ಧರ್ಮಸ್ಥಳದಲ್ಲಿ SIT ತನಿಖೆ ಬಗ್ಗೆ ಡಾ.ಜಿ ಪರಮೇಶ್ವರ್ ಮಹತ್ವದ ಅಪ್​​ಡೇಟ್ಸ್.. ಏನ್ ಹೇಳಿದರು?

ಧರ್ಮಸ್ಥಳದಲ್ಲಿ ಇನ್ಮುಂದೆ ಸ್ಥಳ ಅಗೆಯುವ ಕೆಲಸ ಸರ್ಕಾರ ಮಾಡಲ್ಲ. ಏಕೆಂದರೆ ಅದನ್ನು ಎಸ್​ಐಟಿ ನಿರ್ಧಾರ ಮಾಡುತ್ತದೆ. ಸಿಕ್ಕಿರುವ ಅಸ್ಥಿಪಂಜರಗಳ ಕೆಮಿಕಲ್, ಡಿಎನ್​ಎ ಅನಾಲಿಸಿಸ್ ಮಾಡಬೇಕು.

author-image
Bhimappa
PARAMESHWARA

ವಿಧಾನಸಭೆಯಲ್ಲಿ ಗೃಹ ಸಚಿವರಿಂದ ಧರ್ಮಸ್ಥಳ ಕೇಸ್ ಬಗ್ಗೆ ಉತ್ತರ

Advertisment

ಬೆಂಗಳೂರು: ಧರ್ಮಸ್ಥಳದಲ್ಲಿ ಸಿಕ್ಕಂತಹ ಅಸ್ಥಿಪಂಜರ, ಮೂಳೆಗಳನ್ನು ಎಫ್​ಎಸ್​ಎಲ್ ಪರೀಕ್ಷೆಗೆ ರವಾನಿಸಲಾಗಿದೆ. ಎಫ್‌ಎಸ್‌ಎಲ್ ನಿಂದ ವರದಿ ಬರಬೇಕಿದೆ. ವರದಿ ಬರುವವರೆಗೂ ಎಸ್​ಐಟಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ. ಎಫ್​​ಎಸ್​ಎಲ್ ವರದಿ ಬಂದ ಬಳಿಕ ತನಿಖೆ ಮುಂದುವರೆಯುತ್ತದೆ. ಈಗ ಇನ್ನು ಎಸ್​ಐಟಿಯ ತನಿಖೆ ಆರಂಭವಾಗಿಲ್ಲ. ಈಗ ಏನಿದ್ದರೂ ಭೂಮಿ ಅಗೆದು ಅಸ್ಥಿಪಂಜರ, ಮೂಳೆಗಳನ್ನ ಸಂಗ್ರಹಿಸಲಾಗಿದೆ. ಇದರಲ್ಲಿ ಇಲ್ಲಿವರೆಗೆ ಸಿಕ್ಕಿರುವಂತಹ ಸ್ಯಾಂಪಲ್​ಗಳ ಮೇಲೆ ಮಾತ್ರ ತನಿಖೆ ನಡೆಯುತ್ತದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. 

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಪ್ರಕರಣದಲ್ಲಿ ನಾವು ಏನನ್ನೂ‌ ಮುಚ್ಚಿಡುವುದಿಲ್ಲ, ಮುಚ್ಚಿಡುವ ಅವಶ್ಯಕತೆಯೂ ನಮಗಿಲ್ಲ. ಇದರಿಂದ ಬೇರೆ ಉದ್ದೇಶಗಳು‌ ನಮಗಿಲ್ಲ. ಧರ್ಮಸ್ಥಳ ಕೇಸ್ ತುಂಬಾ ಸೂಕ್ಷ್ಮವಾದ ವಿಚಾರ. ಧರ್ಮಸ್ಥಳದಲ್ಲಿ ತನಿಖೆ ಆರಂಭಿಸುವಾಗ ಬಿಜೆಪಿಯವರು ಮೊದಲು ಏನೂ ಹೇಳಿರಲಿಲ್ಲ. 15 ದಿನಗಳಿಂದ ನೀವು ಮಾತನಾಡ್ತಿದ್ದೀರಾ?. ನಿಮಗೆ ತನಿಖೆ ಸರಿಯಾಗಿ ಮಾಡಬೇಕಾ, ಸತ್ಯ ಹೊರಗೆ ಬರಬೇಕಾ?, ಅದಕ್ಕೆ ಸಮಯ ಬೇಕು ಅಲ್ವಾ?. ಅಲ್ಲಿ ಏನೂ ಆಗಿಯೇ ಇಲ್ಲ ಅಂತ ಹೇಳೋಕೆ ಆಗಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. 

ಸದ್ಯ ತನಿಖೆಯೂ ತುಂಬಾ ಗಂಭೀರವಾಗಿ ನಡೆಯುತ್ತಿದೆ. ದೂರುದಾರ ಹೇಳಿದ ಸ್ಥಳಗಳಲ್ಲಿ ಅಗೆಯಲಾಗಿದೆ, ಮುಂದೆ ಅಗೆಯುವ ಕೆಲಸ ಸರ್ಕಾರ ಮಾಡಲ್ಲ. ಏಕೆಂದರೆ ಅದನ್ನು ಎಸ್​ಐಟಿ ನಿರ್ಧಾರ ಮಾಡುತ್ತದೆ. ಸಿಕ್ಕಿರುವ ಅಸ್ಥಿಪಂಜರಗಳ ಕೆಮಿಕಲ್, ಡಿಎನ್​ಎ ಅನಾಲಿಸಿಸ್ ಮಾಡಬೇಕು. ಎಫ್​ಎಸ್​ಎಲ್ ಯಿಂದ ವರದಿ ಬರುವವರೆಗೂ ತಾತ್ಕಾಲಿಕವಾಗಿ ಎಸ್​ಐಟಿಯಿಂದಲೇ ತನಿಖೆ ಸ್ಥಗಿತ ಮಾಡಲಾಗುತ್ತದೆ. ಎಫ್​ಎಸ್​ಎಲ್ ಯಿಂದ ವರದಿ  ಬಂದ ಬಳಿಕ ತನಿಖೆ ಮತ್ತೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.  

ಇದನ್ನೂ ಓದಿ: FSL ವರದಿ ಬರುವವರೆಗೂ ಎಸ್​ಐಟಿಯಿಂದ ತನಿಖೆ ತಾತ್ಕಾಲಿಕ ಸ್ಥಗಿತ; ಡಾ.ಜಿ ಪರಮೇಶ್ವರ್

DHARMASTALA_NEW

ಧರ್ಮಸ್ಥಳ ಪ್ರಕರಣದಲ್ಲಿ ನಾವು ರಾಜಕೀಯ ಬೆರೆಸುವುದು ಬೇಡ. ಧರ್ಮದ ಹೆಸರಲ್ಲಿ ಈ ರೀತಿ ಮಾಡಬಾರದು. ನಾವು ನ್ಯಾಯಕ್ಕೆ ಎಲ್ಲವನ್ನ ಬಿಡೋಣ, ಸತ್ಯ ಹೊರಗಡೆ ಬರಲಿ. ಸತ್ಯ ಹೊರ ಬಂದಾಗ ನಾವು, ನೀವು, ಜನ ಸಾಮಾನ್ಯರು ಒಪ್ಪಬೇಕಾಗುತ್ತದೆ. ಅದನ್ನ ಬೇರೆ ಬೇರೆ ರೀತಿ ಅರ್ಥೈಸೋದು ಸರಿಯಲ್ಲ. ನಾನು ಇದರ ಬಗ್ಗೆ ಹೆಚ್ಚು ಮಾತನಾಡಲ್ಲ, ತನಿಖೆ ನಡೆಯುತ್ತಿರುವಾಗ ನಾನು ಏನು ಹೇಳಲ್ಲ. ಇಲ್ಲಿಯವರೆಗೆ ಮಧ್ಯಂತರ ವರದಿ ಬಂದಿಲ್ಲ. ಆ ಬಗ್ಗೆ ವರದಿ ಬಂದಿದ್ದರೆ ಮಾಹಿತಿ ಕೊಡುತ್ತಿದ್ದೆ ಎಂದು ಹೇಳಿದ್ದಾರೆ.

ವೀರೇಂದ್ರ ಹೆಗ್ಗಡೆ ಅವರಿಗೆ ಸರ್ಕಾರದಿಂದ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಅವರ ಮೇಲೆ ಗೂಬೆ ಕೂರಿಸೋದು ಸರಿಯಲ್ಲ. ಸತ್ಯ ಹೊರಗೆ ಬರಬೇಕು ಅಷ್ಟೇ. ನಾವು ಏನನ್ನೂ‌ ಮುಚ್ಚಿಡಲ್ಲ, ಮುಚ್ಚಿಡುವ ಅವಶ್ಯಕತೆ ಇಲ್ಲ. ಇದರಿಂದ ಬೇರೆ ಉದ್ದೇಶಗಳು‌ ನಮಗಿಲ್ಲ. ಬೇರೆ ವಿಚಾರಗಳನ್ನ ಇಲ್ಲಿ ಮಾತನಾಡಲ್ಲ. ದೂರುದಾರ ತೆಗೆದುಕೊಂಡು ಬಂದಿದ್ದ ಬುರುಡೆಯನ್ನ ಪರೀಕ್ಷೆಗೆ ಎಫ್​ಎಸ್​​ಎಲ್​ಗೆ ಕಳುಹಿಸಲಾಗಿದೆ. ಸದ್ಯ ಸಿಕ್ಕಿರುವ ಎಲ್ಲ ಅಸ್ಥಿಪಂಜರ, ಮೂಳೆಗಳ ಬಗ್ಗೆ  ಅನಾಲಿಸಿಸ್​ ನಡೆಯಬೇಕು. ಇನ್ನು ತನಿಖೆ ಆಗಬೇಕಿದೆ ಎಂದು  ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್  ಹೇಳಿದ್ದಾರೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala Dharmasthala case Dr G Parameshwar
Advertisment