Advertisment

ಬೆಂಗಳೂರಿನಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ.. ​

ಪ್ರಧಾನಿ ಮೋದಿ ಬೆಂಗಳೂರು ಟು ಬೆಳಗಾವಿ ವಂದೇ ಭಾರತ್ ನೂತನ ರೈಲಿಗೆ ಚಾಲನೆ ನೀಡಿದ್ದಾರೆ. ಮೇಖ್ರಿ ಸರ್ಕಲ್, ಮೂಲಕ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತಲುಪಿದ ನರೇಂದ್ರ ಮೋದಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ಕೊಟ್ಟಿದ್ದಾರೆ.

author-image
NewsFirst Digital
vande bharat train(4)
Advertisment

    ಬೆಂಗಳೂರು: ಪ್ರಧಾನಿ ಮೋದಿ ಬೆಂಗಳೂರು ಟು ಬೆಳಗಾವಿ ವಂದೇ ಭಾರತ್ ನೂತನ ರೈಲಿಗೆ ಚಾಲನೆ ನೀಡಿದ್ದಾರೆ. ಮೇಖ್ರಿ ಸರ್ಕಲ್, ಚಾಲುಕ್ಯ ಸರ್ಕಲ್ ಮೂಲಕ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತಲುಪಿದ ನರೇಂದ್ರ ಮೋದಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ಕೊಟ್ಟಿದ್ದಾರೆ.

    Advertisment

    ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಟ್ರೈನ್​ ದರ ಹೇಗಿದೆ.. ಎಲ್ಲಿಂದ ಎಲ್ಲಿವರೆಗೆ ಎಷ್ಟು ರೂಪಾಯಿ ಕೊಡಬೇಕು?

    vande bharat train(2)

    ಮೇಖ್ರಿ ಸರ್ಕಲ್ ಬಳಿಯ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಮೋದಿ ಪ್ರಯಾಣ ಬೆಳೆಸಿದ್ದರು. ಇನ್ನೂ, ಪ್ರಧಾನಿಯನ್ನು ನೋಡಲು ಜನರು ಕಿಕ್ಕಿರಿದು ತುಂಬಿದ್ದರು. KSR ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಟ್ರೈನ್​ಗೆ ಹಸಿರು ನಿಶಾನೆ ತೋರಿಸಿದ ಮೋದಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ರಸ್ತೆ ಮಾರ್ಗವಾಗಿ ರಾಗಿಗುಡ್ಡದ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ.

    Advertisment

    vande bharat train(6)

    ಕರ್ನಾಟಕದಲ್ಲಿ ಒಟ್ಟಾರೆ 11 ವಂದೇ ಭಾರತ್ ರೈಲುಗಳು ಓಡಾಡಲಿದೆ ಎಂಬ ಖ್ಯಾತಿ ಪಡೆದುಕೊಂಡಿದೆ. ನೂತನ ಒಂದೇ ಭಾರತ್ ರೈಲು 8 ಜಿಲ್ಲೆಗಳ ಮೂಲಕ ಹಾದು ಹೋಗಲಿದೆ. ಈ ರೈಲು ಬುಧವಾರ ಹೊರತು ಪಡಿಸಿ ವಾರದ 6 ದಿನಗಳು ಸಂಚಾರ ನಡೆಸಲಿದೆ. ಬೆಂಗಳೂರಿನಿಂದ ಕುಂದಾನಗರಿ ನಡುವೆ ಸಂಚಾರ ಮಾಡಲಿದೆ. ಈ ನೂತನ ರೈಲು ಕೇವಲ 8 ಗಂಟೆಯಲ್ಲಿ ಗಮ್ಯ ಸ್ಥಾನ ತಲುಪಲಿದೆ. ಅಲ್ಲದೇ 6 ಜಿಲ್ಲಾ ಕೇಂದ್ರಗಳಲ್ಲಿ ವಂದೇ ಭಾರತ್ ಟ್ರೈನ್ ನಿಲ್ಲುತ್ತದೆ. ಬೆಳಗಾವಿಯಿಂದ ಬೆಳಗ್ಗೆ 5:20ಕ್ಕೆ ಹೊರಟು ಮಧ್ಯಾಹ್ನ 1:50ಕ್ಕೆ ಬೆಂಗಳೂರು ತಲುಪುತ್ತದೆ. ಮಧ್ಯಾಹ್ನ 2:20ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 10:40ಕ್ಕೆ ಬೆಳಗಾವಿ ತಲುಪಲಿದೆ. ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ ನಡುವೆ ಸಂಪರ್ಕ ಕಲ್ಪಿಸಲಾಗಿದೆ. 

    vande bharat train(3)

    ಕರ್ನಾಟಕದಲ್ಲಿ ಸಂಚರಿಸುವ ವಂದೇ ಭಾರತ್‌ ರೈಲುಗಳು ಯಾವುವು?

    Advertisment
    • ಎಂಜಿಆರ್‌ ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಮೈಸೂರು - ಎಂಜಿಆರ್‌ ಚೆನ್ನೈ ಸೆಂಟ್ರಲ್ ವಂದೇ ಭಾತರ್‌ ಎಕ್ಸ್‌ಪ್ರೆಸ್‌
    • ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಕೆಎಸ್‌ಆರ್‌ ಬೆಂಗಳೂರು - ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಮಂಗಳೂರು ಸೆಂಟ್ರಲ್‌ - ತಿರುವನಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಬೆಂಗಳೂರು ಕಂಟೋನ್ಮೇಂಟ್‌ - ಕೊಯಮತ್ತೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಮಂಗಳೂರು ಸೆಂಟ್ರಲ್ - ಮಡಗಾಂವ್ ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಬೆಂಗಳೂರು ಯಶವಂತಪುರ - ಕಾಚೆಗುಡ ಹೈದರಾಬಾದ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಬೆಂಗಳೂರು ಕಂಟೋನ್ಮೆಂಟ್‌ - ಮಧುರೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌
    • ಹುಬ್ಬಳ್ಳಿ - ಪುಣೆ ವಂದೇ ಭಾರತ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌

    vande bharat train(1)

    ಬೆಂಗಳೂರು ಟೂ ಬೆಳಗಾವಿ ವಂದೇ ಭಾರತ್ ಟ್ರೈನ್ ದರ ಪಟ್ಟಿ ಇಲ್ಲಿದೆ.. 
    ಬೆಂಗಳೂರಿನಿಂದ ಬೆಳಗಾವಿ1264 ರೂ.   2535 ರೂ.
    ಬೆಂಗಳೂರಿನಿಂದ  ಧಾರವಾಡ1049 ರೂ. 2098 ರೂ.
    ಬೆಂಗಳೂರಿನಿಂದಹುಬ್ಬಳ್ಳಿ1090 ರೂ. 2034 ರೂ.
    ಬೆಂಗಳೂರಿನಿಂದಹಾವೇರಿ       907 ರೂ.1810 ರೂ.
    ಬೆಂಗಳೂರಿನಿಂದದಾವಣಗೆರೆ800 ರೂ. 1590 ರೂ.
    ಬೆಂಗಳೂರಿನಿಂದತುಮಕೂರು403 ರೂ. 788 ರೂ.

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

    vande bharat train, pm modi
    Advertisment
    Advertisment
    Advertisment