/newsfirstlive-kannada/media/media_files/2025/10/08/hdk-2025-10-08-13-02-16.jpg)
ಬೆಂಗಳೂರು: ಬಿಗ್​ಬಾಸ್ ಶೋಗೆ ಬೀಗ ಹಾಕಿದ ಬೆನ್ನಲ್ಲೇ X ನಲ್ಲಿ ಜೆಡಿಎಸ್ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದಿದೆ. ‘ನಿಯಮಗಳ ಉಲ್ಲಂಘನೆ ನೆಪದಲ್ಲಿ ಬಿಡದಿಯ ಬಿಗ್​ಬಾಸ್ ಮನೆಗೆ ಬೀಗ ಹಾಕಿಸಿದ್ದೀರಿ, ಒಪ್ಪಿಕೊಳ್ಳೋಣ.. ಆದ್ರೆ ಅದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ ಎಂದು ಜೆಡಿಎಸ್​ ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಬೆರಳು ಮಾಡಿ ತೋರಿಸಿದೆ.
ಸಮಸ್ಯೆಗಳ ಅನಾವರಣ
ಇದೊಂದೇ ಅಲ್ಲಾ.. ಬೆಲೆ ಏರಿಕೆ, ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ, ಹೈಕಮಾಂಡ್​ಗೆ ಕಪ್ಪ ಒಪ್ಪಿಸುವುದು, 60% ಕಮಿಷನ್ ದಂದೆ, ಕ್ಯಾಸಿನೋ ದಂದೆ ಹಾಗೂ ಭ್ರಷ್ಟಾಚಾರದ ಕೂಪಗಳಾಗಿರುವ ಸರ್ಕಾರಿ ಇಲಾಖೆ, ಕಚೇರಿಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ? ಎಂದು ತೆನೆ ಹೊತ್ತ ಮಹಿಳೆ ನೇರವಾಗಿ ಸರ್ಕಾರಕ್ಕೆ ಬಟ್ಟು ಮಾಡಿ ತೋರಿಸಿದ್ದಾರೆ. ಇದಲ್ಲದೇ ‘ಕೈಲಾಗದವರು ಮೈಪರಚಿ ಕೊಂಡಂತೆ ಇದೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರಕ್ಕೆ 9 ಪ್ರಶ್ನೆ
- ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸ್ತೀರಿ?
- ರಾಜ್ಯದ ರೈತರ ಆತ್ಮಹ*ಗಳನ್ನು ಯಾವಾಗ ಬಂದ್ ಮಾಡಿಸ್ತೀರಿ?
- ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಬೀಗ ಯಾವಾಗ?
- ಜನರ ಪಿಕ್ ಪಾಕೆಟ್ ಮಾಡ್ತಿರುವ ನಿಮ್ಮ ಸರ್ಕಾರಕ್ಕೆ ಬೀಗ ಯಾವಾಗ?
- ಉತ್ತರ ಕರ್ನಾಟಕದಲ್ಲಿ ನೆರೆ ತಡೆಯಲು ಯಾವ ರೀತಿ ಬೀಗ ಹಾಕಿಸ್ತೀರಿ?
- ತೆರಿಗೆಯಲ್ಲಿ ಹೈಕಮಾಂಡ್​ಗೆ ಕಪ್ಪ ಕೋಡೋದನ್ನ ನಿಲ್ಲಿಸೋದು ಯಾವಾಗ?
- ಸರ್ಕಾರದ 60% ಕಮಿಷನ್ ದಂದೆಗೆ ಯಾವಾಗ ಬೀಗ ಹಾಕುತ್ತೀರಾ?
- ನಿಮ್ಮ ಶಾಸಕರ, ಪುಢಾರಿಗಳ ಕ್ಯಾಸಿನೋ ದಂದೆ, ಅಕ್ರಮಗಳಿಗೆ ಬೀಗ ಯಾವಾಗ?
- ಭ್ರಷ್ಟಾಚಾರದ ಕೂಪಗಳಾಗಿರುವ ಇಲಾಖೆ, ಕಚೇರಿಗಳಿಗೆ ಬೀಗ ಯಾವಾಗ?
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us