/newsfirstlive-kannada/media/media_files/2025/08/16/bgm_woman_love-2025-08-16-20-34-19.jpg)
ಬೆಳಗಾವಿ: ಗೃಹಿಣಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಒಂಭತ್ತು ಬಾರಿ ಚಾಕುವಿನಿಂದ ಇರಿದು ಜೀವ ತೆಗೆದಿದ್ದಾನೆ. ಆ ಬಳಿಕ ತಾನು ಕೂಡ ಇರಿದುಕೊಂಡಿದ್ದಾನೆ. ಈ ಘಟನೆಯು ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ.
ಆರೋಪಿ ಆನಂದ್ ಸುತಾರ್ (31) ಜೀವ ತೆಗೆದಿರುವ ಗೃಹಿಣಿ ಹೆಸರು ರೇಷ್ಮಾ. ಈ ಇಬ್ಬರಿಗೂ ಮದುವೆ ಆಗಿ ಮಕ್ಕಳಿದ್ದಾರೆ. ಆದರೂ ಅನೈತಿಕ ಸಂಬಂಧ ಬೆಳೆಸಿದ್ದರು. ಈ ಇಬ್ಬರು ಕಳೆದ ತಿಂಗಳು ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದರು. ಗಂಡ ಈ ಬಗ್ಗೆ ಪೊಲೀಸರಿಗೆ ಹೇಳಿದ್ದರು. ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದು ಆದ್ಮೇಲೆ ಮಹಿಳೆ ಅಂತರ ಕಾಯ್ದುಕೊಂಡಿದ್ದಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ.
ಇದನ್ನೂ ಓದಿ:ಪ್ರೀತಿಯ ಕಂಬಳದ ಕೋಣ ಇನ್ನಿಲ್ಲ.. ಸತತ 13 ವರ್ಷ ಪದಕ, ಚೆನ್ನನ ಸಾಧನೆಗಳು ಮರೆಯಲು ಸಾಧ್ಯವೇ?
ಆನಂದ್ ಸುತಾರ್ ಮದುವೆ ಬಳಿಕವೂ ಮಹಿಳೆ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇಬ್ಬರು ಕಳೆದ ಮೂರು ವರ್ಷಗಳಿಂದ ಸಲುಗೆ ಬೆಳೆಸಿಕೊಂಡಿದ್ದರು. ನನ್ನ ಹೆಂಡತಿಯಂತೆ ನೀನೂ, ನನ್ನ ಮಾತುಗಳನ್ನ ಕೇಳಬೇಕು ಎಂದು ಪ್ರೇಯಸಿಗೆ ಪೀಡಿಸುತ್ತಿದ್ದನು. ಆನಂದ್ಗೆ 3 ಮಕ್ಕಳು, ಮೃತ ಮಹಿಳೆಗೆ ಇಬ್ಬರು ಮಕ್ಕಳು ಇದ್ದಾರೆ.
ಕಳೆದ ತಿಂಗಳು ರೆಡ್ ಹ್ಯಾಂಡ್ ಆಗಿ ಸಿಕ್ಕ ಮೇಲೆ ಮಹಿಳೆಯ ಗಂಡ, ನಂದಗಡದ ಪೊಲೀಸರಿಗೆ ತಿಳಿಸಿದ್ದನು. ಎಚ್ಚರಿಕೆ ಕೊಟ್ಟು ಕಳಿಸಿದ ಮೇಲೆ ಮಹಿಳೆ, ಆನಂದ್ನಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಕೋಪಗೊಂಡಿದ್ದ ಅವನು, ಮಹಿಳೆಗೆ 9 ಬಾರಿ ಚಾಕುವಿನಿಂದ ಇರಿದು ಜೀವ ತೆಗೆದಿದ್ದಾನೆ. ಇದರಿಂದ ತೀವ್ರವಾಗಿ ಭಯಗೊಂಡು ಬಳಿಕ ತಾನು ಕೂಡ ಅದೇ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ