ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಎಂ ಪಟ್ಟ ಅಲಂಕರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಏರಲು ಅಜ್ಜಯ್ಯನ ಆಜ್ಞೆ ಇದೆ. ಹೀಗಾಗಿಯೇ ಇದೇ ತಿಂಗಳು ಅಧಿಕಾರ ಪಡೆಯಲು ಕಸರತ್ತು ಮಾಡುತ್ತಿದ್ದಾರೆ. ಶತಾಯಗತಾಯ ಮುಖ್ಯಮಂತ್ರಿ ಕುರ್ಚಿ ಏರಲು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: 2025ರ ಮಹಿಳಾ ವಿಶ್ವಕಪ್; ಅತಿ ಹೆಚ್ಚು ರನ್​ ಗಳಿಸಿದವರು ಯಾರು.. ಸ್ಮೃತಿ ಮಂದಾನ ಸ್ಥಾನ?
ಡಿ.ಕೆ ಶಿವಕುಮಾರ್ ಅವರು ಸಿಎಂ ಕುರ್ಚಿಗೆ ಏರಲು ದಿನಾಂಕಗಳನ್ನು ನಿಗದಿ ಮಾಡಿಕೊಂಡಿದ್ದಾರೆ. ಹಾಗೇ ಅವರು ನಂಬಿದಂತಹ ದೈವದ ಸೂಚನೆ ಕೂಡ ಇದೆಯಂತೆ. ತಮಗೆ ಬಂದಂತಹ ಯೋಗವನ್ನು ಈ ಸಮಯದಲ್ಲಿ ಸದುಪಯೋಗ ಮಾಡಿಕೊಳ್ಳಲು ಡಿ.ಕೆ ಶಿವಕುಮಾರ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್​ ಹೈಕಮಾಂಡ್​ ನಾಯಕರು ಅಸ್ತು ಎಂದರೆ ಡಿ.ಕೆ ಶಿವಕುಮಾರ್ ಅವರ ಎಲ್ಲ ಆಸೆ ಪೂರೈಸಿದಂತೆ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us