/newsfirstlive-kannada/media/media_files/2025/12/05/vaibha-suryavamshi-2025-12-05-14-32-11.jpg)
ಕೇವಲ14 ವರ್ಷ. ಆದ್ರೆ ಆತನ ಆಟ ಅನುಭವಿ ಆಟಗಾರನಿಗಿಂತಲೂ ಹೆಚ್ಚೇ. ಆತನ ಬ್ಯಾಟಿಂಗ್ ನೋಡಿ ವಿಶ್ವವೇ ಬೆರಗಾಗಿದೆ. ಆತ ಹೊಡೆಯೋ ಒಂದೊಂದು ಬೌಂಡರಿ, ಸಿಕ್ಸರ್, ದಿಗ್ಗಜರನ್ನೇ ಮೂಕವಿಸ್ಮಿತವನ್ನಾಗಿಸಿದೆ. ಫಿಯರ್ಲೆಸ್​ ಬ್ಯಾಟಿಂಗ್​ ನೋಡಿದ ಸೂಪರ್​ಸ್ಟಾರ್ ಕ್ರಿಕೆಟಿಗರೇ ಮಾತಿಲ್ಲದೆ ಸೈಲೆಂಟ್ ಆಗ್ಬಿಟ್ಟಿದ್ದಾರೆ. ಇದು ವೈಭವ್ ಸೂರ್ಯವಂಶಿಯ, ಶಾರ್ಟ್ ಇಂಟ್ರಡಕ್ಷನ್ ಅಷ್ಟೇ.
ದಾಖಲೆಯ ಶತಕ
ಪ್ರತಿಷ್ಟಿತ ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ವೈಭವ್, ಮಹಾರಾಷ್ಟ್ರ ವಿರುದ್ಧ ದಾಖಲೆಯ ಶತಕ ಸಿಡಿಸಿದ್ದಾರೆ. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಹಾರಾಷ್ಟ್ರ ಬೌಲರ್​ಗಳನ್ನ ಚಚ್ಚಿದ ವೈಭವ್, ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.
ಶರವೇಗದ ಶತಕ
ದೋಹಾದಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ T20 ಟೂರ್ನಿಯಲ್ಲೂ ವೈಭವ್ ಶರವೇಗದ ಶತಕ ಸಿಡಿಸಿದ್ದಾರೆ. ಯು.ಎ.ಇ ವಿರುದ್ಧ ಕೇವಲ 32 ಎಸೆತಗಳಲ್ಲಿ ಶತಕ ಪೂರೈಸಿದ್ದ ವೈಭವ್, ದಾಖಲೆ ಬರೆದಿದ್ದಾರೆ. ಯು.ಎ.ಇ ಬೌಲರ್​ಗಳನ್ನ ಮನಬಂದಂತೆ ಬೆಂಡೆತ್ತಿದ್ದ ಬಿಹಾರ್ ಬ್ಯಾಟ್ಸ್​ಮನ್, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು.
ಇದನ್ನೂ ಓದಿ: ಕ್ರಿಕೆಟರ್ ರಿಚಾ ಘೋಷ್‌ಗೆ ಡಿವೈಎಸ್ಪಿ ಹುದ್ದೆ : ಸಿಲಿಗುರಿ ಎಸಿಪಿ ಆಗಿ ಅಧಿಕಾರ ಸ್ವೀಕಾರ
/filters:format(webp)/newsfirstlive-kannada/media/media_files/2025/10/13/vaibhav_suryavanshi-2025-10-13-21-43-58.jpg)
ಟೈಟನ್ಸ್​ ವಿರುದ್ಧ ಸೆಂಚುರಿ ಸ್ಟಾರ್
ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್, ವಾಷಿಗ್ಟನ್ ಸುಂದರ್​ರಂತಹ ಅಂತಾರಾಷ್ಟ್ರೀಯ ಆಟಗಾರರ ಎದುರು, ವೈಭವ್ ಸೂರ್ಯವಂಶಿ ಎಚ್ಚೆದೆಯ ಶತಕ ಸಿಡಿಸಿದ್ರು. ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಸೆಂಚೂರಿ ಬಾರಿಸಿದ್ದ ವೈಭವ್, ಐಪಿಎಲ್​ನಲ್ಲಿ ರೆಕಾರ್ಡ್ ಮಾಡಿದ್ರು.
ವಿಶ್ವದಾಖಲೆಯ ಶತಕ
ಇಂಗ್ಲೆಂಡ್​ನ ವೋರ್ಸೆಸ್ಟರ್​ನಲ್ಲಿ ನಡೆದ ಯೂತ್ ODI ಪಂದ್ಯದಲ್ಲಿ ವೈಭವ್ ಆಂಗ್ಲ ಬೌಲರ್​ಗಳ ಬೆವರಿಳಿಸಿದ್ರು. ನಾಲ್ಕನೇ ಏಕದಿನ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್, 143 ರನ್​ಗಳಿಸಿದ್ರು. 10 ಭರ್ಜರಿ ಸಿಕ್ಸರ್​ಗಳು ವೈಭವ್ ಬ್ಯಾಟ್​ನಿಂದ ದಾಖಲಾಗಿತ್ತು.
ಇದನ್ನೂ ಓದಿ: ರಿಂಕು ಸಿಂಗ್​ಗೂ ಗಂಭೀರ್​​ ಅನ್ಯಾಯ..! ಎಲ್ಲಿದೆ ನ್ಯಾಯ..?
/filters:format(webp)/newsfirstlive-kannada/media/media_files/2025/08/18/vaibhav_suryavanshi_batting-1-2025-08-18-18-29-07.jpg)
ಆಸ್ಟ್ರೇಲಿಯಾ ವಿರುದ್ಧ 2 ಶತಕ
ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಮ್ ಮತ್ತು ಬ್ರಿಸ್ಬೇನ್​​ನ ಇಯಾನ್ ಹೀಲಿ ಸ್ಟೇಡಿಯಮ್​ನಲ್ಲಿ ನಡೆದ ಯೂತ್ ಟೆಸ್ಟ್​ನಲ್ಲಿ ಎಡಗೈ ಬ್ಯಾಟರ್ ವೈಭವ್, ಸೆಂಚುರಿ ಬಾರಿಸಿದ್ರು. ಚೆನ್ನೈನಲ್ಲಿ 58 ಎಸೆತಗಳಲ್ಲಿ ಶತಕ ಬಾರಿಸಿದ್ರೆ, ಬ್ರಿಸ್ಬೇನ್​ನಲ್ಲಿ 78 ಎಸೆತಗಳಲ್ಲಿ ಸೆಂಚುರಿ ದಾಖಲಿಸಿದ್ರು. ಆ ಎರಡೂ ಶತಕಗಳು, ಆಸ್ಟ್ರೇಲಿಯಾ ವಿರುದ್ಧವೇ ಬಂದಿದ್ದು, ವಿಷೇಶ ಎನ್ನಬಹುದು.
ಕಳೆದೊಂದು ವರ್ಷದಿಂದ ಪರ್ಪಲ್ ಪ್ಯಾಚ್​ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ವೈಭವ್, ಇದೀಗ ಟೀಮ್ ಇಂಡಿಯಾ ಕದ ತಟ್ಟುತ್ತಿದ್ದಾರೆ. ಇಷ್ಟು ದಿನ WAITING ಲಿಸ್ಟ್​ನಲ್ಲಿದ್ದ ಯಾಉತ್ತಿದ್ದ ಬಿಹಾರದ ಯಂಗ್ ಬ್ಯಾಟರ್, ಟಿ-20 ವಿಶ್ವಕಪ್ ತಂಡ ಸೇರಿಕೊಳ್ಳುವ ತವಕದಲ್ಲಿದ್ದಾರೆ. ಆಯ್ಕೆಗಾರರು ಬಿಹಾರಿ ಬಾಬೂಗೆ ಪ್ರಮೋಷನ್ ಕೊಡ್ತಾರಾ? ಕಾದುನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us