ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಮಾಡಿದ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ರಾಜಣ್ಣ ನನಗೆ 25 ವರ್ಷದಿಂದ ಸ್ನೇಹಿತರು. ರಾಜಣ್ಣ ವಜಾ ಪಕ್ಷದ ನಿರ್ಧಾರ, ನನಗೂ ಬೇಸರವಾಗುತ್ತೆ. ಸಂಪುಟದಿಂದ ವಜಾಗೊಳಿಸಿದ್ದು ಪಕ್ಷದ ನಿರ್ಧಾರ ಎಂದಿದ್ದಾರೆ.
ಈ ಬಗ್ಗೆ ನಾನು ಮುಖ್ಯಮಂತ್ರಿಗಳನ್ನ ಕೇಳಿದೆ. ಅವರು ಅಲ್ಲಿಂದ ಬಂದಿರುವ ಮಾಹಿತಿಯನ್ನಷ್ಟೇ ಹೇಳಿದ್ದಾರೆ. ಇನ್ನು ಪಕ್ಷದಿಂದ ಉಚ್ಛಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು..ನನಗೆ ಶಾಸಕರು, ಸಚಿವರು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದೇನಿದ್ದರೂ ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರಲಿದೆ. ಪಕ್ಷಕ್ಕೆ ಸಂಬಂಧಿಸಿ ಸಣ್ಣ, ಪುಟ್ಟ ಶಿಸ್ತುಕ್ರಮಗಳು ಏನಾದರೂ ಇದ್ದರೆ ಅದು ಆಗುತ್ತವೆ. ಯಾವ ಕಾರಣಕ್ಕೆ ರಾಜಣ್ಣ ಅವರನ್ನು ವಜಾ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ:KN ರಾಜಣ್ಣರದ್ದು ರಾಜೀನಾಮೆ ಅಲ್ಲ.. ಸಂಪುಟದಿಂದ ನೇರವಾಗಿ ಕಿಕ್ಔಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ