/newsfirstlive-kannada/media/media_files/2025/11/24/dk-shivakumar-8-2025-11-24-09-45-55.jpg)
ರಾಜ್ಯದ ಆಡಳಿತಾರೂಢ ಪಡಸಾಲೆಯಲ್ಲಿ ಅಧಿಕಾರದ ಮೇಲಾಟ ನಡೀತಿದೆ. ಸಂಗ್ರಾಮಕ್ಕೆ ವಿರಾಮ ಯಾವಾಗ ಬೀಳುತ್ತೆ ಅನ್ನೋದು ಸದ್ಯದ ಕುತೂಹಲ, ಸಿಎಂ ಸಿದ್ದು ಎದುರು ಪಟ್ಟದಾಟದ ನಡುವೆ ಡಿಸಿಎಂ ಡಿಕೆಶಿ ಹೊಸ ದಾಳ ಉರುಳಿಸ್ತಿದ್ದಾರೆ. ಹೈಕಮಾಂಡ್​​ಗೆ ಆಪ್ತರಾಗಿರುವ ಸಚಿವ ಜಾರ್ಜ್ ಮನೆಗೆ ಭೇಟಿ ನೀಡಿ ರಹಸ್ಯ ಚರ್ಚೆ ನಡೆಸಿದ್ದಾರೆ.ನಾಯಕತ್ವ ಫೈಟ್​​ನಲ್ಲಿ ನಮಗೆ ಬೆಂಬಲ ನೀಡುವಂತೆ ಕೋರಿದ್ದಾರೆ.
ಹೈಕಮಾಂಡ್​ಗೆ ಆಪ್ತರಾಗಿರುವವರ ಮೂಲಕ ಒತ್ತಡಕ್ಕೆ ತಂತ್ರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದ್ರೂ.. ಡಿಸಿಎಂ ಡಿಕೆಶಿ ಅವರನ್ನು ಭೇಟಿಯಾಗಿಲ್ಲ.. ತಮ್ಮ ನಿವಾಸದಿಂದ ನೂರು ಮೀಟರ್​ ಅಂತರದಲ್ಲಿ ಖರ್ಗೆ ಮನೆ ಇದ್ರೂ ಡಿಸಿಎಂ ಅತ್ತ ತಲೆಯೂ ಹಾಕಿಲ್ಲ.. ಆದ್ರೀಗ ಖರ್ಗೆಯನ್ನು ಭೇಟಿಯಾದ ಕೆ.ಜೆ.ಜಾರ್ಜ್​​ ನಿವಾಸಕ್ಕೆ ಡಿಸಿಎಂ ಡಿಕೆಶಿ ದಿಢೀರ್​ ಭೇಟಿ ನೀಡಿ ಮಾತುಕತೆ ನಡೆಸಿರೋದು ಹಲವು ಲೆಕ್ಕಾಚಾರಗಳಿಗೆ ಪುಷ್ಟಿ ನೀಡಿದೆ.
ಇದನ್ನೂ ಓದಿ: ಸಿಎಂ ಕೈಗೆ ‘ಗುಪ್ತ’ವರದಿ.. ಸಿದ್ದರಾಮಯ್ಯ ಫುಲ್ ಅಲರ್ಟ್..!
ಇಷ್ಟು ದಿನ ಕುರ್ಚಿ ಕದನದ ಕಿಚ್ಚಿನಲ್ಲಿ ತೆರೆಮರೆಯಲ್ಲೇ ಇದ್ದ ಸಚಿವ ಕೆ.ಜೆ.ಜಾರ್ಜ್​ ಸದ್ಯ ಮುನ್ನೆಲೆಗೆ ಬಂದಿದ್ದಾರೆ.. ನಿನ್ನೆ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ರಾಜ್ಯಕ್ಕೆ ಬಂದಿದ್ದ ಎಐಸಿಸಿ ಅಧ್ಯಕ್ಷರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಂತೆ ಡಿಸಿಎಂ ಡಿ.ಕೆ.ಶಿವಕುಮಾರ್​, ಸಚಿವ ಕೆ.ಜೆ.ಜಾರ್ಜ್​​ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ಡಿಕೆಶಿ-ಜಾರ್ಜ್​ ಮೀಟ್ ಸಸ್ಪೆನ್ಸ್!
ಸಚಿವ ಕೆ.ಜೆ.ಜಾರ್ಜ್​​ ಹೈಕಮಾಂಡ್​ ನಾಯಕರಿಗೆ ತೀರ ಹತ್ತಿರವಾಗಿದ್ದಾರೆ. ಹೈಕಮಾಂಡ್​​ಗೆ ಆಪ್ತರಾಗಿರುವ ಸಚಿವ ಕೆ.ಜೆ.ಜಾರ್ಜ್ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.. ಈ ವೇಳೆ ಪವರ್​ಫೈಟ್​​​ಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಜಾರ್ಜ್​ಗೆ ಡಿಕೆಶಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.. ನಿನ್ನೆ ಮಧ್ಯಾಹ್ನ ಎಐಸಿಸಿ ಅಧ್ಯಕ್ಷ ಖರ್ಗೆ ಭೇಟಿಯಾಗಿದ್ದ ಸಚಿವ ಕೆ.ಜೆ.ಜಾರ್ಜ್ ಮಾತುಕತೆ ನಡೆಸಿದ್ದರು.. ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಜೊತೆಗೂ ಸಚಿವ ಜಾರ್ಜ್​ ನಡೆಸಿದ್ದರು..
ಸಿಎಂ-ಡಿಸಿಎಂ ಕಾದಾಟದಲ್ಲಿ ಸಚಿವರ ಜಾಣ ನಡೆ
ಪಟ್ಟದಾಟ ಕುರಿತು ಮಂಡ್ಯದಲ್ಲಿ ಪ್ರತಿಕ್ರಿಯಿಸಿರೋ ಸಚಿವ ಚಲುವರಾಯಸ್ವಾಮಿ, ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಹಿಂದೇಟು ಹಾಕಿದ್ದಾರೆ. ಗೊಂದಲ ಆಗಲು ಬಿಡೋದಿಲ್ಲ, ಹೈಕಮಾಂಡ್​ ಎಲ್ಲವನ್ನು ನಿಭಾಯಿಸುತ್ತೆ ಅಂತ ಹೈಕಮಾಂಡ್​ನತ್ತ ತಿರುಗಿಸಿದ್ದಾರೆ.
ಇತ್ತ ಪವರ್​ ಫೈಟ್ ಹ್ಯಾಂಡಲ್ ಮಾಡಲು ಸುಸ್ತಾಗಿರುವ ಮಲ್ಲಿಕಾರ್ಜುನ ಖರ್ಗೆ ನನ್ನ ಹತ್ರ ಹೇಳೋಕೆ ಏನೂ ಇಲ್ಲ, ಏನೇ ಇದ್ರೂ ಹೈಕಮಾಂಡ್ ಮಾಡುತ್ತೆ ಎಂಬ ಹೇಳಿಕೆ ಈಗ ವಿಪಕ್ಷ ಬಿಜೆಪಿಗೆ ಅಸ್ತ್ರವಾಗಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಹೈಕಮಾಂಡ್ ವ್ಯಾಪ್ತಿಗೆ ಬರುವುದಿಲ್ಲವೇ? ಹಾಗಾದ್ರೆ, ಎಐಸಿಸಿ ಅಧ್ಯಕ್ಷರ ಪ್ರಕಾರ ಹೈಕಮಾಂಡ್ ಅಂದ್ರೆ, ಯಾರು ಅಂತ ಮಾಜಿ ಸಚಿವ ಸುರೇಶ್ ಕುಮಾರ್ ಎಕ್ಸ್​​ನಲ್ಲಿ ಕಾಲೆಳೆದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ಒಟ್ಟಾರೆ ಬೆಂಬಲಿಗರು ಜೊತೆಗಿದ್ದು, ಜನ ಬಯಸುವವರೆಗೆ ನಾನೇ ಮುಖ್ಯಮಂತ್ರಿ ಅನ್ನೋದು ಸಿಎಂ ಸಿದ್ದರಾಮಯ್ಯನವರ ನೇರನುಡಿ. ಇತ್ತ ಸುರಕ್ಷಿತ ಆಟ ಆಡ್ತಿರೋ ಡಿಕೆಶಿ ತಮ್ಮ ಕೆಲಸಕ್ಕೆ ಪ್ರತಿಫಲ ಯಾವಾಗ ಕೊಡ್ತೀರಿ ಅಂತ ಕೇಳ್ತಾ ಇದ್ದಾರೆ.. ಹೀಗಾಗಿ ಕಾಂಗ್ರೆಸ್​​ನಲ್ಲಿ ಸಂಧಾನವೋ, ಸಂಗ್ರಾಮವೋ ಎಂಬಂತಹ ಕಾರ್ಮೋಡ ಆವರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us