/newsfirstlive-kannada/media/media_files/2025/08/18/dr-parameshwar-2025-08-18-12-53-08.jpg)
ಡಾ.ಜಿ ಪರಮೇಶ್ವರ್, ಗೃಹ ಸಚಿವರು
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾ*ವು ಪ್ರಕರಣದ ತನಿಖೆ ನಡೆಸಲು ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಜುಲೈ 20 ರಂದು ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಎಡಿಜಿಪಿ ಪ್ರಣವ ಮೊಹಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ, ಆರೋಪ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಲು ಸರ್ಕಾರ ಸೂಚನೆ ನೀಡಿದೆ.
ಅಂತೆಯೇ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳದಲ್ಲಿ ಬೀಡು ಬಿಟ್ಟಿದ್ದು, ಅನಾಮಿಕ ದೂರದಾರ ನೀಡುತ್ತಿರುವ ಮಾಹಿತಿ ಮೇರೆಗೆ ‘ಬರುಡೆ ರಹಸ್ಯ’ ಹಿಂದೆ ಬಿದ್ದಿದ್ದಾರೆ. ಈಗಾಗಲೇ ಗುಂಡಿ ಅಗೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅನಾಮಿಕ ದೂರುದಾರ ಹೇಳಿಕೊಂಡಂತೆ ಮಣ್ಣು ಮಾಡಿದ್ದಾನೆ ಎನ್ನಲಾಗ್ತಿರುವ ಸ್ಥಳಗಳನ್ನು ಅಗೆದು ಸಾಕ್ಷ್ಯಕ್ಕಾಗಿ ಹುಡುಕಾಟ ನಡೆಸ್ತಿದ್ದಾರೆ.
ಎಸ್ಐಟಿ ತನಿಖೆ ಮಧ್ಯೆ ಧರ್ಮಸ್ಥಳ ಕುರಿತಾಗಿ ದಿನಕ್ಕೊಂದು ಕಥೆಗಳು ಸೃಷ್ಟಿ ಆಗ್ತಿವೆ. ಆ ಕಥೆಗೆ ಬರೀ ರೆಕ್ಕೆಪುಕ್ಕಗಳು ಮಾತ್ರ ಸಿಗ್ತಿವೆ. ಅನಾಮಿಕ ಹೇಳ್ದಂತೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ಇದು ಧರ್ಮಸ್ಥಳದ ಭಕ್ತರ ಆಕ್ರೋಶಕ್ಕೆ ಕಾರಣ ಆಗಿದೆ. ಕೇವಲ ಕ್ಷೇತ್ರದ ವಿರುದ್ಧದ ಹುನ್ನಾರ ಅಂತ ಹೋರಾಟಗಳ ಮ್ಯಾರಾಥಾನ್ ಶುರುವಾಗಿದೆ. ಪಾಲಿಟಿಕ್ಸ್ ಫೈಟ್ ಜೋರಾಗಿದೆ. ಈ ನಡುವೆ ಕಮಲಪಾಳಯ ಧರ್ಮಸ್ಥಳ ಚಲೋ ಕೈಗೊಂಡಿದೆ. ಖುದ್ದು ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಇಡೀ ಕೇಸರಿ ಟೀಮ್ ಧರ್ಮಸ್ಥಳದಲ್ಲಿ ಲಂಗರು ಹಾಕಿ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಎಸ್ಐಟಿ ರಚನೆ ಮಾಡಿದ್ದೇ ತಪ್ಪು ಅನ್ನುವಷ್ಟು ಕೋಪ ಸಿಡಿದಿದೆ. ಈ ಹಿನ್ನೆಲೆಯಲ್ಲಿ ಇವತ್ತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಎಸ್ಐಟಿ ತನಿಖೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ನೀಡ್ತಿದ್ದಾರೆ.
ಪರಮೇಶ್ವರ್ ಹೇಳಿದ್ದೇನು..?
- ಸದನಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಂದ ಮಾಹಿತಿ
- ನಿರಂತರ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರ ಹೇಳಿದ್ದಾನೆ
- ಧರ್ಮಸ್ಥಳ ಸುತ್ತ ಅನೇಕ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ದೂರು (03/07/2025)
- ಅತ್ಯಂತ ಭಾರವಾದ ಹೃದಯದಿಂದ ಹಾಗೂ ಪಾಪದಿಂದ ಹೊರ ಬರಲು ಇದಕ್ಕೆ ನಿರ್ಧಾರ ಮಾಡಿದ್ದೇನೆ
- ಕೊಲೆಯಾದ ಅನೇಕ ಯುವತಿ, ಮಹಿಳೆ, ಪುರುಷರ ಶವಗಳನ್ನು ಹೂತು ಹಾಕಿದ್ದೇನೆ
- 4/07/2025 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ
- ಮ್ಯಾಜಿಸ್ಟ್ರೇಟ್ ಕೋರ್ಟ್ ಹೇಳಿದ ಮೇಲೆ ಪೊಲೀಸರು ತನಿಖೆ ಮಾಡುತ್ತಾರೆ
- ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆಯುತ್ತಾರೆ
- ಸಮೂಹ ಮಾಧ್ಯಮಗಳ ವರದಿ ಕಾರಣ ಎಸ್ಐಟಿ ಮಾಡಿ ಎಂದು ಮಹಿಳಾ ಆಯೋಗದ ಅಧ್ಯಕ್ಷರು ಹೇಳುತ್ತಾರೆ
- ಧರ್ಮಸ್ಥಳದಲ್ಲಿ ಕಳೆದ 20 ವರ್ಷಗಳಿಂದ ಕಾಣೆಯಾದ ಮಹಿಳೆಯರು, ಯುವತಿಯರ ಬಗ್ಗೆ ತನಿಖೆ ನಡೆಸಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಪತ್ರದಲ್ಲಿ ಮಹಿಳಾ ಆಯೋಗ ಹೇಳಿದೆ.
- ಎಸ್ಐಟಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ಅನುಚೇತ್ ಅವರು ಸೇರಿ ತನಿಖೆ ನಡೆಸಲಾಯಿತು
- ಸಾಕ್ಷಿದಾರನಿಂದ 161 ಸ್ಟೇಟ್ಮೆಂಟ್ ಅನ್ನು ತೆಗೆದುಕೊಂಡು, ಇಂತಿಂತಹ ಸ್ಥಳಗಳಲ್ಲಿ ಹೂತು ಹಾಕಿದ್ದೇನೆ ಎಂದಿದ್ದಾನೆ.
- ಆ ಸ್ಥಳಗಳನ್ನು ಮ್ಯಾಪ್ ಮಾಡಿಕೊಂಡು, ಸಬ್ಮ್ಯಾಜಿಸ್ಟ್ರೇಟ್ ಅಡಿಯಲ್ಲಿ ಭೂ ಅಗೆತ ಆರಂಭವಾಗುತ್ತದೆ.
- ಭೂಮಿ ಅಗೆಯುವ ಸ್ಥಳ ಪ್ರಾರಂಭ ಮಾಡಿದಾಗ ಎರಡು ಸ್ಥಳಗಳಲ್ಲಿ ಅಸ್ಥಿ ಪಂಜರ ಸಿಗುತ್ತದೆ.
- ಆ ಅಸ್ಥಿಪಂಜರ್ ಹಾಗೂ ಆ ಸ್ಥಳದಲ್ಲಿ ಸಿಕ್ಕ ಕೆಲವು ವಸ್ತುಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗುತ್ತದೆ.
- ಕೆಂಪು ಮಣ್ಣಿನಲ್ಲಿ ಏನೇ ಇದ್ದರೂ ಅದು ಬೇಗ ಕರಗಿ ಹೋಗುತ್ತದೆ. ಮಣ್ಣಿನ ಟೆಸ್ಟ್ ಕೂಡ ಪರೀಕ್ಷೆಗೆ ಕಳುಹಿಸಿದ್ದಾರೆ.
- ಸಿಕ್ಕಿರುವ ಅಸ್ಥಿ ಪಂಜರದ ಅನಾಲಿಸಿಸ್ ನಡೆಯಬೇಕು. ಇನ್ನು ಇನ್ವೆಸ್ಟಿಗೇಷನ್ ಆಗಬೇಕು.
- ದೂರುದಾರ ಬುರುಡೆಯೊಂದನ್ನ ತೆಗೆದುಕೊಂಡು ಬಂದಿದ್ದಾನೆ. ಅದನ್ನು ಪರೀಕ್ಷೆಗೆ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.
- ದೂರುದಾರನ ಹೆಸರನ್ನು ‘ವಿ’ ಎಂದು ಹೇಳಲಾಗುತ್ತದೆ
- ಸದ್ಯ ತನಿಖೆಯೂ ತುಂಬಾ ಗಂಭೀರವಾಗಿ ನಡೆಯುತ್ತಿದೆ
- ದೂರು ದಾರ ಹೇಳಿದ ಸ್ಥಳಗಳಲ್ಲಿ ಅಗೆಯಲಾಗಿದೆ, ಮುಂದೆ ಅಗೆಯುವ ಕೆಲಸ ಸರ್ಕಾರ ಮಾಡಲ್ಲ. ಅದನ್ನು ಎಸ್ಐಟಿ ಮಾಡುತ್ತದೆ.
- ಕೆಮಿಕಲ್, ಡಿಎನ್ಎ ಅನಾಲಿಸಿಸ್ ಮಾಡಬೇಕು. ಎಫ್ಎಸ್ಎಲ್ ಇಂದ ವರದಿ ಬರವರೆಗೂ ತಾತ್ಕಾಲಿಕವಾಗಿ ಎಸ್ಐಟಿಯಿಂದಲೇ ತನಿಖೆ ಸ್ಥಗಿತ ನಿರ್ಧಾರ. ಎಫ್ಎಸ್ಎಲ್ ಇಂದ ವರದಿ ಬಳಿಕ ತನಿಖೆ ಮುಂದುವರೆಯುತ್ತದೆ.
- ಧರ್ಮಸ್ಥಳ ಕೇಸ್ ತುಂಬಾ ಸೂಕ್ಷ್ಮವಾದ ವಿಚಾರ.
ಇದನ್ನೂ ಓದಿ: ಧರ್ಮಸ್ಥಳದ ಪರವಾಗಿ ಬಿಜೆಪಿ ನೈತಿಕ ಬೆಂಬಲ; ಮಂಜುನಾಥನ ಸನ್ನಿಧಿಯಲ್ಲಿ ವಿಜಯೇಂದ್ರ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ