/newsfirstlive-kannada/media/media_files/2025/11/17/cm-siddaramaiah-meets-kharge-2025-11-17-19-40-37.jpg)
ಸಿದ್ದು-ಡಿಕೆಶಿ ನಡುವೆ ಕುರ್ಚಿ ಕದನ.. ದಿನಕ್ಕೊಂದು ಬೆಳವಣಿಗೆ ಕ್ಷಣಕ್ಕೊಂದು ತಿರುವು ಪಡೀತಿದೆ.. ಒಂದ್ಕಡೆ ಕುರ್ಚಿಗಾಗಿ ಡಿಕೆಶಿ ಗಾಳ ಹಾಕ್ತಿದ್ರೆ, ಇನ್ನೊಂದ್ಕಡೆ ರೇಸ್​​​ನಲ್ಲಿ ಡಿಕೆಶಿಯನ್ನೇ ಕಟ್ಟಿ ಹಾಕೋ ದಾಳ ಉರುಳ್ತಿದೆ.. ಪಟ್ಟದ ಪಗಡೆಯಲ್ಲಿ ಕುದುರೆ ವ್ಯಾಪಾರದ ಸದ್ದು ಕೇಳಿಸ್ತಿದೆ.
ಸಿದ್ದರಾಮಯ್ಯ ಅಲರ್ಟ್!
ಸಿಎಂ ಕುರ್ಚಿ ಫೈಟ್ ದಿನೇ ದಿನೇ ತಾರಕ್ಕಕ್ಕೇರುತ್ತಿದೆ. ಕರ್ನಾಟಕ ಕುರ್ಚಿ ಕುರುಕ್ಷೇತ್ರ ಡೆಲ್ಲಿ ಅಂಗಳದಿಂದ ಬೆಂಗಳೂರಿನ ಸದಾಶಿವನಗರಕ್ಕೆ ಶಿಫ್ಟ್​ ಆಗಿದೆ. ನಿನ್ನೆ ರಾತ್ರಿ ಖರ್ಗೆ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.. ಮೂರು ದಿನಗಳಲ್ಲಿ ವಿದೇಶದಿಂದ ದೆಹಲಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸಿಂಹಾಸನ ಸಸ್ಪೆನ್ಸ್​​ಗೆ ರಾಹುಲ್ ಹಾಗೂ ಸೋನಿಯಾ ತೆರೆ ಎಳೆಯಲಿದ್ದಾರೆ.
ಇದನ್ನೂ ಓದಿ: ಮತ್ತೊಂದು ದೊಡ್ಡ ದರೋಡೆ.. 80 ವರ್ಷ ವೃದ್ಧೆಯ 1.08 ಕೋಟಿ ಹಣ ‘ಡಿಜಿಟಲ್ ರಾಬರಿ’..!
ಈ ಮಧ್ಯೆ ಡಿಕೆ ಶಿವಕುಮಾರ್ ನಡೆ ಮೇಲೆ ಸಿದ್ದರಾಮಯ್ಯ ಕ್ಯಾಂಪ್​​ ಕಣ್ಣು ನೆಟ್ಟಿದೆ. ಡಿಸಿಎಂ ಡಿಕೆಶಿ ಬಣದ ಪ್ರತಿಯೊಂದು ಮಾಹಿತಿಗಳ ಸಂಗ್ರಹ ಮಾಡ್ತಿದ್ದು, ಗುಪ್ತಚರ ಇಲಾಖೆಯ ಮೂಲಕವೂ ಕ್ಷಣ ಕ್ಷಣದ ಮಾಹಿತಿ ಪಡೆಯಲಾಗ್ತಿದೆ ಅಂತ ಗೊತ್ತಾಗಿದೆ.
ಸಿಎಂ ಕೈಗೆ ‘ಗುಪ್ತ’ವರದಿ!
- ಡಿ.ಕೆ.ಶಿವಕುಮಾರ್ ನಡೆಯ ಮೇಲೆ ಸಿದ್ದರಾಮಯ್ಯ ಟೀಂ ನಿಗಾ
- ಗುಪ್ತಚರ ಇಲಾಖೆಯಿಂದ ಸಿಎಂ ಸಿದ್ದರಾಮಯ್ಯಗೆ ರಿಪೋರ್ಟ್
- ರಾಜ್ಯದಲ್ಲಿ ಶಾಸಕರ ಸಹಿ ಸಂಗ್ರಹ & ಬಲ ಹೆಚ್ಚಳಕ್ಕೆ ಡಿಕೆಶಿ ತಂತ್ರ
- ಇದನ್ನ ಗಂಭೀರವಾಗಿ ತೆಗೆದುಕೊಂಡಿರೋ ಸಿಎಂ ಸಿದ್ದರಾಮಯ್ಯ
- ಯಾವ ಶಾಸಕರನ್ನ ಸಂಪರ್ಕ ಮಾಡಿದ್ದಾರೆಂಬ ಮಾಹಿತಿ ಸಂಗ್ರಹ
- ಇದೀಗ ಸಿಎಂ ಸಿದ್ದರಾಮಯ್ಯರ ‘ಕೈ’ ಸೇರಿರೋ ಗೌಪ್ಯ ಮಾಹಿತಿ
- ಡಿಕೆಶಿ ನಡೆ ಬಗ್ಗೆ ಎಐಸಿಸಿ ಅಧ್ಯಕ್ಷರಿಗೂ ಸಿದ್ದರಾಮಯ್ಯ ಮಾಹಿತಿ
ಶಾಸಕರ ದೆಹಲಿ ಪ್ರವಾಸ ಬಗ್ಗೆ ಮಾಹಿತಿ ಸಂಗ್ರಹಿಸಿರೋ ಸಿಎಂ, ಗುಪ್ತಚರ ಇಲಾಖೆಯ ಮೂಲಕ ಕ್ಷಣ ಕ್ಷಣದ ಅಪ್ಡೇಟ್ ಪಡೆಯುತ್ತಿದ್ದಾರೆ. ನಿನ್ನೆ ಖರ್ಗೆ ಭೇಟಿಯಾಗಿ ಒಂದೂವರೆ ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಈ ವಿಚಾರವೂ ಚರ್ಚೆ ಆಗಿದೆ ಅಂತ ಗೊತ್ತಾಗಿದೆ. ಅದರಲ್ಲೂ ಡಿಕೆಶಿ ಹೇಳಿದ ಮೀನಿನ ಗಾಳದ ಕಲೆತ ಮಾರ್ಮಿಕ ಮಾತಿನಿಂದ ಸಿದ್ದರಾಮಯ್ಯ ಸ್ವಲ್ಪ ಎಚ್ಚೆತ್ತಿದಂತೆ ಕಾಣಿಸ್ತಿದೆ.
ಇದನ್ನೂ ಓದಿ: ಅಂಧ ಮಹಿಳೆಯರ ಚೊಚ್ಚಲ ಟಿ-20 ವಿಶ್ವಕಪ್: ನೇಪಾಳ ಸೋಲಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ ತಂಡ
ಸಿಎಂ ರೇಸ್​ನಲ್ಲಿ ಕುಟುಂಬಸ್ಥರಿಂದಲೂ ಕಸರತ್ತು ನಡೆಯುತ್ತಿದೆ. ಡಿ.ಕೆ ಶಿವಕುಮಾರ್​ ಪರ ನಿಂತ ಸುರೇಶ್, ಶಾಸಕರ ಬೆಂಬಲ ಪಡೆಯಲು ಸಾಥ್​​ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಡಿಕೆ ಸುರೇಶ್ ಜೊತೆ ಇವತ್ತು ಡಿಕೆಶಿ ಸುದೀರ್ಘ ಚರ್ಚೆ ನಡೆಸಿದ್ದಾರೆ.. ಕುಣಿಗಲ್ ಶಾಸಕ ರಂಗನಾಥ್ ಕೂಡ ಡಿಕೆಶಿ ನಿವಾಸದಲ್ಲೇ ಠಿಕಾಣಿ ಹೂಡಿದ್ದಾರೆ.. ಈ ನಡುವೆ ಜ್ವರ ಹಾಗೂ ಥ್ರೋಟ್ ಇನ್​​ಫೆಕ್ಷನ್ ಹಿನ್ನಲೆ ಶಾಸಕ ಡಾ.ರಂಗನಾಥ್ ಜೊತೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ..
ಈ ಸಿಎಂ ಸಿಂಹಾಸನ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ.. ಡಿಕೆ ಶಿವಕುಮಾರ್ ಸಿಎಂ ಕುರ್ಚಿಗೆ ಪಟ್ಟು ಹಿಡಿದಿದ್ದರೆ, ಇತ್ತ ಸಿದ್ದರಾಮಯ್ಯ ಐದು ವರ್ಷ ಪೂರೈಸೋದಾಗಿ ಹಠಕ್ಕೆ ಬಿದ್ದಿದ್ದಾರೆ.. ಸದ್ಯಕ್ಕೆ ಪರಿಸ್ಥಿತಿ ಕೈಮಿರುತ್ತಿದ್ದು, ಹೈಕಮಾಂಡ್​​​ ದಿಕ್ಕುತೋಚದೇ ಅಸಹಾಯಕವಾಗಿದೆ..
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us