/newsfirstlive-kannada/media/media_files/2025/11/21/dk-shivakumar-4-2025-11-21-15-05-24.jpg)
ಬೆಂಗಳೂರು: ‘ಐ ವಿಶ್ ಹಿಮ್ ಆಲ್ ದಿ ಬೆಸ್ಟ್’ಅಂತಾ ಸಿಎಂ ಸಿದ್ದರಾಮಯ್ಯಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್​ನಲ್ಲಿ ‘ಪವರ್ ಶೇರಿಂಗ್’ ಗಲಾಟೆ ಎದ್ದಿದೆ. ಡಿ.ಕೆ.ಶಿವಕುಮಾರ್​ ಬೆಂಬಲಿಗರು ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಐದು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮತ್ತೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಪವರ್ ಶೇರಿಂಗ್ ಗೊಂದಲ -ಹೈಕಮಾಂಡ್ ಮಧ್ಯಪ್ರವೇಶಕ್ಕೆ ಮುನಿಯಪ್ಪ ಆಗ್ರಹ..!
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ನಾನು ಅವರಿಗೆ ಶುಭಾಶಯವನ್ನು ಕೋರುತ್ತೇನೆ ಎಂದಿದ್ದಾರೆ. ನನ್ನ ಜೀವಮಾನದಲ್ಲಿ ಯಾವುದೇ ಬಣದ ನಾಯಕ ನಾನಲ್ಲ. ನನ್ನ ಜೀವನದಲ್ಲಿ ಗುಂಪುಗಾರಿಕೆ ಅನ್ನೋದೇ ಇಲ್ಲ. ನಾನು 140 ಶಾಸಕರ ಅಧ್ಯಕ್ಷ ಎಂದು ಖಡಕ್​ ಆಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಮತ್ತು ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದೇನೆ. ಅದಕ್ಕೆ ಈಗಲೂ ನಾವು ಬದ್ಧ. ಸಿಎಂ ಸಂಪುಟ ಪುನಾರಚನೆ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಸಚಿವಾಕಾಂಕ್ಷಿಗಳು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಪ್ರತಿಯೊಬ್ಬನಿಗೂ ಮಂತ್ರಿಯಾಗುವ, ಶಾಸಕನಾಗುವ, ದೆಹಲಿ ನಾಯಕರನ್ನು ಭೇಟಿ ಮಾಡುವ, ತಮ್ಮ ಅಹವಾಲುಗಳನ್ನ ಹೇಳಿಕೊಳ್ಳುವ ಹಕ್ಕಿದೆ. ಹೀಗಾಗಿ ಅವರು ದೆಹಲಿಗೆ ಹೋಗಿದ್ದಾರೆ ಅನ್ನೋ ಮೂಲಕ ಶಾಸಕರ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಸಾಕಷ್ಟು ಔತಣಕೂಟ ಆಗಿವೆ. ನಾಲ್ವರು ಡಿಸಿಎಂಗಳನ್ನ ಮಾಡಬೇಕು, ಮಂತ್ರಿಮಂಡಳದಲ್ಲಿ ತಮ್ಮನ್ನ ಸೇರಿಸಿಕೊಳ್ಳಬೇಕು. ಅಧ್ಯಕ್ಷ ಸ್ಥಾನ ಬದಲಾಯಿಸಬೇಕು, ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಾಕಷ್ಟು ಡಿನ್ನರ್ ಸಭೆ ಆಗಿದೆ. ಅದರ ಒಂದು ಭಾಗವೇ ಇದು ಎಂದಿದ್ದಾರೆ.
ಇದನ್ನೂ ಓದಿ: ಪವರ್ ಶೇರಿಂಗ್ ಗೊಂದಲ -ಹೈಕಮಾಂಡ್ ಮಧ್ಯಪ್ರವೇಶಕ್ಕೆ ಮುನಿಯಪ್ಪ ಆಗ್ರಹ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us