/newsfirstlive-kannada/media/media_files/2025/12/03/kl-rahul-2-2025-12-03-08-26-43.jpg)
KL Rahul Photograph: (BCCI)
ರಾಯ್​ಪುರ್ ಏಕದಿನ ಪಂದ್ಯದಲ್ಲಿ ಮುಖಭಂಗ ಅನುಭವಿಸಿರೋ ಟೀಮ್ ಇಂಡಿಯಾ ವಿಶಾಖಪಟ್ಟಣಂ ಏಕದಿನ ಪಂದ್ಯಕ್ಕೆ ರೆಡಿಯಾಗಿದೆ. ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿವೆ. ಇಂದಿನ ಪಂದ್ಯಕ್ಕೆ ಫೈನಲ್​ ಟಚ್​ ಸಿಕ್ಕಿದೆ. ಇಂದಿನ ಹೈವೋಲ್ಟೇಜ್ ಪಂದ್ಯ ಗೆದ್ದು ಸರಣಿ ಗೆಲ್ಲೋ ಲೆಕ್ಕಾಚಾರದಲ್ಲಿ ಉಭಯ ತಂಡಗಳಿವೆ.
ರಾಯ್​ಪುರ್​ ಏಕದಿನ ಪಂದ್ಯದ ಸೋಲಿನ ಬಳಿಕ, ಟೀಮ್ ಇಂಡಿಯಾ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸದ್ಯ ಸರಣಿ ಸೋಲಿನ ಭೀತಿಯಲ್ಲಿರುವ ಕೆ.ಎಲ್.ರಾಹುಲ್ ಪಡೆ, ವೈಝಾಕ್​ನಲ್ಲಿ ಆಫ್ರಿಕನ್ನರಿಗೆ ತಿರುಗೇಟು ನೀಡುವ ತವಕದಲ್ಲಿದೆ. ಆದ್ರೆ ಮಹತ್ವದ ಪಂದ್ಯಕ್ಕೂ ಮುನ್ನ ಮೆನ್-ಇನ್-ಬ್ಲೂ ಪಡೆಯಲ್ಲಿ ಕೆಲ ಸಮಸ್ಯೆಗಳಿದ್ದು ಇದನ್ನ ಬಗೆಹರಿಸಿಕೊಂಡು ಫೀಲ್ಡ್​​ಗೆ ಇಳಿಯಬೇಕಿದೆ.
ಆರಂಭಿಕ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ಆಫ್ರಿಕನ್ನರ ವಿರುದ್ಧ ಒಂದೇ ಒಂದು ಒಳ್ಳೆ ಇನ್ನಿಂಗ್ಸ್ ಆಡ್ಲಿಲ್ಲ. ಆಫ್ರಿಕನ್ ಬೌಲರ್​ಗಳ ಎದುರು ಪರಾಡ್ತಿರುವ ಜೈಸ್ವಾಲ್​​​ಗೆ, ಮಾರ್ಕೊ ಯಾನ್ಸನ್ ವಿಲನ್ ಆಗಿ ಕಾಡ್ತಿದ್ದಾರೆ. ಇನ್ನೊಂದೆಡೆ ರಾಂಚಿ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ರೋಹಿತ್, ರಾಯ್​ಪುರ್​ನಲ್ಲಿ ಫೇಲ್ ಆಗಿದ್ದಾರೆ. ರೋಹಿತ್ ಕನ್ಸಿಸ್ಟೆನ್ಸಿ ಹುಡುಕಾಟ ನಡೆಸ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/19/team-india-2-2025-10-19-16-54-28.jpg)
ಹ್ಯಾಟ್ರಿಕ್ ಶತಕದ ನಿರೀಕ್ಷೆ..!
ಸರಣಿಯಲ್ಲಿ ಸತತ ಎರಡು ಶತಕಗಳನ್ನ ಸಿಡಿಸಿ ಭರ್ಜರಿ ಬ್ಯಾಟಿಂಗ್ ನಡೆಸ್ತಿರುವ ಕಿಂಗ್ ಕೊಹ್ಲಿ, ಹ್ಯಾಟ್ರಿಕ್ ಶತಕದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ 11ನೇ ಬಾರಿ ಸತತ 2 ಶತಕಗಳನ್ನ ಸಿಡಿಸಿರುವ ವಿರಾಟ್, ಇಂದು ವೈಝಾಗ್​ನಲ್ಲಿ ವಿಶ್ವದಾಖಲೆ ಬರೆಯುವ ತವಕದಲ್ಲಿದ್ದಾರೆ.
ಕೆ.ಎಲ್.ರಾಹುಲ್, ರಾಯ್​ಪುರ್ ಏಕದಿನ ಪಂದ್ಯದಲ್ಲಿ ನಾಯಕನಾಗಿ ಎಡವಿದ್ದಾರೆ. ಆದ್ರೆ ಬ್ಯಾಟರ್ ಆಗಿ ರಾಹುಲ್ ಪಾಸ್​ ಆಗಿದ್ದಾರೆ. ರಾಂಚಿ ಮತ್ತು ರಾಯ್​ಪುರ್​ನಲ್ಲಿ ಸತತ 2 ಆಕರ್ಷಕ ಶತಕಗಳನ್ನ ಸಿಡಿಸಿರುವ ರಾಹುಲ್, ತಂಡದ ಮಿಡಲ್ ಆರ್ಡರ್ ಬ್ಯಾಟಿಂಗ್ ಪಿಲ್ಲರ್ ಆಗಿದ್ದಾರೆ.
ಇದನ್ನೂ ಓದಿ: ದಾಖಲೆಗಳ ಗೊಂಚಲು.. ಶತಕಗಳ ವೈಭವ.. ಕ್ರಿಕೆಟ್ ಲೋಕಕ್ಕೆ ಹೊಸ ಆಯಾಮ ಕೊಟ್ಟ ಸೂರ್ಯವಂಶಿ..!
/filters:format(webp)/newsfirstlive-kannada/media/media_files/2025/12/04/team-india-8-2025-12-04-07-41-56.jpg)
ಮೊದಲೆರೆಡು ಏಕದಿನ ಪಂದ್ಯಗಳಲ್ಲಿ ವಿಕೆಟ್​ಲೆಸ್ ಆಗಿರುವ ವಾಷಿಂಗ್ಟನ್ ಸುಂದರ್, ಬ್ಯಾಟಿಂಗ್​ನಲ್ಲಿ ಗಳಿಸಿದ್ದು ಕೇವಲ 14 ರನ್ ಮಾತ್ರ. ಹೀಗಾಗಿ ಇಂದಿನ ಪ್ರಮುಖ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಡ್ರಾಪ್ ಆದರೂ ಆಶ್ಚರ್ಯವಿಲ್ಲ. ಸುಂದರ್ ಸ್ಥಾನಕ್ಕೆ ಫಿಯರ್​ಲೆಸ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವಕಾಶ ಪಡೆಯೋ ಸಾಧ್ಯತೆ ಇದೆ.
ಕರ್ನಾಟಕ ಎಕ್ಸ್​ಪ್ರೆಸ್ ಪ್ರಸಿದ್ಧ್ ಕೃಷ್ಣ ಸರಣಿಯಲ್ಲಿ ಎಕ್ಸ್​ಪೆನ್ಸಿವ್ ಬೌಲರ್. ಟೀಮ್ ಮ್ಯಾನೇಜ್ಮೆಂಟ್ ಪ್ರಸಿದ್ಧ್​​​​​ಗೆ ಕೊಕ್ ನೀಡೋ ಚಿಂತನೆ ನಡೆಸುತ್ತಿದೆ. ಪ್ರಸಿದ್ಧ್ ತಂಡದಿಂದ ಡ್ರಾಪ್ ಆಗಿದ್ದೇ ಆದರೆ ಲೋಕಲ್ ಬಾಯ್ ಆಲ್​ರೌಂಡರ್ ನಿತೀಶ್ ರೆಡ್ಡಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್​ ಪಡೆಯಲಿದ್ದಾರೆ.
ವೈಝಾಗ್ ಪಂದ್ಯ ಎರಡೂ ತಂಡಗಳಿಗೂ ಅತ್ಯಂತ ಇರ್ಪಾಟೆಂಟ್. ಫೈನಲ್​ ಸ್ವರೂಪ ಪಡೆದಿರೋ ಪಂದ್ಯದಲ್ಲಿ ಜಿದ್ದಿಗೆ ಬಿದ್ದು ಎರಡೂ ತಂಡಗಳು ಹೋರಾಡಲಿವೆ. ಹೀಗಾಗಿ ವೀಕ್ ​ಎಂಡ್​ನಲ್ಲಿ ಅಭಿಮಾನಿಗಳಿಗೆ ಸಖತ್ ಕಿಕ್ ಸಿಗಲಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us