವುಗಳನ್ನು ಮುಟ್ಟಿದರೆ ದಂಗೆ ಆಗುತ್ತದೆ ಹುಷಾರು. ಕಾಂಗ್ರೆಸ್ನಲ್ಲಿ ನಮಸ್ತೆ ಇಟಲಿ ಎಂದಿದ್ದರೆ ಅವಾರ್ಡ್ ಕೊಟ್ಟಿರೋರು. ಡಿಕೆಶಿ ಭಾರತ ಮಾತೆ ಎಂದಿದ್ದಕ್ಕೆ ಎಲ್ಲರೂ ಮುಗಿಬಿದ್ದಾರೆ. ಅದಕ್ಕೆ ದೇಶದಲ್ಲಿ ಕಾಂಗ್ರೆಸ್ ಖಾಲಿ ಡಬ್ಬಾ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ