/newsfirstlive-kannada/media/media_files/2025/08/07/dharmastala-1-2025-08-07-14-34-39.jpg)
ಮಂಗಳೂರು: ಇದು ಉಲ್ಟಾಪಲ್ಟಾ.. ಧರ್ಮಸ್ಥಳದಲ್ಲಿ ಮುಸುಕುಧಾರಿ ಹೊಡೆದ ಯೂಟರ್ನ್ ಇದು. ಅನಾಮಿಕ ಜಾಗ ತೋರಿಸಿದ್ದೂ ಆಯ್ತು. ಎಸ್‌ಐಟಿ ಅಧಿಕಾರಿಗಳು ಕಣಕಣವನ್ನೂ ಬಿಡದೇ ಅಗೆದಿದ್ದೂ ಆಯ್ತು. ಪಾಯಿಂಟ್ 1ರಿಂದ 17ರವರೆಗೆ ಅಗೆದ್ರೂ ಸಿಕ್ಕಿದ್ದು ಬರೀ ಮಣ್ಣಷ್ಟೇ. ಹಾಗಿದ್ರೆ, ಅನಾಮಿಕ ಹೂತಿಟ್ಟ ಶವಗಳು ಎಲ್ಲಿ, ದೂರುದಾರ ಸುಳ್ಳು ಹೇಳ್ತಿದ್ದಾನಾ? ಖಾಸಗಿ ಸಂದರ್ಶನದಲ್ಲಿ ಆತ ನೀಡಿರುವ ಹೇಳಿಕೆಗಳು ಅನುಮಾನಗಳ ಮೂಟೆ ಕಟ್ಟಿದೆ.
ಇದು ಮಾಸ್ಕ್ ಮ್ಯಾನ್ ಸೀಕ್ರೆಟ್.. ಧರ್ಮಸ್ಥಳದಲ್ಲಿ ಸತತ 16 ದಿನಗಳ ಕಾಲ ಹುಡುಕಿದ್ರೂ ಶವಗಳು ಸಿಕ್ಕಿಲ್ಲ. ನಾನು ನೂರಾರು ಶವಗಳನ್ನ ಹೂತಿಟ್ಟಿದ್ದೀನಿ ಅಂತ ಎಸ್‌ಐಟಿ ಎದುರು ಹಾಜರಾಗಿದ್ದ ಮುಸುಕುಧಾರಿ ಇದುವರೆಗೂ ಬಿಟ್ಟಿದ್ದು ಬರೀ ಬುರುಡೆನಾ. ಯಾವುದು ಸತ್ಯ.. ಯಾವುದು ಸುಳ್ಳು.. ಸತ್ಯಾನ್ವೇಷಣೆಯ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ
17 ಸ್ಪಾಟ್ಗಳಲ್ಲಿ ಒಂದು ಮೂಳೆನೂ ಇಲ್ಲ. ಮಾಂಸದ ಚೂರೂ ಇಲ್ಲ. ಹೂತಿಟ್ಟಿರೋ ಶವಗಳು ಸಿಕ್ಕಿಲ್ಲ. ನಾನೊಬ್ಬನೇ ಶವ ಹೂತಿಲ್ಲ, ನನ್ನ ಜೊತೆ ಮೂವರು ಇದ್ರು ಅಂತ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅನಾಮಿಕ ಹೇಳಿದ್ದು ಅನುಮಾನ ಮೂಡಿಸಿವೆ. ನಾನು ತೋರಿಸಿದ ಕಡೆ ಶವ ಸಿಗ್ತಿಲ್ಲ, ಮಣ್ಣಿನ ಗುಣ ಬದಲಾಗಿದೆ, ಆ ಮಷಿನ್ ಕಂಡು ಹಿಡಿಯಲಿಲ್ಲ ಅಂತ ಅನಾಮಿಕ ಹೇಳಿಕೆ ಮತ್ತೊಂದು ಸಂಶಯಕ್ಕೆ ಕಾರಣವಾಗಿದೆ. ಇನ್ನು, ಈತ 90 ಮಹಿಳೆಯರು, 10 ಪುರುಷರ ಶವಗಳನ್ನು ಹೂತಿದ್ದಾನಂತೆ. ಸ್ಪಾಟ್ ನಂಬರ್ 6ರಲ್ಲಿ ಸಿಕ್ಕಿರೋ ಅಸ್ಥಿಪಂಜರವನ್ನು FSLನವರು ಸರಿಯಾಗಿ ಚೆಕ್ ಮಾಡಿಲ್ವಂತೆ. ಇನ್ನು ಎಸ್‌ಐಟಿ ಅಧಿಕಾರಿಗಳ ತನಿಖೆಯನ್ನೇ ಅನಾಮಧೇಯ ಅನುಮಾನಿಸಿದ್ದಾನೆ.
ನಾನೆಲ್ಲೂ ಓಡಿ ಹೋಗಲ್ಲ, ಯಾಕೆ ಹೋಗ್ಲಿ? ನಾನೇನು ಕಳ್ಳನಾ? ನ್ಯಾಯ ಕೊಡಿಸ್ಬೇಕು ಅಂತಿಲ್ಲ, ಶವಗಳನ್ನ ಎತ್ಕೊಟ್ಟು ಹೋಗ್ತೇನೆ. ಹೆಂಡ್ತಿ, ಮಕ್ಕಳನ್ನ ನೋಡಿಯೇ ಎರಡೂವರೆ ತಿಂಗಳಾಗ್ತಾ ಬಂತು. ಡೆಡ್‌ಬಾಡಿಗಳನ್ನ ತೋರಿಸಿ ಊರಿಗೆ ಹೋಗುತ್ತೇನೆ. ಒಬ್ಬಂಟಿಯಲ್ಲ.. ಶ* ಹೂಳುವಾಗ 3 ಜನ ಇದ್ದರು. ಅಣ್ಣ, ಬಾವ, ರಾಜು ಎಂಬಾತನ ಜೊತೆ ಹೂಳಿದ್ದೇನೆ. ಅ*ತ್ಯಾಚಾರ ಆಗಿದ್ದನ್ನ ನಾನು ಹೇಳೋಕಾಗಲ್ಲ, ಗೊತ್ತಾಗಲ್ಲ ಅಂದ್ರೆ ಅ*ತ್ಯಾಚಾರ ಆರೋಪ ಮಾಡಿರೋದೇಕೆ? ಎಸ್‌ಐಟಿ ಅಧಿಕಾರಿಗಳಿಗೆ ನನ್ಮೇಲೆ ನಂಬಿಕೆಯೇ ಇಲ್ಲ. ಅರ್ಧಕ್ಕೆ ನಿಲ್ಲಿಸಬಾರದು, ಎಲ್ಲಾನೂ ಮುಗಿಸಲೇಬೇಕು. ಎಲ್ಲಾ 5 ಸ್ಪಾಟ್ ಮುಗಿಸಿ ಕ್ಲಿಯರ್ ಮಾಡಿ ಕೊಡ್ಬೇಕು. ನನಗೆ ಹೆಣ ತೆಗೆಸಿಕೊಟ್ಟು ಅವ್ರು ಏನ್ಬೇಕಾದ್ರೂ ಮಾಡ್ಲಿ.
ಅನಾಮಿಕ
ನಾನು ಕಳ್ಳನಲ್ಲ, ನಾನೆಲ್ಲೂ ಓಡಿ ಹೋಗಲ್ಲ ಎಂದಿರೋ ಅನಾಮಿಕ, ನ್ಯಾಯ ಕೊಡಿಸಲೇಬೇಕು ಅಂತಿಲ್ಲ. ಹೆಂಡ್ತಿ, ಮಕ್ಕಳ ಮುಖ ನೋಡಿ ಎರಡೂವರೆ ತಿಂಗಳಾಯ್ತು.. ಡೆಡ್ಬಾಡಿ ತೋರಿಸಿ ಊರಿಗೆ ಹೋಗ್ತೀನಿ ಎಂದಿದ್ದಾನೆ. ಬರೀ 17 ಅಷ್ಟೇ ಅಲ್ವಂತೆ.. ಇನ್ನೂ ನಾಲ್ಕೈದು ಸ್ಪಾಟ್ಗಳಿವೆಯಂತೆ. ಸ್ಪಾಟ್ 13ರಲ್ಲಿ 80 ಶವಗಳನ್ನು ಹೂತಿದ್ದಾನಂತೆ. ಆದ್ರೆ, ಪ್ರವಾಹ ಬಂದು ಕೊಚ್ಚಿ ಹೋಗಿವೆ, ಇನ್ನು ಹೆಚ್ಚು ಆಳಕ್ಕೆ ಅಗೀಬೇಕು ಅಂತ ಹೊಸ ಕಥೆ ಹೇಳಿದ್ದಾನೆ ಅನಾಮಿಕ. ಆಪರೇಷನ್ ಅರ್ಧಕ್ಕೆ ನಿಲ್ಲಿಸಬಾರದು, ಎಲ್ಲಾ 5 ಸ್ಪಾಟ್ಗಳಲ್ಲೂ ಕಂಪ್ಲೀಟ್ ಹುಡುಕಿ ಹೆಣ ತೆಗೆಸಿಕೊಡಬೇಕು ಅಂತ ಅನಾಮಿಕ ಆಗ್ರಹಿಸಿದ್ದಾನೆ.
ಧರ್ಮಸ್ಥಳ ಪರ ಅಲ್ಲ ವಿರೋಧ ಅಲ್ಲ, ನ್ಯಾಯಬದ್ಧವಾಗಿ ನಡೆಯಬೇಕು. ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿ ಭಕ್ತಿ ಶ್ರದ್ದೆ ಆಚರಣೆ ಹೇಗೆ ನಡೆಯುತ್ತೆ ಎಂದು. ಅಲ್ಲಿ ಷಡ್ಯಂತ್ರ ನಡೆದಿದೆ. ತನಿಖೆಯಿಂದ ಹೊರಗೆ ಬರಲಿದೆ. ನಮ್ಮ ಗೃಹ ಸಚಿವರು ಸದನಕ್ಕೆ ಉತ್ತರಿಸಿಲಿದ್ದಾರೆ. ಸತ್ಯವನ್ನು ನಾಡಿನ ಜನತೆಗೆ ಗೃಹ ತಿಳಿಸುತ್ತಾರೆ. ಷಡ್ಯಂತ್ರ ಬಗ್ಗೆ ಗೃಹ ಸಚಿವರು ತಿಳಿಸುತ್ತಾರೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಬದ್ಧತೆ ಇದೆ. ಯಾವುದು ಕೂಡ ಸುಳ್ಳು ಹೇಳಿ ಷಡ್ಯಂತ್ರ ನಡೆಸಿ, ಧಾರ್ಮಿಕ ಕ್ಷೇತ್ರದ ಅಪಮಾನ, ಅಪಪ್ರಚಾರ ಮಾಡಬಾರದು. ಈ ಬಗ್ಗೆ ಸಿಎಂ ಕೂಡ ಈ ಬಗ್ಗೆ ತಿಳಿಸಿದ್ದಾರೆ. ಆರೋಪ ಸುಳ್ಳಾಗಿದ್ರೆ ಕಟ್ಟು ನಿಟ್ಟಿನ ಕ್ರಮವನ್ನು ಸಿಎಂ ತೆಗೆದುಕೊಳ್ಳಲಿದ್ದಾರೆ. ನಮ್ಮ ಸರ್ಕಾರದ ಒಂದು ಚಿಂತನೆ ಇದೆ.ಕಾನೂ ಎಲ್ಲರನ್ನು ಕಾಪಡಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ತೇಜೋವಧೆ ಮಾಡುವ ಕೆಲಸ ಮಾಡಬಾರದು.
ಡಿಕೆ ಶಿವಕುಮಾರ್
ಇತ್ತ ನಿನ್ನೆ ವಿ ಸ್ಟ್ಯಾಂಡ್ ವಿಥ್ ಧರ್ಮಸ್ಥಳ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಇವತ್ತು ವಿಭಿನ್ನ ಹೇಳಿಕೆ ನೀಡಿದ್ದಾರೆ. ನಾನು ಪ್ರಕರಣದ ಪರನೂ ಇಲ್ಲ, ವಿರೋಧನೂ ಇಲ್ಲ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಈ ಮಧ್ಯೆ ಇವತ್ತು ಧರ್ಮಸ್ಥಳದಲ್ಲಿ ಎಸ್‌ಐಟಿ ಪರಿಶೋಧನೆ ನಡೆದಿಲ್ಲ. ಆದ್ರೆ, ಅನಾಮಿಕನ ಹೇಳಿಕೆಗಳೇ ಸಂಶಯಗಳಿಗೆ ಕಾರಣವಾಗಿದೆ. ನನಗೇನೂ ಗೊತ್ತಿಲ್ಲ ಅಂದ್ರೆ ಆರೋಪ ಮಾಡಿದ್ಯಾಕೆ? ಯಾವುದು ಸತ್ಯ, ಯಾವುದು ಸುಳ್ಳು, ದಾರಿ ತಪ್ಪಿಸ್ತಿರೋದ್ಯಾರು, ಪ್ರಕರಣ ಗೊಂದಲದ ಗೂಡಾಗಿ ಪರಿಣಮಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ