/newsfirstlive-kannada/media/media_files/2025/08/10/siddaramaiah-narendra-modi-1-2025-08-10-16-04-08.jpg)
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ
ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೂರು ವಂದೇ ಭಾರತ್ ಟ್ರೈನ್, ನಮ್ಮ ಮೆಟ್ರೋದ ಯೆಲ್ಲೋ ಲೈನ್ಗೆ (Namma metro Yellow line) ಚಾಲನೆ ನೀಡಿದರು. ಇದೇ ವೇಳೆ ಮೆಟ್ರೋ 3ನೇ ಹಂತದ ಫೇಸ್ಗೂ ಶಂಕುಸ್ಥಾಪನೆ ನೆರವೇರಿಸಿದರು.
ಯೆಲ್ಲೋ ಲೈನ್ಗೆ ಚಾಲನೆ ನೀಡಿದ ಬಳಿಕ ಮೋದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಶಾಲಾ ಮಕ್ಕಳ ಜೊತೆ ಮೋದಿ ಚರ್ಚೆ ನಡೆಸಿದರು. ಬಳಿಕ ಎಲೆಕ್ಟ್ರಾನಿಕ್ ಸಿಟಿ ಐಐಐಟಿ ಆಡಿಟೋರಿಯಂನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಇದನ್ನೂ ಓದಿ:ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ
ವೇದಿಕೆಯಲ್ಲಿ ಕೌಂಟರ್ ಕೊಟ್ಟ ಸಿಎಂ
ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ (CM Siddaramaiah), ಪ್ರಧಾನಿ ನರೇಂದ್ರ ಮೋದಿಗೆ ಕೌಂಟರ್ ನೀಡಿದರು. ಬೆಂಗಳೂರಿಗೆ ಮೆಟ್ರೋ ತಂದಿದ್ದು ಮನಮೋಹನ್ ಸಿಂಗ್. ಮೆಟ್ರೋಗಾಗಿ ರಾಜ್ಯ ಸರ್ಕಾರ ಹೆಚ್ಚು ಖರ್ಚು ಮಾಡಿದೆ. ಮಹಾರಾಷ್ಟ್ರ, ಗುಜರಾತ್ನಂತೆ ಕರ್ನಾಟಕಕ್ಕೂ ಒತ್ತು ಕೊಡಿ ಎಂದು ಮೋದಿಗೆ ಸಿದ್ದರಾಮಯ್ಯ ವೇದಿಕೆ ಮೇಲೆ ಆಗ್ರಹ ಮಾಡಿದರು.
ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿರುವ ಮೋದಿ.. ರಾಜ್ಯ, ಕೇಂದ್ರ ಸರ್ಕಾರಗಳು ಇರೋದು ಜನರ ಸೇವೆಗಾಗಿ. ದೇಶದ ಜನರಿಗಾಗಿ ನಾವು ಒಂದಾಗಿ ಕೆಲಸ ಮಾಡಬೇಕು. ಮೇಕ್ ಇನ್ ಇಂಡಿಯಾದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಅದಕ್ಕೆ ಬೆಂಗಳೂರು ಹಾಗೂ ಕರ್ನಾಟಕದ ಅವಶ್ಯಕತೆ ಇದೆ. ನಮ್ಮ ವಸ್ತುಗಳು ಶೂನ್ಯ ಡಿಫೆಕ್ಟ್ ಇರದಂತೆ ತಯಾರಿಸಬೇಕು ಎಂದರು.
ಇದನ್ನೂ ಓದಿ: ‘ನಾನು ಆ ಕ್ಲಾಸ್ನಲ್ಲಿ ನಿದ್ದೆ ಮಾಡ್ತಿದ್ದೆ’.. ಮೆಟ್ರೋದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಸ್ವಾರಸ್ಯಕರ ಮಾತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ