ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಇರೋರ ಟೆರರಿಸ್ಟ್ ಬಗ್ಗೆ ಚರ್ಚೆ ಮಾಡ್ತೀರಿ. ವಿಧಾನ ಸೌಧದಲ್ಲಿರುವ ಇರುವಂತಹ ಟೆರರಿಸ್ಟ್ ಬಗ್ಗೆ ಯಾರೂ ಚರ್ಚೆ ಮಾಡ್ತಿಲ್ಲವಲ್ಲ. ವಿಧಾನಸೌಧದಲ್ಲಿ ಟೆರರಿಸ್ಟ್​​ಗಳನ್ನ ಇಟ್ಕೊಂಡು ಪರಪ್ಪನ ಅಗ್ರಹಾರದ ಬಗ್ಗೆ ಏನು ಚರ್ಚೆ ಮಾಡ್ತೀರಿ? ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ, ಕೈದಿಗಳಿಗೆ ರಾಜಾಥಿತ್ಯ ಸಿಕ್ಕಿರೋ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ.. ಪರಪ್ಪನ ಅಗ್ರಹಾರದಲ್ಲಿ ಅಪರಾಧ ಮಾಡಿರುವ ರಕ್ಷಣೆಗೆ ಎಲ್ಲಾ ರೀತಿಯ ಸೌಲಭ್ಯ ಕೊಟ್ಟಿದ್ದಾರೆ. ಇದು ಹೊಸದಾಗಿ ನಡೆಯತ್ತಿರೋದಲ್ಲ. ಹಿಂದೆ ಇಬ್ಬರು ಹಿರಿಯ ಅಧಿಕಾರಿಗಳ ನಡುವೆ ಘರ್ಷಣೆ ಆಗಿತ್ತು. ಜೈಲಿನಲ್ಲಿ ಬಗ್ಗೆ ಜವಾಬ್ದಾರಿ ನಿರ್ವಹಣೆ ಮಾಡೋದ್ರ ಬಗ್ಗೆ ದೊಡ್ಡ ಮಟ್ಟದ ರಾಜಕಾರಣ ಆಗಿತ್ತು.
ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಬಿಜೆಪಿಯ ಜೊಲ್ಲೆಗೆ ನೀಡಿದ್ದೇಕೆ? ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಗೃಹ ಸಚಿವರು ತನಿಖೆ ಮಾಡ್ತೀನಿ ಅಂತಾರೆ. ಅವರಿಗೆ ಗೊತ್ತಿಲ್ವಾ? ಏನು ನಡೆಯುತ್ತಿದೆ ಎಂದು. ಮಾಧ್ಯಮಗಳಲ್ಲಿ ಅಲ್ಲಿ ನಡೆಯುವ ಮನರೋಂಜನಾ ಬಗ್ಗೆ ತೋರಿಸಿದ್ದಿರಾ. ಕಣ್ಮುಂದೆ ನಡೆಯುತ್ತಿರೋದ್ರ ಬಗ್ಗೆ ಏನು ತನಿಖೆ ಮಾಡ್ತೀರಿ. ಸಮಯ ವ್ಯರ್ಥ ಮಾಡೋದಕ್ಕೆ ತನಿಖೆ ಮಾಡಿಸೋದು. ಪದೇ ಪದೇ ಈ ರೀತಿ ಆಗ್ತಿರುವ ವಿಚಾರ ಇದು. ಸಿಎಂ, ಗೃಹ ಸಚಿವರನ್ನ ಕೇಳಿ. ಇದರಲ್ಲಿ ಸರ್ಕಾರ ವೈಫಲ್ಯ ಹೆಚ್ಚಿದೆ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ.. ಅವರೂ ಭಯೋತ್ಪಾದಕರ ಒಂದು ಭಾಗ. ಅವರೂ ವಿಧಾನಸಭೆಯಲ್ಲಿ ಕೂತಿದ್ರು ಅಲ್ವಾ? ಅವರಿಗೂ ಅನ್ವಯಿಸುತ್ತೆ, ಅವರ ಆಡಳಿತಕ್ಕೂ ಅನ್ವಯ. ಅವರಿಗೂ, ಅವರ ಪಕ್ಷಕ್ಕೂ ಇದು ಅನ್ವಯಿಸುತ್ತೆ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಮಾತು ಉಳಿಸಿಕೊಂಡ ಜಾರಕಿಹೊಳಿ ಬ್ರದರ್ಸ್ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us