/newsfirstlive-kannada/media/media_files/2025/09/05/cm_siddaramaiah_evm-2025-09-05-08-18-58.jpg)
ದೇಶದಲ್ಲಿ ಎರಡೇ ಚರ್ಚೆ, ಒಂದು ಜಿಎಸ್ಟಿ, ಇನ್ನೊಂದು ವೋಟ್ ಚೋರಿ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಮಧ್ಯೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ದಾಳ ಉರುಳಿಸಿದೆ. ಅಷ್ಟೇ ಅಲ್ಲ, ಸಂಪುಟ ಸಭೆಯಲ್ಲಿ ಹಲವು ವಿಚಾರಗಳಲ್ಲಿ ಹೊಸ ನಿರ್ಧಾರಗಳನ್ನ ತಳೆದಿದೆ.
ಕಾಂಗ್ರೆಸ್ ಪಕ್ಷಕ್ಕೆ ದೇಶದ ಚುನಾವಣಾ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ. ಇವಿಎಂ ಮೇಲಂತೂ ಎಳ್ಳಷ್ಟು ವಿಶ್ವಾಸವಿಲ್ಲ. ಹೀಗಾಗಿ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧವೇ ಕೈ ನಾಯಕ ರಾಹುಲ್ ಗಾಂಧಿ ಸಿಡಿದೆದ್ದಿದ್ದಾರೆ. ಇದೇ ವಿಚಾರ ಇಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ ನಡೆಸ್ತಿದ್ದಾರೆ. ಇದ್ರ ಮಧ್ಯೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಚುನಾವಣೆ ವಿಚಾರದಲ್ಲಿ ಹೊಸ ನಿಲುವು ತಳೆದಿದೆ.
‘ಇವಿಎಂ ಸಾಕು, ಬ್ಯಾಲೆಟ್ ಪೇಪರ್ ಬೇಕು.. ಸಂಪುಟ ಶಿಫಾರಸು
ರಾಹುಲ್ ಗಾಂಧಿ ಸರಣಿಯಾಗಿ ಮತಗಳ್ಳತನ ಆರೋಪ ಮಾಡಿದ್ದು, ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸ್ತಾನೆ ಇದೆ. ಈ ಮಧ್ಯೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರಗಳನ್ನ ಕೈಗೊಂಡಿದೆ. ಇವಿಎಂ ಸಾಕು, ಬ್ಯಾಲೆಟ್ ಪೇಪರ್ ಬೇಕು ಅಂತ ಚುನಾವಣೆ ಆಯೋಗಕ್ಕೆ ಸಂಪುಟದಿಂದ ಶಿಫಾರಸು ಮಾಡಿದೆ. ಸದ್ಯಕ್ಕೆ ಗ್ರಾಮ ಪಂಚಾಯ್ತಿಯಲ್ಲಿ ಮಾತ್ರ ಬ್ಯಾಲೇಟ್ ಬಳಕೆಯಲ್ಲಿದೆ. ಪುರಸಭೆ, ನಗರಸಭೆ, ಪಾಲಿಕೆ ಎಲೆಕ್ಷನ್ನಲ್ಲಿ ಇವಿಎಂ ಪ್ರಯೋಗ ನಡೆದಿದೆ.
ಬ್ಯಾಲೆಟ್ ಮೇಲೆ ಭರವಸೆ!
- ಇತ್ತೀಚೆಗೆ ಮತದಾರರ ಪಟ್ಟಿ ತಯಾರಿಕೆಯಲ್ಲಿ ಬದಲಾವಣೆಯಾಗಿದೆ
- ಮತಗಳ್ಳತನ ಚರ್ಚೆ ಆಗ್ತಿದ್ದು, ಇವಿಎಂ ಬಗ್ಗೆ ಜನರಲ್ಲಿ ವಿಶ್ವಾಸ ಕುಗ್ಗಿದೆ
- ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ಗೆ ಆದ್ಯತೆ ನೀಡಿ
- ಇವಿಎಂ ಬದಲು ಬ್ಯಾಲೆಟ್ ಪೇಪರ್ ಜಾರಿಗೆ ನಿಯಮಗಳನ್ನು ರೂಪಿಸಿ
- ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲು ಸಂಪುಟ ಒಪ್ಪಿದೆ
- ಈ ಪ್ರಕ್ರಿಯೆಯಲ್ಲಿ ಅಗತ್ಯ ಕಾನೂನು ತಿದ್ದುಪಡಿ ಮಾಡುವಂತೆ ಮನವಿ
ಸರ್ಕಾರಿ ಶಾಲಾ ಮಕ್ಕಳಿಗೆ 5 ದಿನ ರಾಗಿ ಮಾಲ್ಟ್ ವಿತರಣೆ
ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ, ಬಾಳೆಹಣ್ಣು ನೀಡ್ತಿದ್ದ ಸರ್ಕಾರ, ಇದೀಗ ಮತ್ತೊಂದು ಮಹತ್ವದ ನಿರ್ಧಾರ ಮಾಡಿದೆ. ಸರ್ಕಾರಿ ಶಾಲೆಗಳ ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಾರಕ್ಕೆ ಮೂರು ದಿನದ ಬದಲು ಐದು ದಿನ ರಾಗಿ ಮಾಲ್ಟ್ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ರಾಗಿ ಮಾಲ್ಟ್ ವಿತರಿಸುವ ಬಗ್ಗೆ ಸಂಪುಟ ಒಪ್ಪಿಗೆ ನೀಡಿದೆ.
ಇದನ್ನೂ ಓದಿ:ಅಮೆರಿಕ ಅಧ್ಯಕ್ಷರು ಆಯೋಜಿಸುವ ಡಿನ್ನರ್ ಪಾರ್ಟಿಯಲ್ಲಿ ಭಾರತೀಯ ಮೂಲದ ಟಾಪ್- 5 CEO ಹೆಸರು
/filters:format(webp)/newsfirstlive-kannada/media/media_files/2025/08/08/cm-siddaramaiah-2025-08-08-16-35-30.jpg)
ಮುಡಾ ಅಕ್ರಮ.. ಸಿಎಂ ಮತ್ತು ಕುಟುಂಬಕ್ಕೆ ಕ್ಲೀನ್‌ಚಿಟ್!
ಸಚಿವ ಸಂಪುಟ ಸಭೆಯಲ್ಲಿ ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮ್ಯಯ ಮತ್ತು ಅವರ ಕುಟುಂಬಕ್ಕೆ ಕ್ಲೀನ್‌ಚಿಟ್ ನೀಡಲಾಗಿದೆ. ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಆಯೋಗದ ವರದಿಯನ್ನ ಆಧರಿಸಿ ಕ್ಲೀನ್ ಚಿಟ್ ನೀಡಲಾಗಿದೆ. ಅಲ್ಲದೇ ಮುಡಾ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಅದರಲ್ಲಿ 2025ರ ವರ್ಷಾಂತ್ಯದೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ನವೆಂಬರ್ ವೇಳೆಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ