Advertisment

ಗಿಲ್ಲಿ ಹೃದಯಕ್ಕೆ ಮತ್ತೆ ಚುಚ್ಚಿದ ಕಾವ್ಯ.. ಅಚ್ಚರಿಯ ನಾಮಿನೇಷನ್ ಲಿಸ್ಟ್​..! VIDEO​

ಬಿಗ್​ ಬಾಸ್​ನಲ್ಲಿ ವಿಲನ್​ ದರ್ಬಾರ್ ಜೋರಾಗಿದೆ. ವಿಲನ್ ಹೇಳಿದ್ದೇ ಆಟವಾಗಿದ್ದು, ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಮಧ್ಯೆ ನಾಮಿನೇಷನ್ ಪ್ರಕ್ರಿಯೆ ಕೂಡ ಜೋರಾಗಿದೆ ನಡೆದಿದೆ.

author-image
Ganesh Kerekuli
Gilli Nata (9)
Advertisment

ಬಿಗ್​ ಬಾಸ್​ನಲ್ಲಿ ವಿಲನ್​ ದರ್ಬಾರ್ ಜೋರಾಗಿದೆ. ವಿಲನ್ ಹೇಳಿದ್ದೇ ಆಟವಾಗಿದ್ದು, ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಈ ಮಧ್ಯೆ ನಾಮಿನೇಷನ್ ಪ್ರಕ್ರಿಯೆ ಕೂಡ ಜೋರಾಗಿದೆ ನಡೆದಿದೆ. 

Advertisment

ಈ ವಾರ ಮನೆಯಿಂದ ಕಳುಹಿಸಲು ಇಚ್ಛಿಸುವ ಸ್ಪರ್ಧಿಗಳು ತಮ್ಮ ಎದುರಾಳಿಗಳನ್ನು ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿ ನಾಮಿನೇಟ್ ಮಾಡಬೇಕಾಗಿರುತ್ತದೆ. ಅದರಂತೆ ತಮಗೆ ಇಷ್ಟವಾದ ಸ್ಪರ್ಧಿಗಳನ್ನು ಒಬ್ಬೊಬ್ಬರೇ ನಾಮಿನೇಟ್ ಮಾಡಿದ್ದಾರೆ. 

ವಿಶೇಷ ಏನಂದ್ರೆ ಕಾವ್ಯ ಅವರು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇನ್ನೊಬ್ಬ ಸ್ಪರ್ಧಿ ರಜತ್​​ ಕಿಶನ್​ ಅವರನ್ನು ಕಾವ್ಯ ನಾಮಿನೇಟ್ ಮಾಡಿದ್ದಾರೆ. ಗಿಲ್ಲಿ, ಕಾವ್ಯ ಅವರ ಆ್ಯಕ್ಷನ್​ಗೆ ಯಾವುದೇ ಪ್ರತಿಕ್ರಿಯೆ ನೀಡಿದಂತೆ ಕಾಣ್ತಿಲ್ಲ. ಆದರೆ ರಜತ್, ಅವರು ಕಾವ್ಯ ಜೊತೆ ಕಿತ್ತಾಡಿದ್ದಾರೆ. ಕೊನೆಗೆ ರಜತ್ ಹಾಗೂ ಧ್ರುವಂತ್ ಮಧ್ಯೆ ಗಲಾಟೆಯಾಗಿದೆ. ಇಬ್ಬರು ಸ್ಪರ್ಧಿಗಳು ಜೋರಾಗಿ ಜಗಳ ಮಾಡಿಕೊಂಡಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. 

ಇದನ್ನೂ ಓದಿ: ಕಿಚ್ಚನ ಎದುರಲ್ಲೇ ಗಿಲ್ಲಿಗೆ ಬಿಗ್ ಶಾಕ್ ಕೊಟ್ಟ ಕಾವ್ಯ ಶೈವ - VIDEO

ಗಿಲ್ಲಿ ಮತ್ತು ಕಾವ್ಯ ಮೊದಲ ವಾರದಿಂದಲೂ ಬಿಗ್​ ಬಾಸ್​ನಲ್ಲಿ ಆತ್ಮೀಯವಾಗಿದ್ದರು. ಇಬ್ಬರ ನಡುವಿನ ಮಾತುಕತೆಗಳು, ಕಿತ್ತಾಟ, ಜಗಳ, ಪರಸ್ಪರ ಕಾಲೆಳೆದುಕೊಳ್ಳುವ ರೀತಿ ಎಲ್ಲವೂ ವೀಕ್ಷಕರಿಗೆ ತುಂಬಾನೇ ಇಷ್ಟವಾಗುತ್ತಿತ್ತು. ಹೀಗಿದ್ದೂ, ಕಾವ್ಯ ಮನೆಯಲ್ಲಿ ಇರಲು ಗಿಲ್ಲಿಯನ್ನು ಬಳಸಿಕೊಳ್ತಿದ್ದಾರೆ. ಗಿಲ್ಲಿಯಿಂದ ಕಾವ್ಯಗೆ ಪ್ಲಸ್ ಆಗ್ತಿದೆ ಎಂಬೆಲ್ಲ ಚರ್ಚೆ ಜೋರಾಗಿದೆ. ಇದೇ ಕಾರಣಕ್ಕೆ ಕಾವ್ಯ ಅವರು, ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದೀಗ ಗಿಲ್ಲಿ ಮೇಲೆ ಕಾವ್ಯ ಮಾಡುತ್ತಿರುವ ಮಸಲತ್ತು ಜೋರಾದಂತೆ ಇದೆ. 

Advertisment

ಕಳೆದ ವಾರ ಅಭಿಷೇಕ್ ಅವರು ಬಿಗ್​ ಬಾಸ್ ಮನೆಯಿಂದ ಔಟ್​ ಆಗಿ ಹೊರ ಬಂದಿದ್ದಾರೆ. ಈ ವಾರ ಮನೆಯಿಂದ ಯಾರು ಹೊರ ಬರ್ತಾರೆ ಅನ್ನೋದು ತುಂಬಾನೇ ಕುತೂಹಲ ಮೂಡಿಸಿದೆ. ಸದ್ಯ ನಾಮಿನೇಷನ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.  

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bigg Boss Kannada 12 Gilli Nata Bigg boss
Advertisment
Advertisment
Advertisment