ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಲಾಗ್ತಿದೆ ಅಂತಾ ಆರೋಪಿಸ್ತಿರೋ ಬಿಜೆಪಿ ಧರ್ಮಸ್ಥಳ ಚಲೋಗೆ ಕರೆ ಕೊಟ್ಟಿದೆ. ಧರ್ಮಸ್ಥಳ ರಕ್ಷಣೆಗೆ ಕಮಲಪಡೆ ಮುಂದಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಧರ್ಮಸ್ಥಳ ಭೇಟಿ ಕೊಟ್ಟಿದ್ದಾರೆ.
ಅಪಪ್ರಚಾರ ನಿಲ್ಲಲಿ
ಬಿಜೆಪಿ ಶಾಸಕರು ಹಾಗು ವಿಧಾನ ಪರಿಷತ್ ಸದಸ್ಯರೊಂದಿಗೆ ಶ್ರೀಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದು, ಧರ್ಮಸ್ಥಳ ಶ್ರೀ ಮಂಜನಾಥ ಸ್ವಾಮಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿಯಾಗಿದ್ದಾರೆ ಬಿಜೆಪಿ ನಾಯಕರು.
ಇದನ್ನೂ ಓದಿ: ಧರ್ಮಸ್ಥಳದ 13ನೇ ಪಾಯಿಂಟ್ನಲ್ಲಿ ಸಿಕ್ಕಿದ್ದು ಏನು.. 15 ಅಡಿ ಅಗೆದರೂ ಎಸ್ಐಟಿ ನಿರಾಸೆ ಅನುಭವಿಸಿತಾ?
/filters:format(webp)/newsfirstlive-kannada/media/media_files/2025/08/16/bjp-dharmasthala-2025-08-16-07-20-08.jpg)
ಈ ವೇಳೆ ಎಸ್.ಆರ್.ವಿಶ್ವನಾಥ್, ಸಿಟಿ ರವಿ, ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್, ಗುರುರಾಜ್ ಗಂಟಹೊಳೆ, ಶಾಸಕ ಹರೀಶ್ ಪೂಂಜಾ, ಕಿರಣ್ ಕುಮಾರ್ ಕೊಡ್ಗಿ, ಯಶ್ ಪಾಲ್ ಸುವರ್ಣ ಧನಂಜಯ ಸರ್ಜಿ, ಭಾಗೀರತಿ ಮುರುಳ್ಯ, ಡಾ.ಭರತ್ ಶೆಟ್ಟಿ. ರಾಜೇಶ್ ನಾಯ್ಕ್, ಉಮನಾಥ ಕೋಟ್ಯಾನ್ ಹಾಜರಿದ್ದರು.
ಬಳಿಕ ಮಾತನಾಡಿರುವ ವಿಜಯೇಂದ್ರ.. ಧರ್ಮಸ್ಥಳ ಪ್ರಕರಣದ ವಿಚಾರವಾಗಿ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದಾಗ ನಾವು ಸ್ವಾಗತ ಮಾಡಿದ್ದೇವೆ. ತನಿಖೆ ಪಾರದರ್ಶಕವಾಗಿರಬೇಕು, ಬಂದಿರುವ ಅನುಮಾನಗಳು ಇತ್ಯರ್ಥ ಆಗಬೇಕು ಎಂಬ ನಿಟ್ಟಿನಲ್ಲಿ ಸ್ವಾಗತಿಸಿದ್ದೇವೆ.
ಇದನ್ನೂ ಓದಿ: ಮದುವೆ, ಡಿವೋರ್ಸ್.. ಮತ್ತೆ ಮರು ಮದುವೆ..! ಇಬ್ಬರು ಮುದ್ದಿನ ಹೆಂಡ್ತಿಯರಿಗಾಗಿ ಆಟೋ ಡ್ರೈವರ್ ಕಳ್ಳಾಟ..!
ಅಂತೆಯೇ ಇವತ್ತು ತನಿಖೆ ನಡೆಯುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಗೊಂದಲಗಳನ್ನು ಮೂಡಿಸಲಾಗುತ್ತಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರಗಳು ಆಗುತ್ತಿವೆ. ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರೇ, ಕೆಲವು ಲೆಫ್ಟಿಸ್ಟ್ಗಳ ಒತ್ತಡಕ್ಕೆ ಮಣಿದು ಎಸ್ಐಟಿ ರಚನೆ ಮಾಡಿದ್ದೇವೆ ಎಂದಿದ್ದಾರೆ. ಈ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಧರ್ಮಸ್ಥಳದ ಮೇಲೆ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ ಅನಾಮಿಕ ಯೂಟರ್ನ್; ಶ*ವ ಹೂತಿದ್ದು ನಾನೊಬ್ಬನೇ ಅಲ್ಲ.. ಸಂಚಲನ ಸೃಷ್ಟಿಸಿದ ಹೇಳಿಕೆ..!
ಸರ್ಕಾರದಿಂದ ತನಿಖೆ ನಡೆಯಲಿ. ಆದರೆ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಅಪಪ್ರಚಾರದ ವಿರುದ್ಧ ಕ್ರಮಕೈಗೊಳ್ಳದೇ ಅಪರಾಧ ಮಾಡಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ಈ ನಾಡಿನ ಜನತೆಗೆ ಕ್ಷಮೆ ಕೇಳಬೇಕು. ಬಿಜೆಪಿ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ. ಮಂಜುನಾಥ, ಅಣ್ಣಪ್ಪ ಸ್ವಾಮಿಯ ಬಗ್ಗೆ ನಡೆಯುತ್ತಿರುವ ಅಪಪ್ರಚಾರಗಳು ನಿಲ್ಲಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳಕ್ಕೆ ಬಿಜೆಪಿ ಱಲಿ.. ಅಪಪ್ರಚಾರ ಮಾಡೋರಿಗೆ ನೇರ ಎಚ್ಚರಿಕೆ ಗಂಟೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ