/newsfirstlive-kannada/media/post_attachments/wp-content/uploads/2023/12/RINKU-SINGH-1-2.jpg)
2026, ಫೆಬ್ರವರಿ 6ರಿಂದ ಟಿ-20 ವಿಶ್ವಕಪ್ ಶುರುವಾಗಲಿದೆ. ವಿಶ್ವಕಪ್​​ಗೂ ಮುನ್ನ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿಗಳನ್ನ ಆಡಲಿದೆ. ಬಹುಶಃ ಆಫ್ರಿಕಾ ಟಿ-20 ಸರಣಿಗೆ ಆಯ್ಕೆ ಮಾಡಿರುವ ತಂಡವೇ, ಕಿವೀಸ್ ವಿರುದ್ಧವೂ ಆಡಲಿದೆ. ಹೀಗಿರುವಾಗ ರಿಂಕು ಸಿಂಗ್​ಗೆ T20 ವಿಶ್ವಕಪ್ ಡೋರ್ ಕ್ಲೋಸ್ ಎನ್ನಲಾಗ್ತಿದೆ.
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರರ್​ಗೆ, ಆಲ್​ರೌಂಡರ್​ಗಳ ಮೇಲೆ ಯಾಕಿಷ್ಟು ಒಲವು ಅನ್ನೋದು ಗೊತ್ತಾಗ್ತಿಲ್ಲ. ತಂಡದಲ್ಲಿ ಆಲ್​ರೌಂಡರ್ಸ್​ ಇರಬೇಕು ನಿಜ. ಆಲ್​ರೌಂಡರ್ಸ್​ ಮೇಲೆ ಹೆಚ್ಚು ವ್ಯಾಮೋಹ ಸರಿಯಲ್ಲ. ಆಲ್​ರೌಂಡರ್ಸೇ ಮ್ಯಾಚ್ ಗೆಲ್ಲಿಸೋಕೆ ಆಗೋದಿಲ್ಲ. ಸ್ಪೆಷಲಿಸ್ಟ್​ಗಳ ಅವಶ್ಯಕತೆ ಕೂಡ ತಂಡಕ್ಕೆ ಬೇಕು.
ಇದನ್ನೂ ಓದಿ: ಕ್ರಿಕೆಟರ್ ರಿಚಾ ಘೋಷ್‌ಗೆ ಡಿವೈಎಸ್ಪಿ ಹುದ್ದೆ : ಸಿಲಿಗುರಿ ಎಸಿಪಿ ಆಗಿ ಅಧಿಕಾರ ಸ್ವೀಕಾರ
2023 ಐಪಿಎಲ್​ನಲ್ಲಿ ರಿಂಕು ಜಬರ್ದಸ್ತ್ ಪ್ರದರ್ಶನ ನೀಡಿ ಟೀಮ್ ಇಂಡಿಯಾಕ್ಕೂ ಎಂಟ್ರಿ ಕೊಟ್ರು. ಆರಂಭದಲ್ಲಿ ರಿಂಕು ಟೀಮ್ ಇಂಡಿಯಾ ಪರ ಮಿಂಚಿದ್ರು. ನಂತರ ದಿನೇ ದಿನೇ ರಿಂಕು​​ ತಂಡದಲ್ಲಿ ಸ್ಥಾನ ಪಡೆದ್ರೂ, ಬೆಂಚ್ ಕಾದಿದ್ದೇ ಹೆಚ್ಚು ಹೆಚ್ಚು. ರಿಂಕು ಸಿಂಗ್​ಗೆ ಬ್ಯಾಟಿಂಗ್ ಚಾನ್ಸ್ ಸಿಕ್ಕಿದ್ದು ತೀರ ಕಡಿಮೆನೇ. ಕಳೆದ 17 ಇನ್ನಿಂಗ್ಸ್​ಗಳಲ್ಲಿ ರಿಂಕು, 6 ಬಾರಿ ಬ್ಯಾಟಿಂಗ್ ಮಾಡಲೇ ಇಲ್ಲ. ಅವಕಾಶಗಳ ಕೊರತೆಯಿಂದ ರಿಂಕುಗೆ, ಹೆಚ್ಚು ರನ್​ಗಳಿಸಲು ಸಾಧ್ಯವಾಗಲಿಲ್ಲ.
ಸೌತ್ ಆಫ್ರಿಕಾ ಟಿ-20 ಸರಣಿಗೆ ಆಯ್ಕೆಯಾಗದ ರಿಂಕು ಸದ್ಯ ಗೊಂದಲಕ್ಕೆ ಸಿಲುಕಿದ್ದಾರೆ. ಟಿ-20 ವಿಶ್ವಕಪ್ ಆಡುವ ಕನಸು ಕಂಡಿದ್ದ ರಿಂಕು, ಭಾರೀ ನಿರಾಸೆಗೊಂಡಿದ್ದಾರೆ. ಸೌತ್ ಆಫ್ರಿಕಾ ಟಿ-20 ಸರಣಿ ವಂಚಿತ ರಿಂಕು, ನ್ಯೂಜಿಲೆಂಡ್ ಟಿ-20 ಸರಣಿಗೂ ಆಯ್ಕೆಯಾಗುವ ವಿಶ್ವಾಸವಿಲ್ಲ. ಗೊಂದಲಕ್ಕೆ ಸಿಲುಕಿರುವ ರಿಂಕುಗೆ ಮುಂದಿನ ದಾರಿ ಬಗ್ಗೆ ಕ್ಲಾರಿಟಿನೂ ಇಲ್ಲ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಿಂಕು ಸಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನವೇ ಇಲ್ಲ. ರಿಂಕು ತಂಡದಿಂದ ಡ್ರಾಪ್ ಆಗಿದಕ್ಕೆ ಕಾರಣವೇ ಇಲ್ಲ. ಸದ್ಯ ತಂಡದಲ್ಲಿ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ರಿಷಭ್ ಪಂತ್​ ಸಹ ಎಡಗೈ ಬ್ಯಾಟರ್ಸ್​ ಆಗಿರೋದ್ರಿಂದ ರಿಂಕು ಆಯ್ಕೆಗೆ ಮುಳುವಾಯ್ತಾ? ಈ ಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆ ಆಗ್ತಿದೆ.
ಕೋಚ್ ಗೌತಮ್ ಗಂಭೀರ್​ ಸರ್ವಾಧಿಕಾರಿ ಧೋರಣೆಯಿಂದ ತಂಡದಲ್ಲಿರೋ ಹಿರಿಯ, ಕಿರಿಯ ಪ್ರತಿಭಾವಂತ ಕ್ರಿಕೆಟಿಗರಿಗೆಲ್ಲಾ ಅನ್ಯಾಯವಾಗ್ತಿದೆ. ಇನ್ಮುಂದೆ ಆದ್ರೂ ಗಂಭೀರ್ ಪರ್ಸನಲ್ EGO ಬಿಟ್ಟು, ತಂಡದ ಒಳಿತಿಗಾಗಿ ಶ್ರಮಿಸಬೇಕಿದೆ. ಕಷ್ಟಪಟ್ಟು ಬೆಳೆದು ಬಂದ ಆಟಗಾರರಿಗೆ ಅನ್ಯಾಯ ಮಾಡಬಾರದು.
ಇದನ್ನೂ ಓದಿ:ಆರ್​​ಸಿಬಿಗೆ ಆಯ್ಕೆಯಾದ ಖುಷಿಯ ಕ್ಷಣ ಹಂಚಿಕೊಂಡ ಕನ್ನಡತಿ ಪ್ರತ್ಯೂಷ VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us