/newsfirstlive-kannada/media/media_files/2025/11/25/dk-shivakumar-9-2025-11-25-16-26-49.jpg)
ರಾಮನಗರ: ನಾಯಕತ್ವ ಬದಲಾವಣೆ ಬಗ್ಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಡುವೆ ಇಂದು ಸಭೆ ನಡೆಯಲಿದೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​, ಅದು ನನಗೆ ಗೊತ್ತಿಲ್ಲ, ನಾನೇನು ಕೇಳಿಲ್ಲ ಎಂದಿದ್ದಾರೆ.
ಮುಂದುವರಿದು.. ಇದು ನಮ್ಮ ಐದಾರು ಜನರ ಗುಟ್ಟಿನ ವ್ಯಾಪಾರ. ನಾನು ಇದನ್ನ ಬಹಿರಂಗವಾಗಿ ಚರ್ಚಿಸಲ್ಲ. ನಾನು ನನ್ನ ಆತ್ಮಸಾಕ್ಷಿಯನ್ನ. ಆತ್ಮಸಾಕ್ಷಿಗೆ ನಾವೆಲ್ಲ ಕೆಲಸ ಮಾಡಬೇಕು. ಪಕ್ಷಕ್ಕೆ ಮುಜುಗರ ತರಲು ನನಗೆ ಇಷ್ಟ ಇಲ್ಲ. ಪಕ್ಷವನ್ನ ವೀಕ್ ಮಾಡಲು ಇಷ್ಟ ಇಲ್ಲ, ಪಕ್ಷ ಇದ್ರೆ ನಾವು ಎಂದಿದ್ದಾರೆ.
ನಮ್ಮ ಸಿಎಂ ಹೇಳಿದ್ದಾರೆ. ಅವರು ಹಿರಿಯರು. ಅವರು ನಮ್ಮ ಪಕ್ಷಕ್ಕೆ ದೊಡ್ಡ ಆಸ್ತಿ. ಅವರು ಕೂಡ ಸಿಎಂ ಆಗಿ ಏಳುವರೆ ವರ್ಷ ಮುಗಿಸಿದ್ದಾರೆ. ಇನ್ನ ಮುಂದಿನ ಬಜೆಟ್ ಕೂಡ ಮಂಡಿಸ್ತೀನಿ ಎಂದು ಹೇಳ್ತಾರೆ. ಬಹಳ ಸಂತೋಷ. ವಿರೋಧ ಪಕ್ಷದ ನಾಯಕರಾಗಿದ್ದರು. ಅವರೂ ದುಡಿದಿದ್ದಾರೆ. ಪಕ್ಷ ಕಟ್ಟಿದ್ದಾರೆ.
ಡಿಕೆ ಶಿವಕುಮಾರ, ಉಪಮುಖ್ಯಮಂತ್ರಿ
ನಮ್ಮ ಸಿಎಂ ಹೇಳಿದ್ದಾರೆ, ಅವರು ನಮ್ಮ ಪಕ್ಷದ ಆಸ್ತಿ. ಅವರು ಈಗಾಗಲೇ ಏಳುವರೆ ವರ್ಷ ಸಿಎಂ ಆಗಿದ್ದಾರೆ. ಇನ್ನೂ ಮುಂದಿನ ಬಜೆಟ್ ಮಂಡನೆ ಮಾಡ್ತೀನಿ ಅಂತಲೂ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ದುಡಿದಿದ್ದಾರೆ, ಪಕ್ಷ ಕಟ್ಟಿದ್ದಾರೆ. ನಾವೆಲ್ಲ ಸೇರಿ 2028ರ ಗುರಿ ನೋಡ್ತಿದ್ದೇವೆ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಕೆಎಂಎಫ್ ನಂದಿನಿ ತುಪ್ಪ ವಿದೇಶಗಳಿಗೆ ರಫ್ತು ! ಸಪ್ತಸಾಗರದಾಚೆವರೆಗೂ ವಿಸ್ತರಿಸಿದ ನಂದಿನಿ ತುಪ್ಪದ ಘಮಲು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us