/newsfirstlive-kannada/media/media_files/2025/09/09/amit-shah-and-vijayendra-2025-09-09-07-58-57.jpg)
ಧರ್ಮಸ್ಥಳ ಬುರುಡೆ ಗ್ಯಾಂಗ್ ಬೆನ್ನಬಿದ್ದಿರೋ ಎಸ್‌ಐಟಿ ಸತ್ಯಶೋಧನೆಯಲ್ಲಿ ತೊಡಗಿದೆ. ಬುರುಡೆ ಗ್ಯಾಂಗ್‌ಗೆ ಬಿಸಿನೀರು ಕಾಯಿಸಿ ಸತ್ಯವನ್ನ ಬಯಲು ಮಾಡ್ತಿದೆ. ಬುರುಡೆ ಚಿನ್ನಯ್ಯನಿಂದ ಹಿಡಿದು ಯೂಟ್ಯೂಬ್ ಚಾನೆಲ್ ಮೂಲಕ ನಡೆಸಿದ ಷಡ್ಯಂತ್ರವನ್ನ ಬಹಿರಂಗ ಪಡಿಸುತ್ತಿದೆ. ಇದ್ರ ಮಧ್ಯೆ ಧರ್ಮಸ್ಥಳ ಪ್ರಕರಣ ದೆಹಲಿಯನ್ನ ತಲುಪಿದೆ. ಬಿಜೆಪಿ ನಿಯೋಗ ಹೈಕಮಾಂಡ್ ಮುಂದೆ ಷಡ್ಯಂತ್ರದ ವರದಿ ಒಪ್ಪಿಸಿದೆ.
ಕೇಸರಿ ಹೈಕಮಾಂಡ್ ಅಂಗಳ ತಲುಪಿದ ಧರ್ಮಸ್ಥಳ ಪ್ರಕರಣ!
ಧರ್ಮಸ್ಥಳದ ವಿರುದ್ಧ ಮಾಡ್ತಿರೋ ಅಪಪ್ರಚಾರದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಧರ್ಮಸ್ಥಳ ಚಲೋ ಮಾಡಿ ಬುರುಡೆ ಷಡ್ಯಂತ್ರದ ವಿರುದ್ಧ ಕಿಡಿಕಾರುತ್ತಲೇ ಇದೆ. ಇದ್ರ ಮಧ್ಯೆ ರಾಜ್ಯ ಬಿಜೆಪಿ ನಿಯೋಗ ನಿನ್ನೆ ದೆಹಲಿಯಾತ್ರೆ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ ಭೇಟಿ ಮಾಡಿದೆ. ಧರ್ಮಸ್ಥಳದ ಪ್ರಕರಣವನ್ನ ಹೈ ನಾಯಕರ ಕಿವಿಗೆ ಹಾಕಿದೆ.
ಬಿಜೆಪಿ ‘ಹೈ’ಗೆ ‘ಧರ್ಮಸ್ಥಳ’ ವರದಿ
ಧರ್ಮಸ್ಥಳ ವಿಚಾರ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ್ದು, ಶ್ರೀಕ್ಷೇತ್ರದ ವಿರುದ್ಧ ಹೆಣೆದಿರುವ ಷಡ್ಯಂತ್ರದ ಬಗ್ಗೆ ಹೈಕಮಾಂಡ್ಗೆ ವರದಿ ಸಲ್ಲಿಕೆಯಾಡಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ನಿಯೋಗ ‘ಹೈ ಕಮಾಂಡ್ ನಾಯಕರನ್ನ ಭೇಟಿ ಮಾಡಿ ವರದಿ ಸಲ್ಲಿಕೆ ಮಾಡಿದೆ. ಸಂಪೂರ್ಣ ವರದಿಯನ್ನ ಗೃಹ ಸಚಿವ ಅಮಿತ್ ಶಾಗೆ ಸಲ್ಲಿಸಿ ವಿವರಣೆ ನೀಡಿದ್ದಾರೆ.
ಕೇಂದ್ರ ಗೃಹಸಚಿವರಿಗೆ ಮಾಹಿತಿ ನೀಡಿದ್ದಾಗಿ ಬಿವೈವಿ ಹೇಳಿಕೆ
ರಾಜ್ಯದಲ್ಲಿ ನಡೆಯುತ್ತಿರೋ ಬೆಳವಣಿಗೆ ಹಾಗೂ ಧರ್ಮಸ್ಥಳ ಪ್ರಕರಣದ ಬಗ್ಗೆ ಬಿಜೆಪಿ ನಿಯೋಗ ಗೃಹ ಸಚಿವ ಅಮಿತ್ ಶಾಗೆ ಮಾಹಿತಿ ನೀಡಿದೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರೋ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರೋ ಬಗ್ಗೆ ಅಮಿತ್ ಶಾರಿಗೆ ಮಾಹಿತಿ ನೀಡಿದ್ದೇವೆ ಅಂತ ತಿಳಿಸಿದ್ದಾರೆ.
ಧರ್ಮಸ್ಥಳ ವಿರುದ್ಧದ ಬುರುಡೆಯ ಅಸಲಿ ಸತ್ಯಗಳು ಒಂದೊಂದಾಗೇ ಹೊರ ಬರುತ್ತಿದ್ದು, ಎಸ್‌ಐಟಿ ಬುರುಡೆ ಗ್ಯಾಂಗ್ನ ಜನ್ಮವನ್ನು ಜಾಲಾಡುತ್ತಿದೆ. ಇದ್ರ ಮಧ್ಯೆ ಬಿಜೆಪಿ ಧರ್ಮಸ್ಥಳವನ್ನ ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಸರ್ಕಾರಕ್ಕೂ ಚಾಟಿ ಬೀಸುತ್ತಿದೆ.
ಇದನ್ನೂ ಓದಿ:ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಜೈಲುಪಾಲು, ಸೆಪ್ಟೆಂಬರ್ 22 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್