/newsfirstlive-kannada/media/media_files/2025/12/06/dk-shivakumar-14-2025-12-06-09-13-28.jpg)
ನಮ್ಮ ಮೆಟ್ರೋ.. ಸಿಲಿಕಾನ್ ಸಿಟಿ ಮಂದಿಯ ಸುಗಮ ಸಂಚಾರದ ಸಂಪರ್ಕ ಕೊಂಡಿ. ಸಂಚಾರ ದಟ್ಟಣೆಯಿಂದ ಮುಕ್ತಿ ಕೊಟ್ಟಿರೋ ಸಂಚಾರ ಸ್ನೇಹಿ. ಇದೀಗ ನಗರದಾದ್ಯಂತ ಸಂಪರ್ಕ ಕಲ್ಪಿಸಲು ಮೆಟ್ರೋ ಕಾಮಗಾರಿಗಳು ನಡೀತಿವೆ. ಹೀಗೆ ಕಾಮಗಾರಿ ನಡೀತಿರೋ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿ ದಿಢೀರ್ ಭೇಟಿ ನೀಡಿದ್ದಾರೆ.
ಕುರ್ಚಿ ಕಿತ್ತಾಟಕ್ಕೆ ಬ್ರೇಕ್‌ಫಾಸ್ಟ್ ಮೀಟಿಂಗ್ ತಾತ್ಕಾಲಿಕ ಬ್ರೇಕ್ ಹಾಕ್ತಿದ್ದಂತೆ ಡಿಕೆಶಿ ಗಮನ ಅಭಿವೃದ್ಧಿ ಮೇಲೆ ನೆಟ್ಟಿದೆ. ನಿನ್ನೆ ಜಕ್ಕೂರು, ಕೋಡಿಗೆಹಳ್ಳಿ ಮೆಟ್ರೋ ಕಾಮಗಾರಿ ಸ್ಥಳಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಮೆಟ್ರೋ ಸ್ಟೇಷನ್ ಮತ್ತು ಪಿಲ್ಲರ್‌ಗಳನ್ನ ಪರಿಶೀಲನೆ ಮಾಡಿದ್ರು. ಡಿಕೆಶಿಗೆ ಮೆಟ್ರೋ ಎಂಡಿ ರವಿಶಂಕರ್, ಜಿಬಿಎ ಆಡಳಿತಗಾರ ತುಷಾರ್ ಗಿರಿನಾಥ್ ಸಾಥ್ ನೀಡಿದ್ರು. ಅಧಿಕಾರಿಗಳು ಮೆಟ್ರೋ ಕಾಮಗಾರಿ ಬಗ್ಗೆ ಡಿಸಿಎಂಗೆ ಮಾಹಿತಿ ನೀಡಿದ್ರು.
ಇದನ್ನೂ ಓದಿ: ಇವತ್ತು ODI ಫೈನಲ್.. ಟೀಂ ಇಂಡಿಯಾ ಪ್ಲೇಯಿಂಗ್​-11ನಲ್ಲಿ ಭಾರೀ ಬದಲಾವಣೆ..!
ಜಕ್ಕೂರು ಭಾಗದಲ್ಲಿ ಮೆಟ್ರೋ ಕಾಮಗಾರಿ ವಿಳಂಬವಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೊಂಚ ಗರಂ ಆದ ಡಿ.ಕೆ. ಶಿವಕುಮಾರ್ ಬಿಎಂಆರ್‌ಸಿಎಲ್ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೀತು. ನಿಮ್ಮ ಕೆಲಸದ ಬಗ್ಗೆ ಯಾರಿಗೂ ಸಮಾಧಾನ ಇಲ್ಲ. ಇಷ್ಟೊಂದು ಲೇಟ್ ಆಗ್ತಿರೋದಕ್ಕೆ ನಿಮ್ಮ ಮೇಲೆ ಎಫ್ಐಆರ್ ಆಗ್ಬೇಕಿತ್ತು. ಬೇಗ ಕೆಲಸ ಮುಗಿಸಿದರೇ ಸರಿ ಅಂತ ವಾರ್ನಿಂಗ್ ಕೊಟ್ರು.
ಬೆಂಗಳೂರಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಡಿಕೆಶಿ ಮಾತು
ಜಕ್ಕೂರು, ಕೋಡಿಗೆಹಳ್ಳಿ ಮೆಟ್ರೋ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದ್ರು. ಬಿಎಂಆರ್‌ಡಿ, ಬಿಡಿಎ, ಬ್ಯುಸಿನೆಸ್ ಕಾರಿಡಾರ್‌ನಲ್ಲಿ ಏನೇನು ಕೆಲಸ ಆಗಬೇಕು ಅಂತಾ ರಿವ್ಯೂ ಮಾಡಿದ್ದೇನೆ ಅಂತಲೂ ಡಿಕೆಶಿ ಹೇಳಿದ್ರು.
ಗದ್ದುಗೆ ಗುದ್ದಾಟ.. ಬ್ರೇಕ್ ಫಾಸ್ಟ್ ಭರಾಟೆ ಮಧ್ಯೆ ಅಭಿವೃದ್ಧಿ ಮರೀಚಿಕೆ ಆಗಿರೋ ಆರೋಪ ಕೇಳಿಬಂದಿತ್ತು.. ವಿಪಕ್ಷಗಳು ಸರ್ಕಾರಕ್ಕೆ ಅಭಿವೃದ್ಧಿಯ ಚಾಟಿಯನ್ನ ಬೀಸಿದ್ವು. ಇದೀಗ ಎಲ್ಲವೂ ನಾರ್ಮಲ್ ಆಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಡಿಸಿಎಂ ಸನ್ನದ್ಧರಾಗಿದ್ದಾರೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇಂದು ಕೊಡಿಗೇಹಳ್ಳಿಯಲ್ಲಿ ಮೆಟ್ರೋ ಏರ್ಪೋರ್ಟ್ ಲೈನ್ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ಜಿಬಿಎ ಮತ್ತು ನಮ್ಮ ಮೆಟ್ರೋ ಅಧಿಕಾರಿಗಳು ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಒದಗಿಸಿದರು.
— DK Shivakumar (@DKShivakumar) December 5, 2025
Visited the Kodigehalli site today to review the progress of the Metro Airport Line. We are… pic.twitter.com/BZXt2Q5Gg2
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us