/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ರೇಣುಕಾಸ್ವಾಮಿ ಕೇಸಲ್ಲಿ ದರ್ಶನ್ ಗ್ಯಾಂಗ್ ಮತ್ತೆ ಪರಪ್ಪನ ಪಂಜರ ಸೇರಿದೆ. ದಾಸ ಕಂಬಿ ಹಿಂದೆ ಹೋಗಿ 3 ದಿನಗಳನ್ನ ಕಳೆದಾಯ್ತು. ಈ ನಡುವೆ ಅಭಿಮಾನಿಗಳಿಗೆ ದರ್ಶನ್ ಜೈಲಿನಿಂದಲೇ ಸಂದೇಶ ಕಳಿಸಿದ್ದಾರೆ. ಸಂಪರ್ಕ ಪಾರಿವಾಳವಾಗಿ ಪತ್ನಿ ವಿಜಯಲಕ್ಷ್ಮೀ ಸಂದೇಶ ರವಾನಿಸಿದ್ದಾರೆ.
ದರ್ಶನ್.. ಒಂದಷ್ಟು ತಿಂಗಳು ಜೈಲು.. ಬಳಿಕ ರಿಲೀಸ್ ಆಗಿ ಮತ್ತೊಂದಿಷ್ಟು ತಿಂಗಳು ಮೈಸೂರು, ಥಾಯ್ಲೆಂಡ್ ಅಂತಾ ಜಾಲಿ ಮೂಡ್ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ಗೆ ಮತ್ತೆ ಕತ್ತಲ ಕೋಣೆಯೇ ಖಾಯಂ ಆಗಿದೆ. ಪರಪ್ಪನ ಅಗ್ರಹಾರದ ಪಂಜರದಲ್ಲಿ ಮತ್ತೊಂದು ರಾತ್ರಿ ಕಳೆದುಹೋಗಿದೆ.
ಇದನ್ನೂ ಓದಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಪೋಟೋ ತೆಗೆದ ಅಧಿಕಾರಿಗಳು, ಪವಿತ್ರಾಗೌಡ ಮುಖದಲ್ಲಿ ನಗು!
ಪರಪ್ಪನ ಅಗ್ರಹಾರ ಜೈಲಲ್ಲಿ 3ನೇ ರಾತ್ರಿ ಕಳೆದ ದರ್ಶನ್
ಅಂತೂ ಇಂತೂ 3 ದಿನ ಕಳೀತು. ಜೈಲಿನ 4 ಕೋಣೆಯೊಳಗೆ ಬಂಧಿಯಾಗಿರೋ ದರ್ಶನ್ ಬೇಸರದಲ್ಲೇ ಕ್ಷಣ ಕಳೆಯುತ್ತಿದ್ದಾರೆ. ಸಣ್ಣದಾಗಿ ಬೆನ್ನುನೋವು ಮತ್ತೆ ಕಾಣಿಸಿಕೊಳ್ಳಲಾರಂಬಿಸಿದ್ದು, ಟೆನ್ಷನ್ ಮತ್ತೆ ಶುರುವಾಗಿದೆ. ಈ ನಡುವೆಯೂ ದರ್ಶನ್ ಅಭಿಮಾನಿಗಳನ್ನ ನೆನಪಿಸಿಕೊಂಡಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲೂ ನಿರ್ಮಾಪಕರಿಗೆ ತೊಂದರೆಯಾಗಬಾರದೆಂದು ಸಂದೇಶವೊಂದನ್ನ ರವಾನೆ ಮಾಡಿದ್ದಾರೆ.
ಜೈಲಿನಿಂದ ದರ್ಶನ್ ಸಂದೇಶ.. ಪತ್ನಿ ವಿಜಯಲಕ್ಷ್ಮೀ ಪೋಸ್ಟ್
ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ಕೊಲೆ ಆರೋಪಿ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಕಡೆಯಿಂದ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಇದು ನಿಮ್ಮ ದರ್ಶನ್‌ರ ಸಂದೇಶ ಅಂತ ವಿಜಯಲಕ್ಷ್ಮಿ ಇನ್ಸ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದಾರೆ. ಪತ್ನಿಯ ಮೂಲಕ ದರ್ಶನ್ ಕಳಿಸಿರೋ ಸಂದೇಶದಲ್ಲಿ ಒಟ್ಟು 3 ಪ್ರಮುಖ ಅಂಶಗಳನ್ನ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: ಜೈಲಲ್ಲಿ ದರ್ಶನ್.. ಎರಡು ದಿನಗಳ ಬಳಿಕ ಭಾವುಕ ಪೋಸ್ಟ್ ಹಾಕಿದ ಪತ್ನಿ ವಿಜಯಲಕ್ಷ್ಮೀ
ಜೈಲಿನಿಂದ ‘ದಾಸ’ನ 3 ಸಂದೇಶ
- ಸಂದೇಶ 01: ಅಭಿಮಾನಿಗಳ ಅಭಿಮಾನಕ್ಕೆ ಅಭಾರಿ
- ಸಂದೇಶ 02: ನಿರ್ಮಾಪಕರ ಬೆಂಬಲಕ್ಕೆ ನಿಲ್ಲಬೇಕಿದೆ
- ಸಂದೇಶ 03: ‘ಡೆವಿಲ್’ ಚಿತ್ರಕ್ಕೆ ತೊಂದರೆ ಆಗಬಾರದು
ಇದಿಷ್ಟು ದರ್ಶನ್ ಕಳಿಸಿದ ಸಂದೇಶದ ಅಂಶ.. ಈ ನಡುವೆ ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗೋ ಸಾಧ್ಯತೆ ಇದೆ. ಕಳೆದ ಬಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರೌಡಿಗಳ ಜೊತೆ ಸಂಪರ್ಕ ಬೆಳಸಿ ರಾಜಾತಿಥ್ಯ ಪಡೆದಿದ್ದಕ್ಕೆ ಸಾಕ್ಷೀ ಸಿಕ್ಕಿತ್ತು. ಸ್ಪೆಷಲ್ ಟ್ರೀಟ್ಮೆಂಟ್ ಕೊಡದಂತೆ ಸುಪ್ರೀಂ ಕೋರ್ಟ್ ಕೂಡ ಖಡಕ್ ವಾರ್ನಿಂಗ್ ನೀಡಿದ್ದು, ಈ ಬಾರಿಯೂ ಮತ್ತೆ ಅದೇ ರೀತಿ ಆಗಬಾರದೆಂದು ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಜೈಲಾಧಿಕಾರಿಗಳ ಜೊತೆ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದು, ಈ ಹಿಂದೆ ಆದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಹೀಗಾಗಿ ದರ್ಶನ್ನ ಮತ್ತೆ ಬಳ್ಳಾರಿಗೆ ಶಿಫ್ಟ್ ಮಾಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಜೈಲಾಧಿಕಾರಿಗಳು ಚಿಂತನೆ ನಡೆಸ್ತಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ದರ್ಶನ್ ಸ್ಥಿತಿ ಕಂಡು ರಮ್ಯಾ ಬೇಸರ.. ಹಳೆಯ ದಿನ ಮೆಲುಕು ಹಾಕಿ ಅಚ್ಚರಿಯ ಹೇಳಿಕೆ
ಒಂದ್ವೇಳೆ ಬೆಂಗಳೂರಿನಿಂದ ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಮಾಡಿದ್ದೇ ಆದ್ರೆ, ಮತ್ತಷ್ಟು ಸಮಸ್ಯೆ ಎದುರಾಗಲಿದೆ. ಒಟ್ಟಿನಲ್ಲಿ ದರ್ಶನ್ಗೆ ಜೈಲಿನ ದಿವಸಗಳು ದಿನಕಳೆದಂತೆ ಜಟಿಲವಾಗ್ತಿರೋದು ಸತ್ಯ.
ಇದನ್ನೂ ಓದಿ:ದೆಹಲಿಗೆ ಬಂದಿಳಿದ ಗಗನಯಾತ್ರಿ ಶುಕ್ಲಾಗೆ ಅದ್ದೂರಿ ಸ್ವಾಗತ.. ಬರಮಾಡಿಕೊಂಡ ಕ್ಷಣ ಹೇಗಿತ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ