/newsfirstlive-kannada/media/media_files/2025/08/10/namma-metro-yellow2-2025-08-10-12-28-48.jpg)
ಬೆಂಗಳೂರು: ಇಂದು ಪ್ರಧಾನಿ ಮೋದಿ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಮಾಡಿದ್ದಾರೆ. ಇದಕ್ಕೂ ಮೊದಲು KSR ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಟ್ರೈನ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಕೊಟ್ಟರು. ಇದಾದ ಬಳಿಕ ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ..
ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಒಂದು ಬೆಂಗಳೂರು - ಬೆಳಗಾವಿ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದಾರೆ. ಮತ್ತೊಂದು ನಮ್ಮ ಮೆಟ್ರೋದ ಹಳದಿ ಮಾರ್ಗದ ಲೋಕಾರ್ಪಣೆ ಜೊತೆಗೆ ನಮ್ಮ ಮೆಟ್ರೋದ ಮೂರನೇ ಫೇಸ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಜೂನ್ 14, 2016ರಂದು ಪ್ರಧಾನಿ ನರೇಂದ್ರ ಮೋದಿ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಇಂದು ಪ್ರಧಾನಿ ಮೋದಿ ಅವರೇ ಉದ್ಘಾಟನೆ ಮಾಡಿದ್ದಾರೆ. ಡಿಸೆಂಬರ್ 9, 2016ರಂದು BMRCL ಮೊದಲ ಬಾರಿಗೆ ಮೂರು ಪ್ಯಾಕೇಜ್ಗಳಲ್ಲಿ ನಮ್ಮ ಮೆಟ್ರೋ ಟೆಂಡರ್ ಕರೆದಿತ್ತು. ನವೆಂಬರ್ 2017ರಲ್ಲಿ ಈ ಮಾರ್ಗದಲ್ಲಿ ಸಿವಿಲ್ ಕೆಲಸಗಳು ಪ್ರಾರಂಭವಾಗಿತ್ತು. ಜುಲೈ 22 ರಿಂದ 25ರವರೆಗೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು. ಹಳದಿ ಮಾರ್ಗಕ್ಕೆ 15 ರೈಲುಗಳ ಪೈಕಿ ಸದ್ಯ ಮೂರು ರೈಲುಗಳು ಲಭ್ಯವಾಗಿವೆ. ಸದ್ಯ 20-25 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ಸಾಧ್ಯತೆ ಇದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸೋ ನಿರೀಕ್ಷೆಯಿದೆ. ರೈಲುಗಳ ಸಂಖ್ಯೆ ಹೆಚ್ಚಾದ್ರೆ ಪ್ರತಿ ದಿನ 8 ಲಕ್ಷ ಮಂದಿ ಪ್ರಯಾಣಿಸೋ ಸಾಧ್ಯತೆ ಇದೆ.
ಇನ್ನೂ, ಹಳದಿ ಮಾರ್ಗಕ್ಕೆ ಒಟ್ಟು 7,616 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಮೆಟ್ರೋದ ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳು ಇದ್ದು 19.15 ಕಿಲೋ ಮೀಟರ್ ಉದ್ದವಿದೆ. ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಅದರಂತೆ ತಿಂಗಳ ಕೊನೆಯಲ್ಲಿ 4ನೇ ಮೆಟ್ರೋ ಈ ಮಾರ್ಗಕ್ಕೆ ಸೇರಲಿದೆ.
ಯಲ್ಲೋ ಮಾರ್ಗ ಮೆಟ್ರೋದ ಪ್ರಯಾಣ ದರ
ಆರ್ ವಿ ರಸ್ತೆ | ರಾಗಿಗುಡ್ಡ | ₹10 |
ಆರ್ ವಿ ರಸ್ತೆ | ಜಯದೇವ | ₹10 |
ಆರ್ ವಿ ರಸ್ತೆ | BTM ಲೇಔಟ್ | ₹20 |
ಆರ್ ವಿ ರಸ್ತೆ | ಬೊಮ್ಮನಹಳ್ಳಿ | ₹30 |
ಆರ್ ವಿ ರಸ್ತೆ | ಕೂಡ್ಲೂಗೇಟ್ | ₹40 |
ಆರ್ ವಿ ರಸ್ತೆ | ಸಿಂಗಸಂದ್ರ | ₹50 |
ಆರ್ ವಿ ರಸ್ತೆ | ಎಲೆಕ್ಟ್ರಾನಿಕ್ ಸಿಟಿ | ₹60 |
ಆರ್ ವಿ ರಸ್ತೆ | ಬೊಮ್ಮಸಂದ್ರ | ₹60 |
ಸಿಲ್ಕ್ ಬೋರ್ಡ್ | ಬೊಮ್ಮಸಂದ್ರ | ₹60 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ