/newsfirstlive-kannada/media/media_files/2025/11/22/hd-devegowda-2025-11-22-07-22-46.jpg)
ಬಿಜೆಪಿ, ಕಾಂಗ್ರೆಸ್​.. ಹೀಗೆ ಎಲ್ಲಾ ರಾಷ್ಟ್ರೀಯ ಪಕ್ಷಗಳ ಮಧ್ಯೆ ಉದಯವಾಗಿದ್ದೇ ಜನತಾ ದಳ. ಸದ್ಯ ಜೆಡಿಎಸ್​ಗೆ 25 ವಸಂತಗಳ ಸಂಭ್ರಮ. ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಸಂಭ್ರಮಾಚರಣೆ ಮನೆ ಮಾಡಿದ್ದು ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದಾಗೆ ಇಂದು ಜೆಡಿಎಸ್​ ಬೃಹತ್ ಸಮಾವೇಶ ನಡೆಯಲಿದ್ದು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ದಳಪತಿಗಳು ಮುಂದಾಗಿದ್ದಾರೆ. ಜೊತೆಗೆ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಹೆಚ್.ಡಿ ಕುಮಾರಸ್ವಾಮಿ ಮುಂದುವರೆಯಲು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತೀರ್ಮಾನಿಸಲಾಗಿದೆ. ಮುಂದಿನ 2 ತಿಂಗಳು ಎಲ್ಲಾ ಕ್ಷೇತ್ರಗಳಲ್ಲೂ ಬೆಳ್ಳಿ ಹಬ್ಬ ಅಂದ್ರೆ ರಜತ ಮಹೋತ್ಸವ ಆಚರಿಸಿ ಪಕ್ಷ ಸಂಘಟಿಸಲು ನಿರ್ಧರಿಸಲಾಗಿದೆ. ಮುಂದೆ ಜಿಲ್ಲಾ, ತಾಲ್ಲೂಕು ಪಂಚಾಯತ್, ಜಿಬಿಎ ಚುನಾವಣೆಗಳಿದ್ದು ತಯಾರಾಗಬೇಕಿದೆ. ಬೆಳ್ಳಿ ಹಬ್ಬದ ಮೂಲಕ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡಿ, ಜನರ ವಿಶ್ವಾಸ ಗಳಿಸಲು ತೀರ್ಮಾನಿಸಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡ ಶಪಥ
2028ಕ್ಕೆ ನಮ್ಮದೇ ಆಡಳಿತ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಶಪಥ ಮಾಡಿದ್ದಾರೆ. ರಜತ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪಕ್ಷದ ವಿರುದ್ದ ಮಾತನಾಡಿದವರ ವಿರುದ್ಧ ಕಿಡಿಕಾರಿದ್ರು. ಈಗ ಮುಖ್ಯಮಂತ್ರಿಯಾದವರೇ ಅವತ್ತು ನಮ್ಮ ಸರ್ಕಾರ ತೆಗೆದು ಹಾಕಿದ್ರು. ಆಗ 18 ಜನರನ್ನ ದೆಹಲಿಗೆ ಕಳುಹಿಸಿದ್ರು. 2 ಬಾರಿ ಮುಖ್ಯಮಂತ್ರಿ ಆಗಿ ಕುಮಾರಸ್ವಾಮಿ ಅನುಭವ ಪಡೆದಿದ್ದಾರೆ. ರಾಜ್ಯದ ಸಮಸ್ಯೆ ಅವರಿಗೆ ಗೊತ್ತಿದ್ದು ಜೆಡಿಎಸ್ ಮತ್ತೆ ತಲೆ ಎತ್ತಿ ನಿಲ್ಲಬೇಕೆಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ಮತ್ತೊಂದು ದಾಳ.. ದಿಢೀರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ..!
/filters:format(webp)/newsfirstlive-kannada/media/media_files/2025/09/08/hdk-on-madduru-2025-09-08-15-20-00.jpg)
2028ಕ್ಕೆ ನಮ್ಮದೇ ಆಡಳಿತ. ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಯುವ ಸಂಘಟನೆ ಮಾಡುವ ಮೂಲಕ ನಿಖಿಲ್ ಕುಮಾರಸ್ವಾಮಿ ಓಡಾಡ್ತಿದ್ದಾರೆ. ನಾವು ಎನ್ಡಿಎ ಜೊತೆ ಮೈತ್ರಿಯಲ್ಲಿದ್ದೇವೆ ನಿಜ, ಇದ್ರಲ್ಲಿ ಮುಚ್ಚುಮರೆ ಇಲ್ಲ. 26 ಸಾವಿರ ಕೋಟಿ ರೈತರ ಸಾಲಮನ್ನವನ್ನ ಕುಮಾರಸ್ವಾಮಿ ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಯ ನಾಡಿಮಿಡಿತ ಕುಮಾರಸ್ವಾಮಿಗೆ ಗೊತ್ತಿದೆ. 14-15 ತಿಂಗಳಲ್ಲಿ ಕುಮಾರಸ್ವಾಮಿ ರಾಜ್ಯಕ್ಕೆ ಏನು ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ. ಸರ್ಕಾರ ತೆಗೆದ ಸಿದ್ದರಾಮಯ್ಯ ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವ್ರೆಲ್ಲಾ ಸೇರಿ ಏನೇಲ್ಲಾ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿದೆಹೆಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಜೆಡಿಎಸ್ ರಜತ ಮಹೋತ್ಸವ ಬಗ್ಗೆ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪ್ರಾದೇಶಿಕ ಪಕ್ಷವನ್ನ ಚುನಾವಣೆಗಾಗಿ ಅಥವಾ ಅಧಿಕಾರ ಸಿಗಲಿಲ್ಲಾ ಎಂಬ ಕೋಪಕ್ಕೆ ಎಂದು ಪ್ರಾದೇಶಿಕ ಪಕ್ಷ ಕಟ್ಟಿ ವಾಪಸ್ಸು ಬಂದಿದ್ದಾರೆ. ಆದ್ರೆ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಲವಾಗಿದೆ. ದೇವೇಗೌಡರ ಹೋರಾಟ, ವಿಚಾರ ಸಾಧನೆಗಳನ್ನ ಕುಮಾರಸ್ವಾಮಿ ಮುಂದುವರೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರೋದಕ್ಕೆ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ತಿವಿ. 2028ಕ್ಕೆ ಜೆಡಿಎಸ್​ಗೆ ಸಂಪೂರ್ಣ ಬಹುಮತ ಸಿಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಜೆಡಿಎಸ್ ಪಕ್ಷಕ್ಕೆ 25 ವರ್ಷ ತುಂಬಿದೆ. ಈ ಮೂಲಕ ಪಕ್ಷಕ್ಕೆ ಮತ್ತಷ್ಟು ಹುರುಪು ತುಂಬಲು ದಳಪತಿಗಳು ನಿರ್ಧಾರ ಮಾಡಿದ್ದಾರೆ. ಅದ್ರಲ್ಲೂ 2028ಕ್ಕೆ ಪಕ್ಷವನ್ನ ಅಧಿಕಾರಕ್ಕೆ ತರಲು ರಾಜ್ಯಪ್ರವಾಸ ಮಾಡಲು ಮುಂದಾಗಿದ್ದು, ಪಕ್ಷ ಕಟ್ಟಲು ನಾಯಕರಿಗೆ, ಕಾರ್ಯಕರ್ತರಿಗೆ ದೇವೇಗೌಡ್ರು ಕರೆ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us