/newsfirstlive-kannada/media/media_files/2025/12/09/dk-shivakumar-yatindra-2025-12-09-11-04-31.jpg)
ಬೆಳಗಾವಿ: ಡಾ.ಯತೀಂದ್ರ ಯಾವರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ ಗೊತ್ತಿಲ್ಲ. ನಾನು ಕರೆದು ಮಾತನಾಡ್ತೀನಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನ್ನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್​ನಲ್ಲಿ ಯಾವ ಗೊಂದಲ್ಲ ಇಲ್ಲ, ಎಲ್ಲಾ ತಿಳಿಯಾಗಿದೆ. ನನ್ನ ಹಾಗೂ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹಿಂದೆಯೂ ಇಲ್ಲ, ಇಂದು ಇಲ್ಲ, ಮುಂದೆಯೂ ಇಲ್ಲ. ನಾನು ಯತೀಂದ್ರ ಜೊತೆ ಮಾತನಾಡ್ತೀನಿ ಎಂದಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಹೃದಯಕ್ಕೆ ಮತ್ತೆ ಚುಚ್ಚಿದ ಕಾವ್ಯ.. ಅಚ್ಚರಿಯ ನಾಮಿನೇಷನ್ ಲಿಸ್ಟ್​..! VIDEO​
ತಮ್ಮ ಹೇಳಿಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯರ ಪುತ್ರ ಡಾ. ಯತೀಂದ್ರ.. ನಾನು ಏನು ಹೇಳಬೇಕೋ ಎಲ್ಲಾ ನಿನ್ನೆ ಹೇಳಿದ್ದೇನೆ. ಮತ್ತೆ ಮತ್ತೆ ಪ್ರತಿಕ್ರಿಯೆ ನೀಡೋದಿಲ್ಲ. ಶಾಸಕರು ಸಿಎಲ್​ಪಿ ಸಭೆಯಲ್ಲಿ ಪ್ರಸ್ತಾಪ ಮಾಡಲಿ ಎಂದಿದ್ದಾರೆ.
ನಿನ್ನೆ ಯತೀಂದ್ರ ಹೇಳಿದ್ದೇನು..?
ಸಿದ್ದರಾಮಯ್ಯನವರೇ ಪೂರ್ತಿ ಅವಧಿಗೆ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ನಾನು ಪದೇಪದೇ ಹೇಳ್ತಾ ಇದ್ದೇನೆ. ಅವರೇ ಪೂರ್ಣ ಅವಧಿಯಲ್ಲಿ ಸಿಎಂ ಆಗಿ ಮುಂದುವರಿಯುತ್ತಾರೆ. ಇದರಲ್ಲಿ ಬದಲಾವಣೆ ಮಾತಿಲ್ಲ. ಹೈಕಮಾಂಡ್ ಹಲವಾರು ವಿಚಾರಗಳಿಗೆ ಕರೆಯುತ್ತಾರೆ. ಹೋಗಿ ಮಾತಾಡಿಕೊಂಡು ಬರುತ್ತಾರೆ. ನನ್ನ ಪ್ರಕಾರ ಯಾವುದೇ ಬದಲಾವಣೆ ಆಗಲ್ಲ ಸಿದ್ದರಾಮಯ್ಯನವರೇ ಪೂರ್ತಿ ಅವಧಿಗೆ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ನಾನು ಹೇಳುತ್ತಿದ್ದೇನೆ ಎಂದಿದ್ದರು. ಯತೀಂದ್ರ ಅವರ ಈ ಹೇಳಿಕೆ ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೆ ಕೋಲಾಹಲ ಸೃಷ್ಟಿಸಿತ್ತು.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us