/newsfirstlive-kannada/media/post_attachments/wp-content/uploads/2024/06/ramya-and-dbos.jpg)
ಗುರುವಾರ ಅಂದ್ರೆ ಆಗಸ್ಟ್ 13.. ನಟ ದರ್ಶನ್ ಬಾಳಲ್ಲಿ ಮತ್ತೊಂದು ಬಿರುಗಾಳಿ ಬೀಸಿದ ದಿನ. ಸುಪ್ರೀಂ ಕೋರ್ಟ್ ದರ್ಶನ್ ಬೇಲ್ಗೆ ಬ್ರೇಕ್ ಹಾಕ್ತಿದ್ದಂತೆ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರದ ದರ್ಶನ ಮಾಡಿಸಿದ್ರು. ಇಂದಿಗೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಭರ್ತಿ ಎರಡು ರಾತ್ರಿ ಕಳೆದಂತಾಗಿದೆ. ಮತ್ತದೇ ಮೌನಗಾನ, ಮನೆಯ ಧ್ಯಾನ ದರ್ಶನ್ನ ಕಾಡಿದೆ.
ಅಂದು ಡಿ ಫ್ಯಾನ್ಸ್ ವಿರುದ್ಧ ವಾರ್.. ಇಂದು ದರ್ಶನ್ ಸ್ಥಿತಿಗೆ ಮರುಕ!
ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಪಾಲಾದ ಬಗ್ಗೆ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿದ್ದ ಸ್ಯಾಂಡಲ್ವುಡ್ ಕ್ವೀನ್ ದರ್ಶನ್ ಜೊತೆಗಿನ ಹಳೇ ನೆನಪುಗಳನ್ನ ಮೆಲುಕು ಹಾಕಿ ಅವರಿಗೆ ಈ ಸ್ಥಿತಿ ಬರ್ಬಾದಿತ್ತು ಎಂದಿದ್ದಾರೆ.
ಇದನ್ನೂ ಓದಿ: ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ?. ಜೀವಾವಧಿ ಶಿಕ್ಷೆಯಾದ್ರೆ ದರ್ಶನ್ ಕಥೆ ಏನು?
ದರ್ಶನ್ ಜೈಲು ಸೇರಿದ್ದು ಬೇಸರ!
ಜಡ್ಜ್ಮೆಂಟ್ ಕೇಳಿದಾಗ ನನಗೆ ಮಿಕ್ಸ್ ರಿಯಾಕ್ಷನ್ ಇತ್ತು. ಒಂದು ಕಡೆ ನನಗೆ ಸ್ವಲ್ಪ ಬೇಜಾರು ಆಯ್ತು.. ದರ್ಶನ್ ಅವರ ಜೊತೆ ನಾನು ಕೆಲಸ ಮಾಡಿದೀನಿ, ಅವರು ಗೊತ್ತಿರೋರು. ಸೋ ಎಲ್ಲೋ ಒಂದು ಕಡೆ ನನಗೆ ಬೇಜಾರು ಏನಂದ್ರೆ ಅವರ ಜೀವನ ಹಾಳು ಮಾಡಿಕೊಂಡ್ರು. ಯಾಕಂದ್ರೆ ನಾವು ಶೂಟ್ ಮಾಡುವಾಗ ಕೆಲವೊಂದು ವಿಚಾರವನ್ನು ಅವರು ಹಂಚಿಕೊಂಡಿದ್ರು. ತಾವು ಸಿನಿಮಾ ಇಂಡಸ್ಟ್ರಿಗೆ ಹೇಗೆ ಬಂದ್ರು ಅನ್ನೋದ್ರ ಬಗ್ಗೆ ಹೇಳಿದ್ದರು. ಏನು ಇಲ್ಲದವ್ರು ಕಷ್ಟಪಟ್ಟು ಇಂಡಸ್ಟ್ರಿಗೆ ಬಂದು.. ಲೈಟ್ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂತ ಎಲ್ಲೋ ಒಂದು ಕಡೆ ಹೆಮ್ಮೆನೂ ಇತ್ತು.
ರಮ್ಯಾ, ನಟಿ
ಪರಪ್ಪನ ಅಗ್ರಹಾರದ ಪವಿತ್ರಾ ಬಗ್ಗೆಯೂ ರಮ್ಯಾ ಬೇಸರ!
ಮತ್ತೆ ಪರಪ್ಪನ ಅಗ್ರಹಾರದ ಪಾಲಾಗಿರೋ ದರ್ಶನ್ ಗೆಳತಿ ಪವಿತ್ರಾ ಗೌಡ ಬಗ್ಗೆಯೂ ರಮ್ಯಾ ಬೇಸರ ಹೊರಹಾಕಿದ್ದಾರೆ. ಆಕೆಯೂ ಒಬ್ಬ ತಾಯಿ, ಹೀಗಾಗಬಾರದಿತ್ತು ಎಂದಿದ್ದಾರೆ.
ಆ್ಯಕ್ಚುಲಿ ನನಗೆ ಪವಿತ್ರಾ ಗೌಡ ಅಂದ್ರೆ ಯಾರು ಅಂತನೇ ಗೊತ್ತಿರಲಿಲ್ಲ. ಈ ರೇಣುಕಾಸ್ವಾಮಿ ಕೇಸ್ ಆದಮೇಲೆಯೇ ನನಗೆ ಗೊತ್ತಾಗಿದ್ದು. ಒಂದು ಕಡೆ ಬೇಜಾರಾಗುತ್ತೆ ಯಾಕಂದ್ರೆ, ಆಕೆಯೂ ಒಬ್ಬಳು ತಾಯಿ.. ಒಬ್ಬಳು ಮಗಳಿದ್ದಾರೆ. ಈ ರೇಣುಕಾಸ್ವಾಮಿ ಅವರ ಫ್ಯಾಮಿಲಿ.. ಯಾಕಂದ್ರೆ ಅವರು ಬಡವರು.. ಆ ಈಗ ಅವರ ಈ ಅವರ ಪತ್ನಿ ಸಹ ಮಗುವನ್ನ ಹೊಂದಿದ್ದಾರೆ. ಸೋ ಅವರಿಗೆ ಎಲ್ಲೋ ಒಂದು ಕಡೆ ಜಸ್ಟೀಸ್ ಸಿಕ್ಕಿದೆ ಅಂತ ನಾನು ಅನ್ಕೋತಿನಿ
ರಮ್ಯಾ, ನಟಿ
ಒಟ್ನಲ್ಲಿ ನೀರಿನ ಮೊರೆತಕ್ಕೆ ಬಂಡೆಯೂ ಕರಗುತ್ತೆ ಅನ್ನೋ ಹಾಗೆ ಬ್ಯಾಕ್ ಟು ಬ್ಯಾಕ್ ದರ್ಶನ್‌ಗೆ ಸಂಕಷ್ಟ ಎದುರಾಗ್ತಿರೋದು ಸದ್ಯ ನಟಿ ರಮ್ಯಾರಿಗೂ ಬೇಸರ ಬರುವಂತೆ ಮಾಡಿದೆ. ದರ್ಶನ್ ಮತ್ತು ದರ್ಶನ್ ಫ್ಯಾನ್ಸ್ ವಿರುದ್ಧ ರಣಚಂಡಿಯಾಗಿದ್ದ ರಮ್ಯಾ ಏಕಾಏಕಿ ಇಷ್ಟು ಸಾಫ್ಟ್ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.
ಇದನ್ನೂ ಓದಿ:ನಟ ದರ್ಶನ್, ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಮಾನಸಿಕ ಖಿನ್ನತೆ: ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ದೂರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ