/newsfirstlive-kannada/media/media_files/2025/08/25/mys_woman-2025-08-25-11-10-08.jpg)
ಮೈಸೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಜೀವ ತೆಗೆದಿರುವ ಘಟನೆ ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೇರ್ಯ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ದರ್ಶಿತಾ (20) ಜೀವ ಕಳೆದುಕೊಂಡ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಎಂಬಾತನಿಂದ ಈ ಕೃತ್ಯ ನಡೆದಿದೆ. ಕೇರಳ ಮೂಲದ ವ್ಯಕ್ತಿಯನ್ನ ವಿವಾಹವಾಗಿದ್ದ ದರ್ಶಿತಾ, ಸಿದ್ದರಾಜು ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಹೀಗಾಗಿ ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಸಿದ್ದರಾಜು ಜೊತೆಗೆ ಕರೆ ತಂದಿದ್ದನು.
ಅಲ್ಲೇ ಲಾಡ್ಜ್ವೊಂದರಲ್ಲಿ ರೂಮ್ ಅನ್ನು ಬಾಡಿಗೆ ತೆಗೆದುಕೊಂಡು ಜೋಡಿ ಒಳಗೆ ಹೋಗಿದ್ದಾರೆ. ಆ ಮೇಲೆ ಇಬ್ಬರ ನಡುವೆ ಏನಾಗಿದೆಯೋ ಏನು ಗೊತ್ತಿಲ್ಲ, ಬೆಡ್ ಮೇಲೆ ಮಹಿಳೆ ಜೀವ ಇಲ್ಲದೇ ರಕ್ತದ ಮಡುವಿನಲ್ಲಿ ಮಲಗಿದಂತೆ ಇದ್ದರು. ಆದರೆ ಈ ವೇಳೆ ಆರೋಪಿ ಸಿದ್ದರಾಜು ಮೊಬೈಲ್ ಚಾರ್ಜ್ ಹಾಕಲು ಹೋಗಿ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದಾನೆ.
ಇದನ್ನೂ ಓದಿ: ಶಾಲೆಯ ಹೋಮ್ ವರ್ಕ್ ಒತ್ತಡ.. ಜೀವ ಕಳೆದುಕೊಂಡ SSLC ವಿದ್ಯಾರ್ಥಿನಿ, ಅನುಮಾನ
ಇದರಿಂದ ಲಾಡ್ಜ್ ಸಿಬ್ಬಂದಿ ಓಡಿ ರೂಮ್ ಬಳಿ ಬಂದು ನೋಡಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ಮೊಬೈಲ್ ಇಲ್ಲದ ಕಾರಣ ಸಿಬ್ಬಂದಿಗೆ ಅನುಮಾನ ಬಂದಿದೆ. ಹೀಗಾಗಿ ಬ್ಲಾಸ್ಟ್ ಆಗಿರುವ ಮೊಬೈಲ್ ಎಲ್ಲಿ ಎಂದು ಕೇಳಿದ್ದಕ್ಕೆ ಹೊರಗೆ ಬಿಸಾಡಿದ್ದಾಗಿ ಸುಳ್ಳು ಹೇಳಿದ್ದನು. ಮೊಬೈಲ್ ಹುಡುಕಾಡಿದರು ಸಿಗಲಿಲ್ಲ.
ಕಿಟಕಿಯಿಂದ ಎಸೆದಿರುವುದಾಗಿ ಹೇಳಿ, ಪರಾರಿಯಾಗಲು ಯತ್ನಿಸಿದ್ದನು. ಇದರಿಂದ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರ ವಿಚಾರಣೆಯಲ್ಲಿ ಆರೋಪಿ ಅಸಲಿ ವಿಷ್ಯ ಏನಂತ ಕಕ್ಕಿದ್ದಾನೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ