/newsfirstlive-kannada/media/media_files/2025/08/18/r_ashok-1-2025-08-18-16-23-59.jpg)
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾ*ವು ಪ್ರಕರಣದ ತನಿಖೆ ನಡೆಯುತ್ತಿದೆ. ಇದರ ನಡುವೆ ವಿಧಾನಸಭೆ ಕಲಾಪದಲ್ಲಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಸ್ಕ್ ಮ್ಯಾನ್ ಮೊದಲ ದಿನ ಬರುವಾಗ ಟ್ರೈಲರ್ ರೀತಿ ಬುರುಡೆ ಹಿಡಿದುಕೊಂಡು ಬಂದ. ಇದರಿಂದ ಎಷ್ಟು ಹೆಣಗಳನ್ನು ತೋರಿಸಬಹುದು ಎಂದುಕೊಂಡರು. ಅವನು ಬುರುಡೆ ಹಿಡಿದುಕೊಂಡು ಬಂದಾಗ ಆ ಬುರುಡೆ ಬಗ್ಗೆ ತನಿಖೆ ಮಾಡಬೇಕಿತ್ತು. ಜಿಲ್ಲಾಧಿಕಾರಿ, ತಹಶೀಲ್ದಾರ್ ಸ್ಥಳಕ್ಕೆ ಬರಬೇಕಿತ್ತು. ಅದೆಲ್ಲ ಬಿಟ್ಟು ಎಲ್ಲರೂ ಅವನ ಹಿಂದೆ ಬಿದ್ದರು ಎಂದು ಆರ್.ಅಶೋಕ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: FSL ವರದಿ ಬರುವವರೆಗೂ ಎಸ್​ಐಟಿಯಿಂದ ತನಿಖೆ ತಾತ್ಕಾಲಿಕ ಸ್ಥಗಿತ; ಡಾ.ಜಿ ಪರಮೇಶ್ವರ್
/filters:format(webp)/newsfirstlive-kannada/media/media_files/2025/08/14/dharmastala_case-2025-08-14-07-59-53.jpg)
ಅನಾಮಿಕ ತೋರಿಸಿದಲ್ಲೆಲ್ಲಾ ಅಗೆದರೂ ಏನು ಸಿಗಲಿಲ್ಲ, ಇದು ಹೇಗಾಗಿದೆ ಎಂದರೆ ಬೆಟ್ಟ ಅಗೆದರು ಇಲಿ ಸಿಗಲಿಲ್ಲ, ಸದನದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರಲ್ಲಿ ಸೊಳ್ಳೆ ಕೂಡ ಸಿಗಲಿಲ್ಲ. ವರದಿಯಲ್ಲಿ ಏನು ಇಲ್ಲ. ಸುಮ್ಮನೇ ಯಾವುದೋ ಪ್ರಶ್ನೆಗೆ ಉತ್ತರ ಕೊಡುವಂತೆ ಹೇಳಿದ್ದಾರೆ. ಅನಾಮಿಕ ಬಂದು ಬುರುಡೆ ತೆಗೆಯುವಾಗ ಅನುಮತಿ ಕೊಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಈಗ ಹೇಳಿದ್ದನಲ್ಲ ಅವನಲ್ಲ ಮುಖ್ಯ. ಇವನಿಂದ ಇರುವವರು, ಆ ಗ್ಯಾಂಗ್ ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ್ ಅವರು ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ಹೇಳಿದ್ದಾರೆ. ಬುರುಡೆ ತೆಗೆದುಕೊಳ್ಳಲು ಅವನು ಒಂದು ವೇಳೆ ಅನುಮತಿಯನ್ನೇ ತೆಗೆದುಕೊಂಡಿಲ್ಲ ಎಂದರೆ ತನಿಖೆಗೆ ಹೇಗೆ ಅವಕಾಶ ಕೊಟ್ಟಿದ್ದೀರಿ. ಈಗ 16, 17 ಸ್ಥಳಗಳಲ್ಲಿ ಭೂಮಿ ಅಗೆದರು ಏನು ಸಿಕ್ಕಿಲ್ಲ. ಅವನಿಂದ ಏನು ಸಿಕ್ಕಿಲ್ಲ ಎಂದರೆ ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಮಿಳುನಾಡಿನಲ್ಲಿದ್ದ ಅನಾಮಿಕಗೆ ಆಸೆ ತೋರಿಸಲಾಗಿದೆ. ಮನೆ ಕಟ್ಟಿಕೊಡುತ್ತೇವೆ ಎಂದು ಹೇಳಲಾಗಿದೆಯಂತೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us