ಮದುವೆ, ಡಿವೋರ್ಸ್.. ಮತ್ತೆ ಮರು ಮದುವೆ..! ಇಬ್ಬರು ಮುದ್ದಿನ ಹೆಂಡ್ತಿಯರಿಗಾಗಿ ಆಟೋ ಡ್ರೈವರ್​ ಕಳ್ಳಾಟ..!

ಮೈಸೂರಿನ ಜೆಪಿ ನಗರದಲ್ಲಿ ಇಬ್ಬರ ಹೆಂಡತಿಯರ ಮುದ್ದಿನ ಗಂಡನ ಮೋಸದ ಮುಖವಾಡ ಬಯಲಾಗಿದೆ. ಶಿವಕುಮಾರ್ ಇಬ್ಬರ ಹೆಂಡತಿಯರ ಮುದ್ದಿನ ಗಂಡ! ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

author-image
Ganesh Kerekuli
mysore auto driver (4)
Advertisment

ಮೈಸೂರಿನ ಜೆಪಿ ನಗರದಲ್ಲಿ ಇಬ್ಬರ ಹೆಂಡತಿಯರ ಮುದ್ದಿನ ಗಂಡನ ಮೋಸದ ಮುಖವಾಡ ಬಯಲಾಗಿದೆ. ಶಿವಕುಮಾರ್ ಇಬ್ಬರ ಹೆಂಡತಿಯರ ಮುದ್ದಿನ ಗಂಡ! 

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮದುವೆಯಾಗಿ ಡಿವೋರ್ಸ್ ಪಡೆದು ಮತ್ತೊಂದು ಮದುವೆಯಾಗಿ ಮೋಸ ಮಾಡಿದ ಆರೋಪ ಶಿವಕುಮಾರ್ ವಿರುದ್ಧ ಕೇಳಿಬಂದಿದೆ. 

ಏನಿದು ಪ್ರಹಸನ..?

ಪತಿ ಶಿವಕುಮಾರ್ ಮೋಸ ಮಾಡಿದ್ದಾನೆ ಎಂದು ಪತ್ನಿ ಶೋಭಾ ಆರೋಪ ಮಾಡಿದ್ದಾಳೆ. ಶೋಭಾಳನ್ನ ಮದುವೆ ಆಗುವ ಮುನ್ನ ಶಿವಕುಮಾರ್ ಇನ್ನೊಂದು ಮದುವೆ ಆಗಿದ್ದ. ನಂಜನಗೂಡು ತಾಲೂಕಿನ  ಲಾವಣ್ಯ ಎಂಬ ಯುವತಿಯನ್ನ 2020ರಲ್ಲಿ ಮದುವೆ ಆಗಿದ್ದ. ಲಾವಣ್ಯ ಜೊತೆ ಒಂದು ವರ್ಷ ಸಂಸಾರ ಮಾಡಿ 2021ರಲ್ಲಿ ಡಿವೋರ್ಸ್ ಕೊಟ್ಟಿದ್ದ. 

ಇದನ್ನೂ ಓದಿ:ಒಲಿಯದ ಪ್ರೀತಿ.. ಪ್ರೇಯಸಿಗೆ 9 ಬಾರಿ ಚಾಕು ಇರಿದು ಜೀವ ತೆಗೆದ, ಕೊನೆಗೆ ಕ್ರೂರಿ ಏನಾದ?

mysore auto driver (3)

ನಂತರ ಹಾಸನ ಜಿಲ್ಲೆಯ ಚನ್ನರಾಯನ ಪಟ್ಟಣದ ಯುವತಿ ಶೋಭಾ ಜೊತೆ 2022ರಲ್ಲಿ ನಂಬಿಸಿ ಮದುವೆ ಆಗಿದ್ದಾನೆ. ಮನೆಯವರ ಒಪ್ಪಿಗೆಯಂತೆ ಶೋಭಾ ಜೊತೆ ಅರೇಂಜ್ ಮ್ಯಾರೇಜ್ ಆಗಿದ್ದಾನೆ. ಮದುವೆಯಾಗಿ ಎರಡು ಮುಗ ಆಗುತ್ತಿದ್ದಂತೆಯೇ ಗಂಡನ ನಿಜ ಬಣ್ಣ ಗೊತ್ತಾಗಿದೆ ಎಂದು ಶೋಭಾ ಆರೋಪಿಸಿದ್ದಾಳೆ. ಮದುವೆ ಆಗುವ ಸಂದರ್ಭದಲ್ಲಿ ಶಿವಕುಮಾರ್​ನ ಮನೆಯವರು ಆತನಿಗೆ ಈಗಾಗಲೇ ಮದುವೆಯಾಗಿ ಡಿವೋರ್ಸ್ ಆಗಿರುವ ವಿಚಾರ ಮುಚ್ಚಿಟ್ಟಿದ್ದರು ಎಂದು ಆರೋಪಿಸಿದ್ದಾಳೆ. 

ಇದನ್ನೂ ಓದಿ: ಪ್ರೀತಿಯ ಕಂಬಳದ ಕೋಣ ಇನ್ನಿಲ್ಲ.. ಸತತ 13 ವರ್ಷ ಪದಕ, ಚೆನ್ನನ ಸಾಧನೆಗಳು ಮರೆಯಲು ಸಾಧ್ಯವೇ?

mysore auto driver

ಶೋಭಾ ಹೇಳುವಂತೆ.. ಮದುವೆ ಆದ ನಂತರ ಆತನ ಡಿವೋರ್ಸ್ ಮ್ಯಾಟರ್ ಗೊತ್ತಾಗಿದೆ. ಡಿವೋರ್ಸ್ ನಂತರವೂ ಇಬ್ಬರೂ ಕಾಂಟ್ಯಾಕ್ಟ್​​ನಲ್ಲಿದ್ದರು. ಒಂದು ದಿನ ನನಗೆ ಪೊಲೀಸರು ಕರೆ ಮಾಡಿದ್ದಾರೆ. ನಿನ್ನ ಪತಿಗೆ ಈಗಾಗಲೇ ಮದುವೆ ಆಗಿದೆ. ಅಂದು ಡಿವೋರ್ಸ್ ನೀಡಿದ್ದ. ಆದರೆ ಇದೀಗ ಅದೇ ಹುಡುಗಿಯನ್ನ ಗರ್ಭಿಣಿ ಮಾಡಿದ್ದಾನೆ. ನೀನು ಆತನಿಗೆ ಎರಡನೇ ಹೆಂಡತಿ ಎಂದಿದ್ದಾರೆ. ನಂತರ ಆತ ಪೊಲೀಸರಿಗೆ ಹೆದರಿ  ಡಿವೋರ್ಸ್ ಆಗಿದ್ದ ಲಾವಣ್ಯಳನ್ನ ಮತ್ತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ. 

ನಾನು ಮತ್ತೆ ಆಕೆಯನ್ನು ಮದುವೆ ಆಗಲು ತೀವ್ರ ವಿರೋಧ ವ್ಯಕ್ತಪಡಿಸಿದೆ. ಆದರೆ ಪೊಲೀಸರಿಂದ ನನಗೆ ನ್ಯಾಯ ಸಿಗಲಿಲ್ಲ. ನಾನು ಮದುವೆ ವಿರೋಧಿಸಿ ಠಾಣೆಗೆ ಬಂದಾಗ ಪೊಲೀಸರು ಹೇಳಿದರು. ನೀನು ನಿನ್ನ ಗಂಡನ ಕರೆದುಕೊಂಡು ಹೋಗು ಎಂದರು. 

ಆರು ತಿಂಗಳ ಹಿಂದೆ ಅವರಿಬ್ಬರು ಮತ್ತೆ ಸಂಪರ್ಕದಲ್ಲಿ ಇರೋದು ಗೊತ್ತಾಗಿದೆ. ಒಂದು ದಿನ ನಾನು ಮನೆಯಲ್ಲಿ ಇಲ್ಲದಿದ್ದಾಗ ಆಕೆಯನ್ನು ಆತ ಕರೆದುಕೊಂಡು ಬಂದಿದ್ದಾನೆ. ನನಗೆ ಗೊತ್ತಾಗಿ ವಿಚಾರಿಸಿದಾಗ ನನ್ನ ಮೇಲೆ ದಾಳಿ ಮಾಡಲು ಯತ್ನಿಸಿದರು. ಅದಕ್ಕೆ ಕೋಪಿಸಿಕೊಂಡ ಶಿವಕುಮಾರ್.. ಇಷ್ಟ ಇದ್ರೆ ಇರು,  ಇಲ್ಲಾಂದ್ರೆ ಮನೆ ಬಿಟ್ಟು ಹೋಗು ಹಿಂಸೆ ಕೊಟ್ಟಿದ್ದಾನೆ
ಶೋಭಾ, ಸಂತ್ರಸ್ತ ಮಹಿಳೆ

ನೊಂದ ಶೋಭಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಸಿಗುತ್ತಿಲ್ಲ ನ್ಯಾಯ ಅಂತಾ ಕಣ್ಣೀರು ಇಟ್ಟಿದ್ದಾಳೆ. ಶೋಭಾಳಿಗೆ 2 ವರ್ಷದ ಗಂಡು ಮಗು, ಲಾವಣ್ಯಳಿಗೆ ಒಂದು ಹೆಣ್ಣು ಮಗು ಇದೆ. ಇನ್ನು ಶಿವಕುಮಾರ್ ಜೊತೆ ಡಿವೋರ್ಸ್ ಆಗಿದ್ದ ಸಂದರ್ಭದಲ್ಲಿ ಲಾವಣ್ಯಗೆ ಮತ್ತೊಂದು ಮದುವೆ ಆಗಿದೆ ಎಂದು ಶೋಭಾ ಆರೋಪ ಮಾಡಿದ್ದಾಳೆ. ಕೇರಳದ ಪ್ರಸೂನ್ ಎಂಬವವನ ಜೊತೆ ಲಾವಣ್ಯ ಮದುವೆ ಆಗಿದ್ದಳು ಎಂದು ಶೋಭಾ ಹೇಳಿದ್ದಾಳೆ. ಆತನನ್ನು ಬಿಟ್ಟು ಓಡಿ ಬಂದಿದ್ದಾಳೆ. ಕಳೆದ ಮೂರು ತಿಂಗಳಿಂದ ಇಬ್ಬರು ಹೆಂಡತಿಯರು ಜೊತೆಯಲ್ಲೇ ಇರಿ ಎಂದು ಶಿವಕುಮಾರ್ ಹೇಳ್ತಿದ್ದಾನೆ. ಆದರೆ ಜೊತೆಯಲ್ಲಿರುವ ಶೋಭಾ ನಿರಾಕರಿಸಿದ್ದಾಳೆ. ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಇಟ್ಟಿದ್ದಾಳೆ. 

ಇದನ್ನೂ ಓದಿ: ಕತ್ತಲೆ ಕೋಣೆಯಲ್ಲಿ 3ನೇ ರಾತ್ರಿ ಕಳೆದ ದರ್ಶನ್.. ಜೈಲಿನಿಂದ ದಾಸ 3 ಸಂದೇಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mysore news husband cheating
Advertisment