/newsfirstlive-kannada/media/post_attachments/wp-content/uploads/2023/07/RAVI_SHASTRI_INDIA.jpg)
ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ 2027ರ ವಿಶ್ವಕಪ್​ ಆಡ್ತಾರಾ? ಇಲ್ವಾ? ಕ್ರಿಕೆಟ್​ ಅಭಿಮಾನಿಗಳಲ್ಲಿರೋ ಮಿಲಿಯನ್​ ಡಾಲರ್​ ಪ್ರಶ್ನೆಯಿದು. ಇವರಿಬ್ಬರು​ ವಿಶ್ವಕಪ್​​ ಆಡಿಯೇ ಆಡ್ತೀವಿ ಅನ್ನೋ ಜಿದ್ದಿಗೆ ಬಿದ್ದು ಹೋರಾಟ ನಡೆಸ್ತಿದ್ರೆ ದಿಗ್ಗಜರನ್ನ ಹೊರಗಿಡೋ ಮಸಲತ್ತುಗಳು ಸೈಲೆಂಟಾಗೇ ನಡೀತಿವೆ. ಇದ್ರ ನಡುವೆ ಮಾಜಿ ಹೆಡ್​ ಕೋಚ್​ ರವಿ ಶಾಸ್ತ್ರಿ, ವಾರ್ನಿಂಗ್​ ಕೊಟ್ಟಿದ್ದಾರೆ.
ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ.. ಟೀಮ್​ ಇಂಡಿಯಾ ಈ ದಿಗ್ಗಜರ ಕ್ರಿಕೆಟ್​ ಭವಿಷ್ಯ ಕ್ರಿಕೆಟ್​ ಲೋಕದ ಹಾಟ್​ ಟಾಪಿಕ್​ ಆಗಿದೆ. 2027ರ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಡಲೇಬೇಕು ಎಂದು ಜಿದ್ದಿಗೆ ಬಿದ್ದು ಜೋಡೆತ್ತುಗಳು ಹೋರಾಟಕ್ಕಿಳಿದಿದ್ದಾರೆ. ನಾವು ವಿಶ್ವಕಪ್​ ಆಡಿಯೇ ಗುಡ್​ ಬೈ ಹೇಳೋದು ಎಂದು ಬಿಸಿಸಿಐ ಬಾಸ್​ಗಳು, ಟೀಮ್​ ಮ್ಯಾನೇಜ್​ಮೆಂಟ್​ ಸವಾಲೆಸೆದಿದ್ದಾರೆ. ಸ್ಪಷ್ಟ ಗುರಿಯೊಂದಿಗೆ ರೋ-ಕೊ ಜೋಡಿ ದಿಟ್ಟ ಹೋರಾಟಕ್ಕಿಳಿದಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
2027ರ ಏಕದಿನ ವಿಶ್ವಕಪ್​ ಮಹದಾಸೆ ಹೊಂದಿರೋ ರೋಹಿತ್​ ಶರ್ಮಾಗೆ ಫಿಟ್​ನೆಸ್​ ಪ್ರಶ್ನೆಯನ್ನ ಕೇಳಿದ್ರೆ, ಕೊಹ್ಲಿಗೆ ಫಾರ್ಮ್​​ನ ಪ್ರಶ್ನೆಯನ್ನ ಕೇಳಲಾಗಿತ್ತು. ಆ ಪ್ರಶ್ನೆಗಳಿಗೆ ದಿಗ್ಗಜರು ಮುಟ್ಟಿನೋಡಿಕೊಳ್ಳುವಂತೆ ಆನ್ಸರ್​ ಕೊಟ್ಟಿದ್ದಾರೆ. ಸುಮಾರು 11 ಕೆಜಿ ತೂಕ ಇಳಿಸಿಕೊಂಡು ರೋಹಿತ್​ ಸೂಪರ್​ ಫಿಟ್​ ಆಗಿದ್ರೆ, ಕೊಹ್ಲಿ ಬ್ಯಾಕ್​ ಟು ಬ್ಯಾಕ್​ ಶತಕ ಸಿಡಿಸಿ ಘರ್ಜಿಸಿದ್ದಾರೆ. ವಿಜಯ ಹಜಾರೆ ಆಡಬೇಕು ಅನ್ನೋ ಕಂಡಿಷನ್​​ಗೂ ಒಪ್ಪಿಗೆ ಸೂಚಿಸಿ ಸುದೀರ್ಘ ಅಂತರದ ಬಳಿಕ ಡೊಮೆಸ್ಟಿಕ್​ ಅಂಗಳಕ್ಕಿಳಿಯಲು ಮುಂದಾಗಿದ್ದಾರೆ. ಇಷ್ಟಾದರೂ ಹೆಡ್​ ಕೋಚ್​​ ಗೌತಮ್​ ಗಂಭೀರ್, ಚೀಫ್​ ಸೆಲೆಕ್ಟರ್ ಅಜಿತ್​ ಅಗರ್ಕರ್​ಗೆ ಸಮಾಧಾನವೇ ಇಲ್ಲ. ಇವರಿಬ್ಬರ ಜೊತೆ ಮಾತು ಬಿಡುವಷ್ಟು ಹೆಡ್​ ಕೋಚ್​ ಮುನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆರ್​​ಸಿಬಿಗೆ ಆಯ್ಕೆಯಾದ ಖುಷಿಯ ಕ್ಷಣ ಹಂಚಿಕೊಂಡ ಕನ್ನಡತಿ ಪ್ರತ್ಯೂಷ VIDEO
/filters:format(webp)/newsfirstlive-kannada/media/media_files/2025/11/30/virat-kohli-2025-11-30-15-54-12.jpg)
ಕೊಹ್ಲಿ, ರೋಹಿತ್​ ಶರ್ಮಾ ಎಲ್ಲವನ್ನೂ ಪ್ರೂವ್​ ಮಾಡಿದ್ದಾರೆ. ಆದ್ರೂ ಕೂಡ ಇವರಿಬ್ಬರ ವಿರುದ್ಧ ತೆರೆ ಹಿಂದೆ ಕಸರತ್ತು ನಡೀತಾ ಇದೆ ಎಂಬ ಸುದ್ದಿ ಪದೇ ಪದೇ ಹರಿದಾಡ್ತಿದೆ. ಎಸ್ಪೆಷಲಿ ಹೆಡ್​ ಕೋಚ್​ ಗೌತಮ್​ ಗಂಭೀರ್​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಇವರಿಬ್ಬರ ವಿಚಾರದಲ್ಲಿ ಮಸಲತ್ತು ನಡೆಸ್ತಿದ್ದಾರೆ ಅನ್ನೋದು ಈಗಂತೂ ಓಪನ್​ ಸೀಕ್ರೆಟ್​ ಆಗಿ ಬಿಟ್ಟಿದೆ. ಆಸ್ಟ್ರೇಲಿಯಾ ಬಳಿಕ ಸೌತ್​ ಆಫ್ರಿಕಾ ಸರಣಿಯಲ್ಲಿ ಸಾಲಿಡ್​ ಪ್ರದರ್ಶನ ನೀಡ್ತಾ ಇದ್ರೂ ಈ ವಿಚಾರ ಚರ್ಚೆಯಲ್ಲಿದೆ. ಇದೀಗ ಈ ಬಗ್ಗೆ ಟೀಮ್​ ಇಂಡಿಯಾ ಮಾಜಿ ಕೋಚ್​ ರವಿ ಶಾಸ್ತ್ರಿ ಮಾತನಾಡಿದ್ದು, ಗಂಭೀರ್​-ಅಗರ್ಕರ್​ ವಿರುದ್ಧ ಗುಡುಗಿದ್ದಾರೆ.
ಇವರಿಬ್ಬರು ದಾದಾ ಪ್ಲೇಯರ್ಸ್. ವೈಟ್ಬಾಲ್ ದೈತ್ಯರು. ಇಂತಾ ಆಟಗಾರರ ಜೊತೆ ಆಟವಾಡಬೇಡಿ. ಇವರಿಬ್ಬರ ಜೊತೆ ಯಾರು ಆಟವಾಡ್ತಿದ್ದಾರೆ. ಆಟ ಆಡುವವರು. ಅವರಿಬ್ಬರು ಆಡಲು ಆರಂಭಿಸಿದ್ರೆ, ಸರಿಯಾದ ಬಟನ್ ಒತ್ತಿದ್ರೆ, ಎಲ್ಲರೂ ಸೈಡ್ಗೆ ಹೋಗಿಬಿಡ್ತಾರೆ. 2027ರ ವಿಶ್ವಕಪ್ನಲ್ಲಿ ಇವರಿಬ್ಬರು ಆಡ್ತಾರಾ.? ಅನುಭವ ಅನ್ನೋದು ಮಾರ್ಕೆಟ್ ಅಲ್ಲಿ ಸಿಗಲ್ಲ. ಒಬ್ಬ ಮಾಸ್ಟರ್ ಚೇಸರ್. ಇನ್ನೊಬ್ಬನ್ನದ್ದು 3 ದ್ವಿಶತದ ರೆಕಾರ್ಡ್ ಇದೆ ಏಕದಿನದಲ್ಲಿ.
-ರವಿ ಶಾಸ್ತ್ರಿ, ಮಾಜಿ ಕೋಚ್
ಅದ್ಭುತ ಆಟವನ್ನಾಡ್ತಾ ಇದ್ರೂ ಪದೇ ಪದೆ 2027ರ ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ-ರೋಹಿತ್​ ಆಡಬೇಕಾ? ಬೇಡ್ವಾ ಎಂಬ ಚರ್ಚೆ ನಡೆಯುತ್ತಲೇ ಇದೆ. ಇದಕ್ಕೆ ರವಿ ಶಾಸ್ತ್ರಿ ಅನುಭವದ ಆಧಾರದಲ್ಲಿ ಆನ್ಸರ್​ ಕೊಟ್ಟಿದ್ದಾರೆ. ಕೊಹ್ಲಿ, ರೋಹಿತ್​ ಶರ್ಮಾಗಿರೋ ಅನುಭವಕ್ಕೆ ಅವಕಾಶ ನೀಡಬೇಕು ಎಂದಿದ್ದಾರೆ. ಚೇಸ್​​ ಮಾಸ್ಟರ್ ಕೊಹ್ಲಿ, ದ್ವಿಶತಕದ ಸರದಾರ ರೋಹಿತ್​ ಶರ್ಮಾನ ಸೈಡ್​ಲೈನ್​ ಮಾಡೋದು ನ್ಯಾಯನೂ ಅಲ್ಲ ಬಿಡಿ.
ಇದನ್ನೂ ಓದಿ: ಕ್ರಿಕೆಟರ್ ರಿಚಾ ಘೋಷ್‌ಗೆ ಡಿವೈಎಸ್ಪಿ ಹುದ್ದೆ : ಸಿಲಿಗುರಿ ಎಸಿಪಿ ಆಗಿ ಅಧಿಕಾರ ಸ್ವೀಕಾರ
/filters:format(webp)/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
2027ರ ವಿಶ್ವಕಪ್​ ಟೂರ್ನಿಗೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ರಂತ ಅನುಭವಿಗಳ ಅಗತ್ಯತೆ ತಂಡಕ್ಕಿದೆ. ಕೊಹ್ಲಿ-ರೋಹಿತ್​ ರಂತ ಅನುಭವಿಗಳು ಹೊರಬಂದ ಮೇಲೆ ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾ ಅಧೋಗತಿಗೆ ತಲುಪಿದೆ. ವಿದೇಶದಲ್ಲಿ ಅಲ್ಲ. ತವರಿನಂಗಳದಲ್ಲೇ ವೈಟ್​ವಾಷ್​ ಮುಖಭಂಗಗಳನ್ನ ಟೀಮ್​ ಇಂಡಿಯಾ ಅನುಭವಿಸಿದೆ. ಏಕದಿನ ವಿಶ್ವಕಪ್​ ಟೂರ್ನಿ ನಡೀತಿರೋದು ಸೌತ್​ ಆಫ್ರಿಕಾದಲ್ಲಿ. ಪೇಸ್​ ಅಂಡ್ ಬೌನ್ಸಿ ಟ್ರ್ಯಾಕ್​ಗಳಿರೋ ಟಫ್​ ಕಂಡಿಷನ್ಸ್​ನಲ್ಲಿ ಯುವ ಆಟಗಾರರ ತಂಡವನ್ನ ಕಣಕ್ಕಿಳಿಸಿ ವಿಶ್ವಕಪ್​ ಗೆಲ್ಲೋದು ಅಸಾಧ್ಯದ ಮಾತು.
ಫಿಟ್​ನೆಸ್​, ಫಾರ್ಮ್​ ಎರಡೂ ವಿಚಾರದಲ್ಲಿ ಕೊಹ್ಲಿ-ರೋಹಿತ್​ ತಮ್ಮ ಸಾಮರ್ಥ್ಯವನ್ನ ನಿರೂಪಿಸಿದ್ದಾರೆ. ವಿಶ್ವಕಪ್​ ಆಡೋದೇ ನಮ್ಮ ಗುರಿ ಎಂದು ಪದೇ ಪದೆ ಹೇಳಿಕೊಂಡಿದ್ದಾರೆ. ಬಿಸಿಸಿಐ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​ ವಿಧಿಸಿದ ಷರತ್ತುಗಳನ್ನೂ ಒಪ್ಪಿದ್ದಾರೆ. ಇಷ್ಟೆಲ್ಲಾ ಆದ ಬಳಿಕವೂ ಕೊಹ್ಲಿ-ರೋಹಿತ್​ನ ವಿಶ್ವಕಪ್​ನಿಂದ ಹೊರಗಿಡೋ ಪಯತ್ನ ಬಿಡದಿದ್ರೆ, ಇದಕ್ಕಿಂತ ಮೊಂಡುತನ ಮತ್ತೊಂದಿಲ್ಲ. ರವಿ ಶಾಸ್ತ್ರಿ ಹೇಳಿದಂತೆ ಕೊಹ್ಲಿ-ರೋಹಿತ್​ ತಮ್ಮ ಆಟ ಶುರುವಿಟ್ಟುಕೊಂಡ್ರೆ, ಭಾರತೀಯ ಕ್ರಿಕೆಟ್​ಗೆ ನಷ್ಟ.
ಇದನ್ನೂ ಓದಿ:ರಿಂಕು ಸಿಂಗ್​ಗೂ ಗಂಭೀರ್​​ ಅನ್ಯಾಯ..! ಎಲ್ಲಿದೆ ನ್ಯಾಯ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us