/newsfirstlive-kannada/media/media_files/2025/08/25/bk_hariprasad_dks-2025-08-25-13-32-48.jpg)
ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರ್​ಎಸ್​ಎಸ್ ಗೀತೆ ಹೇಳಿದ್ರೆ ಕ್ಷಮೆ ಕೇಳಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು, ಬಿಜೆಪಿಯವರು ಇಂತಹ ವಿಷ್ಯವನ್ನು ಸಮರ್ಥಿಸಿಕೊಳ್ಳಲೇಬೇಕು. ಆರ್​ಎಸ್​ಎಸ್ ಅನ್ನು ಈಗಾಗಲೇ ದೇಶದಲ್ಲಿ ಮೂರು ಬಾರಿ ನಿಷೇಧ ಮಾಡಲಾಗಿದೆ. ಡಿ.ಕೆ ಶಿವಕುಮಾರ್ ಅವರು ಡಿಸಿಎಂ ಆಗಿ ಸಂಘದ ಪ್ರಾರ್ಥನೆ ಮಾಡುವುದರಲ್ಲಿ ನಮ್ಮದೇನು ಅಭ್ಯಂತರ ಇಲ್ಲ. ಸರ್ಕಾರ ಅನ್ನುವುದು ಒಂದು ಪಕ್ಷದ ಸರ್ಕಾರ ಅಲ್ಲ. 7 ಕೋಟಿ ಜನರ ಸರ್ಕಾರ ಆಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಲಾಡ್ಜ್​ಗೆ ಜೊತೆಯಲ್ಲಿ ಬಂದಿದ್ದ ಮಹಿಳೆ ಜೀವ ತೆಗೆದ ಪ್ರಿಯಕರ ಕಿರಾತಕ.. ಅಸಲಿಗೆ ಏನಾಯಿತು?
/filters:format(webp)/newsfirstlive-kannada/media/post_attachments/wp-content/uploads/2023/06/DKS_1-1.jpg)
ಆದರೆ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹಾಗೇ ಹೇಳುವಂತಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಹೇಳಿದ್ರೆ ಡಿ.ಕೆ ಶಿವಕುಮಾರ್ ಕ್ಷಮೆ ಕೇಳಲೇಬೇಕು. ಮಹಾತ್ಮ ಗಾಂಧಿ ಅವರನ್ನು ಕೊಂದ ಆ ಸಂಘಟನೆಯ ಪ್ರಾರ್ಥನೆ ಮಾಡುವುದು ಸರಿಯಲ್ಲ. ಡಿ.ಕೆ ಶಿವಕುಮಾರ್​ಗೆ ಹಲವಾರು ಮುಖಗಳಿವೆ. ಕೃಷಿಕರು, ಕ್ವಾರಿ ಮಾಲೀಕರು, ಎಜುಕೇಶನಿಸ್ಟ್​, ಬ್ಯುಸಿನೆಸ್ ಮ್ಯಾನ್​​, ಇಂಡಸ್ಟ್ರಿಯಲಿಸ್ಟ್ ಎಂದು ಹೇಳುತ್ತಾರೆ. ಇದು ಕೂಡ ಇರಬಹುದು. ಯಾರಿಗೆ ಸಂದೇಶ ಕೊಡಲು ಗೀತೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಆರ್​ಎಸ್​ಎಸ್​ ಗೀತೆ ಹೇಳಿ ಯಾರನ್ನು ಮೆಚ್ಚಿಸಬೇಕು ಅಂತ ಮಾಡಿದ್ದಾರೋ ಎನ್ನುವುದು ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಗೀತೆ ಹೇಳಿದರೆ, ಕ್ಷಮೆ ಕೇಳಲೇಬೇಕು. ಡಿಸಿಎಂ ಆಗಿ ಹೇಳಿದ್ರೆ ನಮ್ಮದು ಅಭ್ಯಂತರ ಇಲ್ಲ. ಡಿ.ಕೆ ಶಿವಕುಮಾರ್ ಬಿಜೆಪಿ ಸೇರ್ಪಡೆ ಸಾಧ್ಯತೆ ಎನ್ನುವುದರ ಬಗ್ಗೆ ಮಾತನಾಡಿ, ಕಾಂಗ್ರೆಸ್ ಬಹಳ ವರ್ಷದಿಂದ ತುಂಬಾ ಜನರನ್ನ ನೋಡಿದೆ. ಸಾಕಷ್ಟು ಜನರು ಬಂದು ಹೋಗಿದ್ದಾರೆ. ಆ ಧೈರ್ಯವನ್ನು ಡಿ.ಕೆ ಶಿವಕುಮಾರ್ ಅವರು ಮಾಡಲ್ಲ ಎಂದು ನಾನು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us