/newsfirstlive-kannada/media/media_files/2025/10/18/cm_siddaramaiah-2-2025-10-18-07-38-24.jpg)
ಶಕ್ತಿರೂಪಿಣಿಯರು ಅಂದ್ರೆ ಮಹಿಳೆಯರು ಫ್ರೀಯಾಗಿ ಬಸ್​ನಲ್ಲಿ ಓಡಾಡಲು ರಾಜ್ಯ ಸರ್ಕಾರ ಶಕ್ತಿ ಯೋಜನೆ ಕೊಟ್ಟಿದೆ. ಈ ಶಕ್ತಿ ಯೋಜನೆಯಲ್ಲಿ 500 ಕೋಟಿ ಟಿಕೆಟ್ ದಾಖಲೆ ಮಾಡಿದ್ದನ್ನ ಸಿಎಂ ಸಿದ್ದರಾಮಯ್ಯ ಅವರೇ ದೊಡ್ಡದಾಗಿ ಬೆನ್ನತಟ್ಟಿಕೊಂಡಿದ್ದರು. ಆದ್ರೆ ಈಗ ಇದೇ ಶಕ್ತಿ ಯೋಜನೆ ಬಗ್ಗೆ ಸಿಎಂ ಮಾಡಿದ ಪೋಸ್ಟ್​ ಉಲ್ಲೇಖಿಸಿ ವಿಪಕ್ಷಗಳು ತೀವ್ರವಾಗಿ ವ್ಯಂಗ್ಯವಾಡ್ತಿವೆ.
ಇದೊಂದು ಸರ್ಟಿಫಿಕೇಟ್.. ಇಡೀ ರಾಜ್ಯ ಸರ್ಕಾರವನ್ನ ಟೀಕಾಪ್ರಹಾರ ಹಾಗೂ ವ್ಯಂಗ್ಯ ಸರೋವರದಲ್ಲಿ ಮುಳುಗಿಸಿದೆ. ಕುಹಕವಾಡೋದಕ್ಕೆ ವಿರೋಧ ಪಕ್ಷಗಳು ಶುರು ಮಾಡ್ಕೊಂಡಿದೆ. ಈ ನಕಲಿ ಸರ್ಟಿಫಿಕೇಟ್ ಸರ್ಕಾರಕ್ಕೆ ತೀವ್ರ ಇರಿಸು ಮುರಿಸು ತಂದಿದೆ.
ಸರ್ಕಾರದ ‘ಶಕ್ತಿ’ ಗ್ಯಾರಂಟಿಗೆ ಫೇಕ್ ಸರ್ಟಿಫಿಕೇಟ್ ಮುಜುಗರ
ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಸಾರಿಗೆ ಸಿಬ್ಬಂದಿ ವಿವಿಧ ಬೇಡಿಕೆ ಇಟ್ಟು ಪ್ರತಿಭಟನೆ ಮಾಡ್ತಾನೇ ಇದ್ದಾರೆ. ಆದ್ರೆ ಸರ್ಕಾರ ಮಾತ್ರ ಫ್ರೀ ಬಸ್‌ನಿಂದ ಸಾರಿಗೆ ಇಲಾಖೆಗೆ ಆದಾಯ ಹೆಚ್ಚಾಗಿದೆ ಎನ್ನುತ್ತಲೇ ಇದೆ. ಅಲ್ಲದೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಪೋಸ್ಟ್​ ಕೂಡ ಹಾಕಿದ್ದರು. ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ವಿಶ್ವಮಟ್ಟದಲ್ಲಿ ಪ್ರಶಂಸೆ ಗಳಿಸಿದೆ. ಶಕ್ತಿ ಯೋಜನೆ ಲಂಡನ್ ಬುಕ್ ಆಫ್ ರೆಕಾರ್ಡ್ಸ್ ಬರೆದಿದೆ ಎನ್ನಲಾದ ಪ್ರಮಾಣ ಪತ್ರವನ್ನ ಕೂಡ ಹಂಚಿಕೊಂಡಿದ್ರು.
ಮೂರು ದಿನಗಳ ಹಿಂದೆ ಖುದ್ದು ಸಿಎಂ ಸಿದ್ದರಾಮಯ್ಯ ಅವ್ರೇ ಹೀಗೊಂದು ಸರ್ಟಿಫಿಕೇಟ್ ಶೇರ್​ ಮಾಡಿದ್ದರು. ಆದ್ರೆ ಈ ಸರ್ಟಿಫಿಕೇಟೇ ನಕಲಿ ಎನ್ನಲಾಗಿದೆ. ಕೂಡಲೇ ಎಚ್ಚೆತ್ತ ಸಿಎಂ ಪೋಸ್ಟ್ ಅನ್ನ ಡಿಲೀಟ್ ಮಾಡಿದ್ದಾರೆ. ಇದಕ್ಕಾಗಿಯೇ ಕಾಯ್ತಿದ್ದ ಬಿಜೆಪಿ, ಜೆಡಿಎಸ್ ವಾಗ್ಭಾಣಗಳನ್ನ ಬಿಡಲು ಶುರು ಮಾಡಿದೆ. ಪ್ರಮಾಣ ಪತ್ರ ನಕಲಿ ಮಾತ್ರವಲ್ಲ, ದುಡ್ಡು ಕೊಟ್ರೆ ಇಂತ ಗೋಲ್ಡನ್ ಟಿಕೆಟ್ ಸಾಕಷ್ಟು ಸಿಗ್ತವೆ. ಜನರನ್ನ ಮರುಳು ಮಾಡಲು ನೀವು ಎಷ್ಟು ಕೀಳುಮಟ್ಟಕ್ಕೆ ಹೋಗಿದ್ದೀರಿ ಅಂತ ಮಾಜಿ ಸಚಿವ ಸಿ.ಟಿ ರವಿ ಕುಟುಕಿದ್ದಾರೆ.
‘ಮಾನ ಮರ್ಯಾದೆ ಇಲ್ಲ’
ಸಾರಿಗೆ ಇಲಾಖೆಯವರು ಲಂಡನ್​ ಬುಕ್ ಆಫ್​ ರೆಕಾರ್ಡ್​ನ ಪ್ಲಾಟಿನಂ ಸರ್ಟಿಫಿಕೇಟ್ ಸಿಕ್ಕಿದೆ ಅಂತ ಹೇಳುತ್ತಿದ್ದಾರೆ. ಹೆಸರು ಲಂಡನ್​ ಬುಕ್ ಆಫ್​ ರೆಕಾರ್ಡ್ಸ್​​ ಅಂತ ಇದೆ. ಮುಖ್ಯ ಕಚೇರಿ ಕ್ರೂಯೇಷಿಯಾ ಎಂದಿದೆ. ಅವರು ಹೇಳಿದರ ಪ್ರಕಾರ 5000 ಹಣ ಕೊಟ್ಟರೇ ಗೋಲ್ಡನ್​ ಸರ್ಟಿಫಿಕೇಟ್​, 6 ಸಾವಿರ ರೂಪಾಯಿಗೆ ಡೈಮೆಂಡ್ ಸರ್ಟಿಫಿಕೇಟ್​, 10 ಸಾವಿರ ಹಣಕ್ಕೆ ಪ್ಲಾಟಿನಂ ಸರ್ಟಿಫಿಕೇಟ್ ಸಿಗುತ್ತದೆ ಎಂದಿದ್ದಾರೆ. ಅಂದರೆ ಜನ ಶಾಪ ಹಾಕುತ್ತಿದ್ದರೇ, ನಮಗೆ ಸರ್ಟಿಫಿಕೇಟ್​ ಸಿಕ್ಕಿದೆ ಅಂತಿದ್ದಾರೆ.
ಗ್ಯಾರಂಟಿನೇ ಕೆಲಸ ಮಾಡುತ್ತಿದ್ದರೇ ಲೋಕಸಭೆಯಲ್ಲಿ ಎಲ್ಲ ಸೀಟ್​ಗಳನ್ನು ನೀವೇ ಗೆಲ್ಲಬೇಕಿತ್ತು. ಆದರೆ 19 ಸ್ಥಾನಗಳಲ್ಲಿ ಸೋತ್ತಿದ್ದೀರಿ. 9ರಲ್ಲಿ ಗೆದ್ದಿದ್ದೀರಿ. ಪ್ಲೋರ್ ಟೆಸ್ಟ್​ ಆಗೋದು ಎಲೆಕ್ಷನ್ ಬಂದಾಗ. ಫೇಕ್ ಸರ್ಟಿಫಿಕೇಟ್​ ಇಟ್ಟುಕೊಂಡು ಇದ್ದೀರಿ ನಿಮಗೆ ನಾಚಿಕೆ, ಮಾನಮರ್ಯಾದೆ ಏನು ಇಲ್ವಾಲ್ಲ.
ಸಿ.ಟಿ ರವಿ, ಮಾಜಿ ಸಚಿವ
ಇದನ್ನೂ ಓದಿ: ಹಾಸನಾಂಬೆ ದರ್ಶನ ಪಡೆದ 15 ಲಕ್ಷಕ್ಕೂ ಅಧಿಕ ಭಕ್ತರು.. ಎಷ್ಟು ಕೋಟಿ ಆದಾಯ ಬಂದಿದೆ?
ವಿಪಕ್ಷಗಳ ಆರೋಪ ಅದೇನೇ ಇರಲಿ ಈ ಸರ್ಟಿಫಿಕೇಟ್ ಫೇಕಾ, ಇಲ್ಲ ನಿಜವಾ ಅನ್ನೋ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಿದೆ. ಅಲ್ಲದೇ ಮಾನ್ಯ ಸಿಎಂ ಸಿದ್ದರಾಮಯ್ಯ ಏನನ್ನಾದ್ರೂ ಹಂಚಿಕೊಳ್ಳುವ ಮೊದಲು ಅದು ನಿಜಾನಾ, ಸುಳ್ಳಾ ಅನ್ನೋದನ್ನ ದೃಡಪಡಿಸಿಕೊಳ್ಳಬೇಕಿದೆ. ಒಂದು ಪ್ರಮಾಣಪತ್ರದಲ್ಲಿ ಅಷ್ಟೆಲ್ಲ ಸ್ಪೆಲ್ಲಿಂಗ್ ಮಿಸ್ಟೇಕ್ ಇರೋವಾಗಲೂ ಅದನ್ನ ನಂಬಿ ಪೋಸ್ಟ್​ ಮಾಡಿದ್ರೆ ಹೇಗೆ? ಇನ್ಮುಂದಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ